ಸೊಸೆಯಿಂದ ಅತ್ತೆಯ ಮೇಲೆ ಕ್ರೂರ ಹಲ್ಲೆ: ಸಾಫ್ಟ್‌ವೇರ್ ಎಂಜಿನಿಯರ್ ಬಂಧನ

ಸೊಸೆಯೊಬ್ಬಳು ತನ್ನ ಅತ್ತೆಯ ಮೇಲೆ ದಾಳಿ ಮಾಡಿ ಕ್ರೂರವಾಗಿ ಹಲ್ಲೆ ನಡೆಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

ಈ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನ ಕವಿ ನಗರದಲ್ಲಿ ನಡೆದಿದೆ. ಅತ್ತೆ ವಯಸ್ಸಾದವಳು ಎಂದು ಪರಿಗಣಿಸದೆ ಅವಳ ಮೇಲೆ ನಿರ್ದಯವಾಗಿ ಹಲ್ಲೆ ನಡೆಸಿದ ಮಹಿಳೆ ಉನ್ನತ ವ್ಯಾಸಂಗ ಮಾಡಿ ಸಾಫ್ಟ್ವೇರ್ ಉದ್ಯೋಗದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಎಂಬುದು ಆಶ್ಚರ್ಯಕರವಾಗಿದೆ
ಅಕಾಂಕ್ಷಾ ಎಂಬ ಸಾಫ್ಟ್ವೇರ್ ಎಂಜಿನಿಯರ್ ತನ್ನ ಅತ್ತೆಯೊಂದಿಗೆ ಜಗಳದಿಂದಾಗಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಜಗಳ ನಡೆದ ಸಮಯದಲ್ಲಿ ಪತಿ ಮನೆಯಲ್ಲಿ ಇರಲಿಲ್ಲ ಎಂದು ತೋರುತ್ತದೆ. ಈ ಘಟನೆ ಜೂನ್ 30 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ಪೊಲೀಸರು ಸೊಸೆಯ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ನೆಟ್ಟಿಗರು ಆಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.
