ಟ್ರಂಪ್ ಸುಂಕಾಸ್ತ್ರಕ್ಕೆ ಬ್ರಿಕ್ಸ್ ರಾಷ್ಟ್ರಗಳಿಂದ ತಿರುಗೇಟು: ಅಮೆರಿಕದಿಂದ ಸೋಯಾಬೀನ್ ಆಮದು ನಿಲ್ಲಿಸಿದ ಚೀನಾ

ಹೊಸದಿಲ್ಲಿ: ಅಮೆರಿಕ ಅಧ್ಯಕ್ಷ ಟ್ರಂಪ್ ಬ್ರಿಕ್ಸ್ ರಾಷ್ಟ್ರಗಳನ್ನು ಗುರಿಯಾಗಿಸಿ ಸುಂಕಾಸ್ತ್ರ ಪ್ರಯೋಗಿಸುತ್ತಿರುವಂತೆಯೇ ಟ್ರಂಪ್‌ಗೆ ಟಾಂಗ್ ನೀಡಲು ಬ್ರಿಕ್ಸ್ ರಾಷ್ಟ್ರಗಳು ಸಜ್ಜಾಗಿವೆ.

ಇದರ ಭಾಗವಾಗಿ ಅಮೆರಿಕದ ಸೋಯಾಬೀನ್ ಆಮದು ಮಾಡಿಕೊಳ್ಳುವುದನ್ನು ಚೀನ ನಿಲ್ಲಿಸಿದೆ.
ಜುಲೈನಲ್ಲಿ ಅಮೆರಿಕದಿಂದ 4.2 ಲಕ್ಷ ಟನ್ ಆಮದು ಮಾಡಿ ಕೊಂಡಿದ್ದ ಚೀನ, ಬಳಿಕ ಒಂದೇ ಒಂದು ಟನ್ ಕೂಡ ಖರೀದಿಸಿಲ್ಲ. ಬದಲಿಗೆ ಬ್ರೆಜಿಲ್‌ನಿಂದ ಆಮದು ಆರಂಭಿಸಿದೆ. ಅಮೆರಿಕದ ರೈತರು ಇದರಿಂದ ಆತಂಕಕ್ಕೀಡಾಗಿದ್ದು, ಸುಂಕ ಸಮರಕ್ಕೆ ಇತಿಶ್ರೀ ಹಾಡು ವಂತೆ ಟ್ರಂಪ್‌ಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.