ಯುವತಿಯ ಖಾಸಗಿ ವಿಡಿಯೋ ಇಟ್ಟುಕೊಂಡು 5 ಲಕ್ಷ ಬೇಡಿಕೆ: ಬ್ಲಾಕ್‌ಮೇಲ್ ಕಿರುಕುಳ

ಬೆಂಗಳೂರು: ಬೆಂಗಳೂರಲ್ಲಿ ಯುವತಿಯ ಖಾಸಗಿ ವಿಡಿಯೋ ಇಟ್ಟುಕೊಂಡು ಯುವಕನೊಬ್ಬ ಹಣ ನೀಡುವಂತೆ ಟಾರ್ಚರ್ ನೀಡಿದ್ದಾನೆ.
ಕಿಡಿಗೇಡಿ ವ್ಯಕ್ತಿಗಾಗಿ ಹುಡುಕಾಟ ನಡೆಸಿರುವ ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಪೋಲಿಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.ಬ್ಲಾಕ್ ಮೇಲ್ ಮಾಡಿದ್ದ ಯುವಕನನ್ನು ವಶಕ್ಕೆ ಪಡೆಯಲು ಪೊಲೀಸರು ಬಲೆ ಬೀಸಿದ್ದಾರೆ.
ಯುವತಿ ಫ್ರೆಂಡ್ ಜತೆ ಇರುವ ಖಾಸಗಿ ವಿಡಿಯೋ ಪಡೆದು ಯುವತಿಗೆ 5 ಲಕ್ಷ ರೂ. ನೀಡುವಂತೆ ಯುವಕ ಟಾರ್ಚರ್ ಕೊಟ್ಟಿದ್ದನು. ಈ ಸಂಬಂಧ ಬಿಹೆಚ್‌ಇಎಲ್ ಲೇಔಟ್ ನಿವಾಸಿಯಾಗಿರುವ 25 ವರ್ಷದ ಯುವತಿ ದೂರು ನೀಡಿದ್ದರು.
ಅಪರಿಚಿತನ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಬಿಎನ್‌ಎಸ್ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ವಿಡಿಯೋ ಕರೆ ಮತ್ತು ಸಂದೇಶಗಳ ಮೂಲಕ 5 ಲಕ್ಷ ರೂಪಾಯಿ ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ. ಹಣ ಕೊಡದಿದ್ದರೆ ವಿಡಿಯೋವನ್ನು ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.