‘ಮೊದಲ ರಾತ್ರಿ ಒಟ್ಟಿಗೆ ಇರಬಾರದು’ ಎಂದು ನಂಬಿಸಿ ಆಭರಣ ಕದ್ದು ವಧು ಪರಾರಿ

ಕಿಶನ್ಗಢ: ಮದುವೆಯ ಮೊದಲ ದಿನ ನಮ್ಮ ಸಂಪ್ರದಾಯದಲ್ಲಿ ಗಂಡ-ಹೆಂಡತಿ ಒಟ್ಟಿಗೆ ಇರಬಾರದು ಎಂದು ನವವಧು ಗಂಡನನ್ನು ನಂಬಿಸಿ ಬೇರೆಡೆ ಮಲಗಿಸಿ, ಮನೆಯಲ್ಲಿರುವ ಚಿನ್ನಾಭರಣ, ಹಣ ದೋಚಿ ಪರಾರಿಯಾಗಿರುವ ಘಟನೆ ರಾಜಸ್ಥಾನದ ಕಿಶನ್ಗಢದಲ್ಲಿ ನಡೆದಿದೆ. ಈ ಘಟನೆಯಿಂದ ವರನ ಕುಟುಂಬ ಆಘಾತ ಮತ್ತು ಅವಮಾನಕ್ಕೊಳಗಾಗಿದೆ. ಆ ವ್ಯಕ್ತಿ ಆಗ್ರಾದ ಮಹಿಳೆಯೊಂದಿಗೆ ವಿವಾಹವಾಗಿದ್ದ ಮದುವೆಯ ಮೊದಲ ರಾತ್ರಿಯೇ ಚಿನ್ನಾಭರಣ ಮತ್ತು ಹಣವನ್ನು ತೆಗೆದುಕೊಂಡು ನಾಪತ್ತೆಯಾಗಿದ್ದಾಳೆ.

ವಿವಾಹವು ರಾಜಸ್ಥಾನದ ಸಂಪ್ರದಾಯದಂತೆ ನೆರವೇರಿತ್ತು, ಸಂಗೀತ, ಸಿಹಿತಿಂಡಿಗಳು ಮತ್ತು ಆಚರಣೆಗಳೊಂದಿಗೆ ನಡೆಯಿತು ಆಕೆಗೆ ಮದುವೆಯಾಗಲು 2 ಲಕ್ಷ ರೂ. ಕೂಡ ವರ ಕೊಟ್ಟಿದ್ದ ಎನ್ನಲಾಗಿದೆ. ವಧುವನ್ನು ಕಿಶನ್‌ಗಢದಲ್ಲಿರುವ ಮನೆಗೆ ಕರೆತರಲಾಗಿತ್ತು. ವಿವಾಹದ ನಂತರದ ಸಂಪ್ರದಾಯಗಳ ಭಾಗವಾಗಿ ವರನ ತಾಯಿ ತನ್ನ ಹೊಸ ಸೊಸೆಗೆ ಚಿನ್ನದ ಆಭರಣಗಳನ್ನು ಉಡುಗೊರೆಯಾಗಿ ನೀಡಿದ್ದರು.
ದಂಪತಿ ಮೊದಲ ರಾತ್ರಿ ಕೋಣೆಗೆ ಹೋದಾಗ, ವಧು ಅಸಾಮಾನ್ಯ ಬೇಡಿಕೆಯನ್ನು ಮುಂದಿಟ್ಟಿದ್ದಳು, ನಾವು ಇಂದು ರಾತ್ರಿ ಒಟ್ಟಿಗೆ ಮಲಗಲು ಸಾಧ್ಯವಿಲ್ಲ, ಅದು ನಮ್ಮ ಪದ್ಧತಿಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾಳೆ. ಆಕೆ ಕಳ್ಳತನ ಮಾಡಲು ದೊಡ್ಡ ಪ್ಲ್ಯಾನ್ ಮಾಡಿದ್ದಳು, ಆದರೆ ಆಕೆಯ ಕುಟುಂಬಕ್ಕೆ ಯಾವುದೇ ಅನುಮಾನ ಬಂದಿರಲಿಲ್ಲ.
ಬೆಳಗಿನ ಜಾವ 3 ಗಂಟೆ ಸುಮಾರಿಗೆ, ವರ ನೀರು ತರಲು ಎದ್ದಾಗ, ಮನೆಯಲ್ಲಿರುವವರು ಆಘಾತಕಾರಿ ಸತ್ಯವನ್ನು ಆತನಿಗೆ ಹೇಳಿದ್ದಾರೆ, ವಧು ಕಾಣೆಯಾಗಿದ್ದಳು, ಬೀರುವಿನಿಂದ ಚಿನ್ನಾಭರಣ ಮತ್ತು ಹಣವನ್ನು ತೆಗೆದುಕೊಂಡು ಹೋಗಿದ್ದಳು.
ಕುಟುಂಬವು ಸ್ಥಳೀಯ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮತ್ತು ಹತ್ತಿರದ ಪ್ರದೇಶಗಳಲ್ಲಿ ಹುಡುಕಾಡಿದರೂ ಆಕೆಯ ಸುಳಿವು ಸಿಗಲಿಲ್ಲ. ಸಂಬಂಧಿ ರಾಕೇಶ್ ಮದನ್‌ಗಂಜ್ ಪೊಲೀಸರಿಗೆ ದೂರು ನೀಡಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಘಟನೆಯು ಮದುವೆಯಾಗಬೇಕೆಂಬ ಕನಸು ಹೊತ್ತಿದ್ದ ಹಲವರನ್ನು ಭಯಕ್ಕೆ ತಳ್ಳಿದೆ.
ಮತ್ತೊಂದು ಘಟನೆ
62ರ ವೃದ್ಧನ ಜೊತೆ 45ರ ಮಹಿಳೆಯ ಮದುವೆ ಎರಡೇ ದಿನಕ್ಕೆ ಚಿನ್ನದ ಜೊತೆ ವಧು ಪರಾರಿ ಉತ್ತರ ಪ್ರದೇಶದ ಕಾನ್ಸುರದಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಒಂಟಿತನದಿಂದ ಬಳಲುತ್ತಿದ್ದ 62 ವರ್ಷದ ವ್ಯಕ್ತಿಯೊಬ್ಬರು 45 ವರ್ಷದ ಮಹಿಳೆಯನ್ನು ವಿವಾಹವಾಗಿದ್ದಾರೆ. ಇನ್ನೂ ಮದುವೆಯಾದ ಎರಡೇ ದಿನಕ್ಕೆ ವಧು ನಗದು ಹಾಗೂ ಬಂಗಾರದೊಂದಿಗೆ ಪರಾರಿ ಆಗಿದ್ದಾಳೆ. ಆ ವೃದ್ಧ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದು, ಈ ಸಂಬಂಧ ಪೊಲೀಸರು ಕೂಡ ಈ ವಿಚಾರದ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ನಿವೃತ್ತ ಸಿಒಡಿ ಉದ್ಯೋಗಿಯಾಗಿರುವ ಹರೀಶ್ ಕುಮಾರ್ ಶುಕ್ಲಾ ಎಂಬುವವರು ಚಾಕೇರಿ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಇತ್ತೀಚೆಗೆ ಹರೀಶ್ ಅವರಿಗೆ ತಮ್ಮ ಮನೆಯ ಬಳಿ ಬಾಡಿಗೆಗೆ ವಾಸಿಸುತ್ತಿದ್ದ 45 ವರ್ಷದ ಪೂಜಾ ಎನ್ನುವಾಕೆಯ ಪರಿಚಯವಾಗಿತ್ತು.
ಪರಿಚಯ ನಿಧಾನವಾಗಿ ಪ್ರೀತಿಗೆ ತಿರುಗಿದ್ದು, ಇಬ್ಬರು ಮದುವೆ ಆಗೋಣ ಎಂದು ನಿರ್ಧರಿಸಿದ್ದಾರೆ. ಇದೇ ಫೆ.11 ರಂದು ಹರೀಶ್ ಪೂಜಾ ಅವರೊಂದಿಗೆ ಬೆನಝಬರ್‌ನಲ್ಲಿರುವ ಆರ್ಯ ಸಮಾಜ ದೇವಸ್ಥಾನದಲ್ಲಿ ಹರೀಶ್ ಕುಮಾರ್ ಶುಕ್ಲಾ ಮದುವೆಯಾಗಿದ್ದರು. ಬಳಿಕ ಆಕೆ ಪರಾರಿಯಾಗಿದ್ದಳು.