ಬೆಂಗಳೂರು ಮಧ್ಯರಸ್ತೆಯಲ್ಲಿ ಬಿಎಂಟಿಸಿ ಚಾಲಕರ ಬೀದಿ ರಂಪಾಟ

ಬೆಂಗಳೂರು: ನಡುರಸ್ತೆಯಲ್ಲಿಯೇ ಬಸ್ ನಿಲ್ಲಿಸಿ ಬಿಎಂಟಿಸಿ ಚಾಲಕರಿಬ್ಬರು ಗಲಾಟೆ ಮಾಡಿಕೊಂಡಿರುವ ಘಟನೆ ನಗರದ ಕಂಠೀರವ ಸ್ಟುಡಿಯೋ ರಸ್ತೆಯಲ್ಲಿ ನಡೆದಿದೆ.

ಬಿಎಂಟಿಸಿ ಚಾಲಕರಿಬ್ಬರು ನಡುರಸ್ತೆಯಲ್ಲಿಯೇ ಬಸ್ ನಿಲ್ಲಿಸಿಕೊಂಡು ರಂಪಾಟ ಮಾಡಿದ್ದಾರೆ. ಪ್ರಯಾಣಿಕರು ಬಸ್ ಮೂವ್ ಮಾಡುವಂತೆ ಎಷ್ಟೇ ಕೇಳಿಕೊಂಡರೂ ತಲೆಕೆಡಿಸಿಕೊಳ್ಳದೇ ಕಿತ್ತಾಡಿದ್ದಾರೆ.
ಚಾಲಕರಿಬ್ಬರ ಗಲಾಟೆ ನೋಡಿದ ಪ್ರಯಾಣಿಕರು ನೀವು ಹೀಗೆ ಮಾಡಿದರೆ ನಾವು ಯಾರಿಗೆ ಹೇಳಬೇಕು? ಯಾಕೆ ಗಾಡಿಯನ್ನು ಸೈಡ್ಗೆ ಹಾಕಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಇವರ ಕಿತ್ತಾಟದಿಂದ ಬೇಸತ್ತ ಪ್ರಯಾಣಿಕರು ವಿಡಿಯೋ ಮಾಡಿ ಚಾಲಕರ ಬೀದಿ ರಂಪಾಟವನ್ನು ಬಿಚ್ಚಿಟ್ಟಿದ್ದಾರೆ.