BMTC ಪ್ರಯಾಣಿಕನಿಂದ ರೇಂಜ್ ರೋವರ್ ಮಾಲೀಕನಾದ ‘ದಿಯಾ’ ಖ್ಯಾತಿಯ ನಟ ದೀಕ್ಷಿತ್ ಶೆಟ್ಟಿ!

ದಿಯಾ’ ಖ್ಯಾತಿಯ ನಟ ದೀಕ್ಷಿತ್ ಶೆಟ್ಟಿ ಅವರು ಕನ್ನಡ ಹಾಗೂ ಪರಭಾಷೆಯಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಈಗ ಅವರು ದುಬಾರಿ ಕಾರು ಖರೀದಿ ಮಾಡಿದ್ದಾರೆ. ಅದು ಅಂತಿಂಥ ಕಾರಲ್ಲ, ರೇಂಜ್ ರೋವರ್. ಈ ವಿಡಿಯೋ ಹಂಚಿಕೊಂಡಿರೋ ಅವರು, ‘ನನ್ನ ಸಿನಿಮಾ ಪ್ರಯಾಣವನ್ನು ಬಿಎಂಟಿಸಿ ಪ್ರಯಾಣಿಕನಾಗಿ ಪ್ರಾರಂಭಿಸಿದೆ. ಈಗ ರೇಂಜ್ ರೋವರ್‌ನಲ್ಲಿ ಪ್ರಯಾಣಿಸುತ್ತಿದ್ದೇನೆ. ಜೀವನದ ಚಿತ್ರಕಥೆಯು ಇದಕ್ಕಿಂತ ದಯೆಯಿಂದಿರಲು ಸಾಧ್ಯವಿಲ್ಲ. ನನ್ನ ಸಿನಿಮಾ ಪ್ರಯಾಣದ ಭಾಗವಾಗಿದ್ದಕ್ಕಾಗಿ ಧನ್ಯವಾದಗಳು. ತುಂಬಾ ಪ್ರೀತಿ ಮತ್ತು ಕೃತಜ್ಞತೆ’ ಎಂದು ಅವರು ಬರೆದುಕೊಂಡಿದ್ದಾರೆ. ದೀಕ್ಷಿತ್ ಅವರು ಸದ್ಯ ‘ಗರ್ಲ್ಫ್ರೆಂಡ್’ ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದಾರೆ.
