11 ವರ್ಷಗಳ ಹಿಂದಿನ ₹5 ಶೇಂಗಾ ಸಾಲ ತೀರಿಸಲು ಅಮೆರಿಕದಿಂದ ಬಂದ ಅಣ್ಣ-ತಂಗಿ

ನವದೆಹಲಿ: ಸೋಶಿಯಲ್ ಮೀಡಿಯಾದಲ್ಲಿ ಸಾಲ ಹಿಂದಿರುಗಿಸಲು ಇಬ್ಬರು ಅಮೆರಿಕದಿಂದ ಭಾರತಕ್ಕೆ ಬಂದಿರುವ ಫೋಟೋ ಕಳೆದೊಂದು ವಾರದಿಂದ ವೈರಲ್ ಆಗುತ್ತಿದೆ. ನೇಮಾನಿ ಪ್ರಣವ್, ಸೋದರಿ ಸುಚಿತಾ ತಂದೆ ಮೋಹನ್ ಜೊತೆ ಆಂಧ್ರ ಪ್ರದೇಶದ ಕೋಥಾಪಲ್ಲಿ ಬೀಚ್‌ಗೆ ಬಂದಿದ್ದರು. ಈ ವೇಳೆ ಸತ್ಯಯ್ಯಾ ಎಂಬ ವ್ಯಕ್ತಿ ಬಳಿಯಲ್ಲಿ ಕಡಲೆಬೀಜ (ಶೇಂಗಾ) ಖರೀದಿಸಿದ್ದರು. ಹಣ ನೀಡಲು ಮುಂದಾದಾಗ ಪರ್ಸ್ ಹೋಟೆಲ್‌ನಲ್ಲಿಯೇ ಬಿಟ್ಟು ಬಂದಿರೋದು ಗೊತ್ತಾಗಿದೆ. ಅವರ ಬಳಿ ಆ ಸಮಯದಲ್ಲಿ ವ್ಯಾಪಾರಿಗೆ ನೀಡಲು ಹಣ ಇರಲಿಲ್ಲ. ಆದರೆ ವ್ಯಾಪಾರಿ ಸತ್ಯಯ್ಯ ಹಣ ನೀಡುವಂತೆ ಒತ್ತಡ ಹಾಕದೇ ಕಡಲೆಬೀಜವನ್ನು ಉಚಿತವಾಗಿಯೇ ನೀಡಿದ್ದರು. ಈ ಘಟನೆ 2010ರಲ್ಲಿ ನಡೆದಿತ್ತು.

ಹಣ ಹಿಂದಿರುಗಿಸದೇ ಅಮೆರಿಕಾಗೆ ಹೋಗಿದ್ರು ಮೋಹನ್
ಆ ಸಮಯದಲ್ಲಿ ಉಚಿತವಾಗಿ ಕಡಲೆಬೀಜ ಪಡೆದುಕೊಂಡಿದ್ದ ಮೋಹನ್, ಹಣ ಹಿಂದಿರುಗಿಸೋದಾಗಿ ಮಾತು ನೀಡಿದ್ದರು. ಈ ಸಮಯದಲ್ಲಿ ಸತ್ಯಯ್ಯ ಅವರ ಫೋಟೋವೊಂದನ್ನು ಸಹ ಕ್ಲಿಕ್ಕಿಸಿಕೊಂಡಿದ್ದರು. ಆದ್ರೆ ಕಾರಣಾಂತರಗಳಿಂದ ಆ ಸಮಯದಲ್ಲಿ ಮೋಹನ್ ಅವರಿಗೆ ಹಣ ಹಿಂದಿರುಗಿಸಲು ಸಾಧ್ಯವಾಗರಲಿಲ್ಲ. ಮೋಹನ್ ಓರ್ವ ಎನ್‌ಆರ್‌ಐ ಆಗಿದ್ದರಿಂದ ವಿದೇಶಕ್ಕೆ ಹಿಂದಿರುಗಿದ್ದರು. ಈ ಸಾಲವನ್ನು ಮೋಹನ್ ಅವರ ಮಕ್ಕಳಾದ ನೇಮಾನಿ ಮತ್ತು ಸುಚಿತಾ ಹಿಂದಿರುಗಿಸಿದ್ದಾರೆ.
11 ವರ್ಷಗಳ ಬಳಿಕ ಭಾರತಕ್ಕೆ ಬಂದ್ರು
11 ವರ್ಷಗಳ ಬಳಿಕ ಅಂದ್ರೆ 2022ಲ್ಲಿ ಅಮೆರಿಕಾದಿಂದ ಭಾರತಕ್ಕೆ ಆಗಮಿಸಿದ ನೇಮಾನಿ ಮತ್ತು ಸುಚಿತಾ ತಮಗೆ ಉಚಿತವಾಗಿ ಕಡಲೆಬೀಜ ನೀಡಿದ್ದ ವ್ಯಾಪಾರಿ ಸತ್ಯಯ್ಯ ಅವರನ್ನು ಹುಡುಕಲು ಮುಂದಾದರು. ಕೋಥಾಪಲ್ಲಿ ಬೀಚ್‌ನಲ್ಲಿ ಸತ್ಯಯ್ಯ ಅವರ ಫೋಟೋ ಹಿಡಿದುಕೊಂಡು ಹುಡುಕಾಟ ಆರಂಭಿಸಿದ್ದರು. ನೇಮಾನಿ, ಸುಚಿತಾ ತಂದೆ ಮೋಹನ್ ಅವರು ವ್ಯಾಪಾರಿಯುನ್ನು ಭೇಟಿಯಾಗಿ ಹಣ ಹಿಂದಿರುಗಿಸಬೇಕೆಂದು ದೃಢ ನಿರ್ಧಾರ ಮಾಡಿದ್ದರು. ಸತ್ಯಯ್ಯ ಹುಡುಕಿಕೊಡುವಂತೆ ಕಾಕಿನಾಡ ಅಂದಿನ ಶಾಸಕ ಚಂದ್ರಶೇಖರ್ ರೆಡ್ಡಿ ಅವರ ಸಹಾಯವನ್ನು ಕೇಳಿದ್ದರು.