ಪ್ರೀತಿ ತಿರಸ್ಕರಿಸಿದಕ್ಕೆ ಗೆಳತಿಗೆ ಗುಂಡಿಕ್ಕಿ, ಯುವಕ ಆತ್ಮಹತ್ಯೆ; 3 ವರ್ಷದ ಪ್ರೇಮದುರಂತ ಅಂತ್ಯ

ಉತ್ತರಪ್ರದೇಶ: ಗೆಳತಿಗೆ ಗುಂಡು ಹಾರಿಸಿ ಕೊಂದ ಬಳಿಕ ಯುಕವನೊಬ್ಬ ತಾನು ಆತ್ಮಹತ್ಯೆ ಮಾಡಿಕೊಂಡ ಬಳಿಕ, 3 ವರ್ಷದ ಪ್ರೀತಿ-ಪ್ರೇಮ ದುರಂತ ಅಂತ್ಯ ಕಂಡ ಘಟನೆ ಉತ್ತರಪ್ರದೇಶದ ಕನ್ನೌಜ್ನಲ್ಲಿ ಭಾನುವಾರ ನಡೆದಿದೆ.
ಕನ್ನೌಜ್ನ ನಿವಾಸಿ ದೀಪ್ತಿ ಮತ್ತು ದೇವಾಂಶು ಮೃತರು ಎಂದು ಗುರುತಿಸಲಾಗಿದೆ.
ಯುವಕ ಮನೆಗೆ ನುಗ್ಗಿ ತನ್ನ ಮಲಗಿದ್ದ ಗೆಳತಿಯ ತಲೆಗೆ ಬಂದೂಕಿನಿಂದ ಗುಂಡು ಹಾರಿಸಿ ಕೊಂದಿದ್ದಾನೆ. ಇದಾದ ನಂತರ, ಗೆಳತಿಯ ಮನೆಯಿಂದ ಸ್ವಲ್ಪ ದೂರ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

3 ವರ್ಷ ಪ್ರೇಮ, ಪಂಚಾಯತಿಯಲ್ಲಿ ಕ್ಷಮೆ!
ದೀಪ್ತಿ-ದೇವಾಂಶು ನಡುವಿನ ಮೂರು ವರ್ಷದ ಪ್ರೀತಿ ತಿಳಿದ ಕುಟುಂಬಸ್ಥರು ದೀಪ್ತಿ ಮನೆಯವರು ಮದುವೆಗೆ ನಿರಾಕರಿಸಿದ್ದಾರೆ. ಇಬ್ಬರ ನಡವೆ ಸಂಬಂಧ ಇಲ್ಲಿಗೆ ಮುಗಿದು ಹೋಗಿದೆ ಎಂದು ಪಂಚಾಯತಿನಲ್ಲಿ ನಿರ್ಧಾರ ಮಾಡಿ, ಆತನಿಗೆ ಕ್ಷಮೆ ಕೇಳುವಂತೆ ಹೇಳಿದ್ದಾರೆ. ಬಳಿಕ ದೇವಾಂಶು ಕೂಡ ಕ್ಷಮೆ ಕೇಳಿ ಮನೆಗೆ ಹೊರಟಿದ್ದಾನೆ. ಮನೆಗೆ ತೆರಳಿದ ಬಳಿಕ ದೀಪ್ತಿಗೆ ಫೋನ್ ಸಂಪರ್ಕ ಮಾಡಿದ್ದಾನೆ. ಆಕೆಯ ಮನೆಯವರು ಫೋನ್ ಕಾಲ್ ನಿರ್ಬಂಧಿಸಿದ್ದಾರೆ.
ಇದರಿಂದ ಕೋಪಗೊಂಡ ದೇವಾಂಶು ಆಕೆಯ ಮನೆಗೆ ನುಗ್ಗಿ ದೀಪ್ತಿಗೆ ಬಂದೂಕಿನಿಂದ ಗುಂಡು ಹಾರಿಸಿ ಕೊಂದಿದ್ದಾನೆ. ಅಲ್ಲಿಂದ ಹೊರ ಬಂದ ದೇವಾಂಶು, ತಾನು ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದೀಪ್ತಿ ಸೌರಿಖ್ನ ಕಾಲೇಜಿನಲ್ಲಿ ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದಳು ಮತ್ತು ದೇವಾಂಶು ಸಕರ್ವಾದ ಕಾಲೇಜಿನಲ್ಲಿ ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಕೊಲೆಯ ತನಿಖೆ ಆರಂಭಿಸಿದ ಪೊಲೀಸರು ಬಂದೂಕು ಎಲ್ಲಿಂದ ಬಂತು, ಕೊಟ್ಟುದ್ದು ಯಾರು? ಎಂದು ಪತ್ತೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.