ರೆಸ್ಟೋರೆಂಟ್‌ನಲ್ಲಿ ಅಣ್ಣ-ತಂಗಿಗೆ ಪೊಲೀಸ್ ಕಿರುಕುಳ, ಎಸ್‌ಎಚ್‌ಒ ಅಮಾನತು

ಪಾಟ್ನಾ: ಬಿಹಾರದ ರೆಸ್ಟೋರೆಂಟ್‌ನಲ್ಲಿ ಕುಳಿತಿದ್ದ ಅಣ್ಣ-ತಂಗಿಗೆ ಪೊಲೀಸರು ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ. ಕೂಡಲೇ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಈ ಘಟನೆ ಅಕ್ಟೋಬರ್ 24ರಂದು ನಡೆದಿದೆ. ಎಸ್‌ಎಚ್‌ಒ ಊಟಕ್ಕೆಂದು ಕುಳಿತಿದ್ದ ಅಣ್ಣ-ತಂಗಿ ಬಳಿ ಬರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ನಿನ್ನೊಂದಿಗೆ ಕುಳಿತಿರುವವರು ಯಾರು ಎಂದು ಆ ಯುವಕನಿಗೆ ಪ್ರಶ್ನೆ ಮಾಡಿದ್ದಾರೆ, ಆತ ತನ್ನ ತಂಗಿ ಎಂದು ಹೇಳಿದ್ದಾನೆ.ಕೂಡಲೇ ಪೊಲೀಸ್ ಅಧಿಕಾರ ಏರು ಧ್ವನಿಯಲ್ಲಿ ಮಾತನಾಡಲು ಶುರು ಮಾಡಿದ್ದಾರೆ. ಜತೆಗೆ ಇನ್ನೂ ಮೂರು ಪೊಲೀಸರು ಕೂಡ ಅವರೊಂದಿಗೆ ಸೇರಿಕೊಂಡಿದ್ದಾರೆ.
ಇಬ್ಬರ ನಡುವೆ ವಾಗ್ವಾದ ನಡೆದಿದೆ. ರೆಸ್ಟೋರೆಂಟ್‌ನಲ್ಲಿರುವ ಇತರ ಗ್ರಾಹಕರು ಘರ್ಷಣೆಯನ್ನು ವೀಕ್ಷಿಸುತ್ತಿರುವುದನ್ನು ಕಾಣಬಹುದು, ಆದರೆ ಹತ್ತಿರದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದ್ದಾರೆ.