Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

5 ದಿನಕ್ಕಿಂತ ಕಡಿಮೆ ದಿನದಲ್ಲಿ ಎವರೆಸ್ಟ್‌ ಏರಿದ ಬ್ರಿಟಿಷ್‌ ತಂಡ

Spread the love

ಕಠ್ಮಂಡು:ಬ್ರಿಟಿಷ್‌ ಸೇನೆಯ ನಾಲ್ವರು ಮಾಜಿ ಸೈನಿಕರು ಹಾಗೂ ಓರ್ವ ಬ್ರಿಟನ್‌ ಸಚಿವರಿದ್ದ ಪರ್ವತಾರೋಹಿಗಳ ತಂಡವೊಂದು “ಕ್ಸೆನಾನ್‌’ ಎಂಬ ಅನಿಲದ ನೆರವಿನಿಂದ ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್‌ ಎವರೆಸ್ಟ್‌ನ್ನು 5 ದಿನಕ್ಕಿಂತಲೂ ಕಡಿಮೆ ಅವಧಿಯಲ್ಲಿ ಏರಿಳಿದಿದ್ದಾರೆ.

ಸಾಮಾನ್ಯವಾಗಿ ಪರ್ವತದಲ್ಲಿ ಎತ್ತರೆತ್ತರ ಸಾಗುವಂತೆ ಆಮ್ಲಜನಕದ ಕೊರತೆ ಕಂಡುಬರುತ್ತದೆ. ಹೀಗಾಗಿ ಪರ್ವತಾರೋಹಿಗಳು ಕೆಲ ವಾರಗಳ ಕಾಲ ಪರ್ವತದಲ್ಲೇ ತಂಗಿದ್ದು, ಅಲ್ಲಿನ ಪ್ರತಿಕೂಲ ಪರಿಸ್ಥಿತಿಗೆ ಒಗ್ಗಿಕೊಳ್ಳುವ ಅಗತ್ಯತೆಯಿರುತ್ತದೆ. ಆದರೆ ಬ್ರಿಟನ್‌ನ ಈ ತಂಡ ಪರ್ವತಾರೋಹಣಕ್ಕೂ ವಾರಗಳ ಮುನ್ನವೇ ಕ್ಸೆನಾನ್‌ ಅನಿಲ ಸೇವಿಸಿದ್ದರು. ಹೀಗಾಗಿ ಕೇವಲ 4 ದಿನ 18 ಗಂಟೆಗಳಲ್ಲಿ ಶಿಖರದ ಚಾರಣವನ್ನು ಈ ತಂಡ ಪೂರೈಸಿದೆ.

ಕ್ಸೆನಾನ್‌ ಅನಿಲ ಹೇಗೆ ಅನುಕೂಲ?
ದೇಹಕ್ಕೆ ಸಾಕಷ್ಟು ಆಮ್ಲಜನಕ ಸಿಗದ ಸ್ಥಿತಿ ವಿರುದ್ಧ ಹೋರಾಡಲು ಅನುವಾಗುವಂತೆ ಹಿಮೋಗ್ಲೋಬಿನ್‌ ಒಯ್ಯುವ ಕೆಂಪು ರಕ್ತ ಕಣಗಳ ಸಂಖ್ಯೆಯನ್ನು ಕ್ಸೆನಾನ್‌ ಅನಿಲವು ಹೆಚ್ಚಿಸುತ್ತದೆ. ಈ ಮೂಲಕ ದೇಹದೊಳಗೆ ಆಮ್ಲಜನಕ ಸಾಗಣೆಯನ್ನು ಸುಧಾರಿಸುತ್ತದೆ. ಇದರಿಂದಾಗಿ ಪರ್ವತಾರೋಹಣ ಸುಲಭವಾಗುತ್ತದೆ ಎಂದು ಕೆಲ ತಜ್ಞರ ಅಭಿಮತ.ಆದರೆ ಈ ವಿಧಾನವು ವಿವಾದಾತ್ಮಕವಾಗಿದ್ದು, ಇನ್ನಷ್ಟು ಅಧ್ಯಯನಗಳ ಅಗತ್ಯವಿದೆ ಎಂದು ಹಲವರು ಒತ್ತಾಯಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *