Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬ್ರಹ್ಮೋಸ್, S-400 ಗೂ ಠಕ್ಕರ್ ನೀಡತ್ತಾ? ಚೀನಾ ಸೇನೆಯ ಐದು ಭಯಾನಕ ವಿಧ್ವಂಸಕ ಶಸ್ತ್ರಾಸ್ತ್ರಗಳು

Spread the love

ಬೀಜಿಂಗ್: ಬೀಜಿಂಗ್‌ನಲ್ಲಿ ನಡೆದ 2ನೇ ಜಾಗತಿಕ ಯುದ್ಧದ ವಿಜಯ ದಿನದ ಮೆರವಣಿಗೆಯಲ್ಲಿ ಚೀನಾ ತನ್ನ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುವ ಮೂಲಕ ಇಡೀ ಜಗತ್ತು ತನ್ನತ್ತ ತಿರುಗಿ ನೋಡುವಂತೆ ಮಾಡಿದೆ.

ಹೌದು.. ಇದೇ ಮೊದಲ ಬಾರಿಗೆ ಜೆಟ್ ಫೈಟರ್‌ಗಳು, ಕ್ಷಿಪಣಿಗಳು ಮತ್ತು ಇತ್ತೀಚಿನ ಎಲೆಕ್ಟ್ರಾನಿಕ್ ಯುದ್ಧ ಯಂತ್ರಾಂಶ ಸೇರಿದಂತೆ ತನ್ನ ಕೆಲವು ಆಧುನಿಕ ಶಸ್ತ್ರಾಸ್ತ್ರಗಳನ್ನು ಚೀನಾ ವಿಶ್ವದ ಎದುರು ಅನಾವರಣಗೊಳಿಸಿದೆ.

ಈ ಮೂಲದ ಅದು ತನ್ನ ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸಿದೆ.

ಎರಡನೇ ಮಹಾಯುದ್ಧದಲ್ಲಿ ಜಪಾನಿನ ಆಕ್ರಮಣದ ವಿರುದ್ಧ ಚೀನಾ ವಿಜಯದ 80 ನೇ ವಾರ್ಷಿಕೋತ್ಸವದ ಸ್ಮರಣಾರ್ಥ ನಡೆದ ಮೆರವಣಿಗೆಯಲ್ಲಿ ನೂರಾರು ಸೈನಿಕರು ಭಾಗವಹಿಸಿದ್ದರು.

ವಿಶ್ವದ 26 ನಾಯಕರ ಎದುರು ಚೀನಾ ವಿರಾಟ ರೂಪ ದರ್ಶನ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಮತ್ತು ಇರಾನ್, ಮಲೇಷ್ಯಾ, ಮ್ಯಾನ್ಮಾರ್, ಮಂಗೋಲಿಯಾ, ಇಂಡೋನೇಷ್ಯಾ, ಜಿಂಬಾಬ್ವೆ ಮತ್ತು ಮಧ್ಯ ಏಷ್ಯಾದ ದೇಶಗಳ ನಾಯಕರು ಸೇರಿದಂತೆ ಇಪ್ಪತ್ತಾರು ವಿದೇಶಿ ನಾಯಕರ ಎದುರು ಚೀನಾ ತನ್ನ ವಿಶ್ವರೂಪ ದರ್ಶನ ಮಾಡಿದೆ.

ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, ನೇಪಾಳ ಪ್ರಧಾನಿ ಕೆ ಪಿ ಶರ್ಮಾ ಓಲಿ ಮತ್ತು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಅವರ ಪತ್ನಿ ಪೆಂಗ್ ಲಿಯುವಾನ್ ವಿದೇಶಿ ಅತಿಥಿಗಳನ್ನು ಸ್ವಾಗತಿಸಿದರು.

‘ಚೀನಾ ಬಲಿಷ್ಠವಾಗಿದ್ದೇವೆ.. ಯಾರಿಗೂ ಹೆದರುವುದಿಲ್ಲ’: ಕ್ಸಿ ಜಿನ್ ಪಿಂಗ್

ಎರಡನೇ ಮಹಾಯುದ್ಧದ 80 ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಚೀನಾ ಮಿಲಿಟರಿ ಮೆರವಣಿಗೆ ನಡೆಸಿತ್ತು. ಇದಕ್ಕೂ ಮುಂಚಿತವಾಗಿ ಚೀನಾದ ನಾಯಕ ಕ್ಸಿ ಜಿನ್‌ಪಿಂಗ್ ವಾರ್ಷಿಕೋತ್ಸವ ಉದ್ದೇಶಿಸಿ ಮಾತನಾಡಿದ್ದರು.

ಈ ವೇಳೆ, ‘ಇತಿಹಾಸವು ಪುನರಾವರ್ತನೆಯಾಗದಂತೆ ತಡೆಯಲು ಯುದ್ಧದ ಬೇರುಗಳನ್ನು ನಿರ್ಮೂಲನೆ ಮಾಡಬೇಕು. ಇಂದು, ಚೀನಾ ಬಲಿಷ್ಠವಾಗಿದೆ, ಯಾರಿಗೂ ಹೆದರುವುದಿಲ್ಲ ಮತ್ತು ಜಗತ್ತಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಲು ಸಿದ್ಧವಾಗಿದೆ’ ಎಂದರು.
ಹಾಗಾದರೆ ಚೀನಾ ಬಳಿ ಇರುವ ಪ್ರಮುಖ ಶಸ್ತ್ರಾಸ್ತ್ರಗಳೇನು? ಮೊದಲ ಬಾರಿಗೆ ಬಹಿರಂಗಪಡಿಸಿದ ಟಾಪ್ 5 ಭಯಾನಕ ಶಸ್ತ್ರಾಸ್ತ್ರಗಳು ಇಲ್ಲಿವೆ..

  1. ಮಾನವರಹಿತ ವೈಮಾನಿಕ ವ್ಯವಸ್ಥೆ (ಡ್ರೋನ್‌ಗಳು)

ಯುದ್ಧತಂತ್ರದ ವಿಚಕ್ಷಣದಿಂದ ಕಾರ್ಯತಂತ್ರದ ದಾಳಿಯವರೆಗೆ ಬಹು ಕಾರ್ಯಾಚರಣೆಗಳನ್ನು ಒಳಗೊಂಡ ಅದ್ಭುತ ಪ್ರದರ್ಶನವನ್ನು ನೀಡುವ ಮೂಲಕ ಚೀನಾದ ಡ್ರೋನ್‌ಗಳು ಹಾಲಿ ಮೆಗಾ ಪರೇಡ್ ನ ಕೇಂದ್ರ ಬಿಂದುಗಳಾಗಿದ್ದವು. ಚೀನಾ ತನ್ನ ಬೃಹತ್ ಉತ್ಪಾದನೆ ಮತ್ತು ರಫ್ತುಗಳೊಂದಿಗೆ ಡ್ರೋನ್ ತಂತ್ರಜ್ಞಾನದಲ್ಲಿ ಜಾಗತಿಕ ಪ್ರವರ್ತಕರಲ್ಲಿ ಒಂದಾಗಿದೆ.

ಚೀನಾ ಬಳಿ GJ-11 “ಶಾರ್ಪ್ ಸ್ವೋರ್ಡ್” ಸ್ಟೆಲ್ತ್ ಡ್ರೋನ್, CAIG ವಿಂಗ್ ಲೂಂಗ್ ಸರಣಿ, CASC CH ಸರಣಿ (ಉದಾ., CH-4, CH-5), ಮತ್ತು CASIC WJ ಸರಣಿಗಳು ಸೇರಿವೆ. ಇವು ವಿಚಕ್ಷಣದಿಂದ ದಾಳಿ ಕಾರ್ಯಾಚರಣೆಗಳವರೆಗೆ ವಿವಿಧ ಸಾಮರ್ಥ್ಯಗಳನ್ನು ಹೊಂದಿವೆ.

ಚೀನಾ ಯುದ್ಧ ಡ್ರೋನ್‌ಗಳ ಪ್ರಮುಖ ರಫ್ತುದಾರನಾಗಿದ್ದು, ಕೈಗೆಟುಕುವ ಬೆಲೆ ಮತ್ತು ಹೈಬ್ರಿಡ್ ನಾವೀನ್ಯತೆಯ ಮೇಲೆ ಅದು ಗಮನ ಕೇಂದ್ರೀಕರಿಸಿದೆ.


Spread the love
Share:

administrator

Leave a Reply

Your email address will not be published. Required fields are marked *