‘ಪುಷ್ಪ’ ಶೈಲಿಯಲ್ಲಿ ರಕ್ತಚಂದನ ಸಾಗಣೆ: ಇಬ್ಬರು ಆರೋಪಿಗಳ ಬಂಧನ

ಚಾಮರಾಜನಗರ : ‘ಪುಷ್ಪ’ ಸಿನಿಮಾ ಶೈಲಿಯಲ್ಲಿ ರಕ್ತಚಂದನ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ಬಳಿ ಆರೋಪಿಗಳನ್ನು ಪೊಲಿಸರು ಬಂಧಿಸಿದ್ದಾರೆ.
ಬಂಧಿತರನ್ನು ತಬ್ರೇಜ್ ಖಾನ್, ಸಾದಿಕ್ ಪಾಷಾ ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಸಿಐಡಿ ಫಾರೆಸ್ಟ್ ಸೆಲ್ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.ಟಾಟಾ ಸುಮೋ ವಾಹನದ ಹಿಂಬದಿ ಸೀಟ್ ಆಲ್ಟೇಷನ್ ಮಾಡಿ ಅನುಮಾನ ಬಾರದಂತೆ ರಕ್ತಚಂದನ ತುಂಡನ್ನು ಸಾಗಾಟ ಮಾಡುತ್ತಿದ್ದರು. ಬಂಧಿತರಿಂದ 205 ಕೆಜಿ ತೂಕದ 28 ರಕ್ತಚಂದನ ತುಂಡು, ಒಂದು ಟಾಟಾ ಸುಮೋ ವಶಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
