ಸೈಕಲ್ ರೈಡ್ ವೇಳೆ ದಳಪತಿ ವಿಜಯ್‌ಗೆ ಬಾಂಬ್ ಭೀತಿ? ಅಭಿಮಾನಿ ಎಸೆದ ಹೂವಿನ ಮಾಲೆ ನೋಡಿ ಓಡಿದ ನಟ!

ದಳಪತಿ ವಿಜಯ್ (Thalapathy Vijay) ಅವರು ಟಿವಿಕೆ ಪಕ್ಷ ಸ್ಥಾಪಿಸಿ ತಮಿಳುನಾಡು ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ. ಅವರು ನಿರಂತರವಾಗಿ ಪ್ರಚಾರ ಕಾರ್ಯದಲ್ಲಿ ಭಾಗಿ ಆಗುತ್ತಿದ್ದಾರೆ. ರಾಜಕಾರಣಿ ಎಂದಾಗ ವಿವಿಧ ರೀತಿಯ ಪ್ರಯೋಗಗಳನ್ನು ಮಾಡಬೇಕಾಗುತ್ತದೆ. ಅದೇ ರೀತಿ ದಳಪತಿ ವಿಜಯ್ ಅವರು ಸೈಕಲ್ ರೈಡ್ ಮಾಡಿದ್ದಾರೆ. ಈ ವೇಳೆ ಅಭಿಮಾನಿ ಎಸೆದ ಹೂವಿನ ಮಾಲೆಯನ್ನು ಬಾಂಬ್ ಎಂದು ಭಾವಿಸಿ ದಳಪತಿ ವಿಜಯ್ ಅವರು ಸ್ಥಳದಿಂದ ಓಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.
ದಳಪತಿ ವಿಜಯ್ ಅವರು ಕನ್ಯಾಕುಮಾರಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿ ಆಗಿದ್ದಾರೆ. ಈ ವೇಳೆ ಅವರು ಹೈವೇಲಿ ಸೈಕಲ್ ರೈಡ್ ಮಾಡಿದರು. ಸಾಕಷ್ಟು ಅಭಿಮಾನಿಗಳು ಅವರ ಕಡೆಗೆ ನುಗ್ಗುವ ಪ್ರಯತ್ನ ಮಾಡುತ್ತಿದ್ದರು. ಇವರೆಲ್ಲರಿಂದ ತಪ್ಪಿಸಿಕೊಂಡು ವಿಜಯ್ ಅವರು ಸೈಕಲ್ ರೈಡ್ ಮಾಡುತ್ತಾ ತೆರಳುತ್ತಿದ್ದರು. ಆ ಸಂದರ್ಭದಲ್ಲಿ ಸಂಭವಿಸಿತು ನೋಡಿ ಒಂದು ಘಟನೆ.ವಿಜಯ್ ಅವರು ಸೈಕಲ್ ರೈಡ್ ಮಾಡುವಾಗ ಅಲ್ಲಿ ಅಭಿಮಾನಿಯೋರ್ವ ಹೂವಿನ ಮಾಲೆಯನ್ನು ತೆಗೆದುಕೊಂಡುಬಂದು ಎಸೆಯುವ ಪ್ರಯತ್ನ ಮಾಡಿದ್ದಾನೆ. ಇದನ್ನು ನೋಡಿ ದಳಪತಿ ವಿಜಯ್ ಗಾಬರಿಗೊಂಡಿದ್ದಾರೆ. ಅದು ಬಾಂಬ್ ಎಂದು ಭಾವಿಸಿ ಸೈಕಲ್ ಬಿಟ್ಟು ಓಡಿ ನೇರವಾಗಿ ಕಾರನ್ನು ಏರಿದ್ದಾರೆ. ‘ವಿಜಯ್ ಅವರು ಬಾಂಬ್ ಎಂದು ಭಾವಿಸಿ ಈ ರೀತಿ ಮಾಡಿರಬಹುದು’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ವಿಜಯ್ ಪರ ಬ್ಯಾಟ್ ಬೀಸಿದ್ದಾರೆ. ‘ಅಲ್ಲಿ ಸಾಕಷ್ಟು ಜನರು ಮುತ್ತಿಕೊಳ್ಳುವ ಸೂಚನೆ ಸಿಕ್ಕಿದ್ದರಿಂದ ಈ ರೀತಿ ಮಾಡಿರಬಹುದು’ ಎಂದು ಕೆಲವರು ಹೇಳಿದ್ದಾರೆ.
