ನಡುರಸ್ತೆಯಲ್ಲೇ ವಾಮಾಚಾರ: ಹೊಸ ವರ್ಷದ ದಿನವೇ ಜನರಿಗೆ ಶಾಕ್!

ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಗ್ರಾಮದ ಅಂಬೇಡ್ಕರ್ ನಗರದಲ್ಲಿ ತಡರಾತ್ರಿ ಭಯಾನಕ ಘಟನೆಯೊಂದು ನಡೆದಿದೆ. ಗ್ರಾಮದ ಮಧ್ಯದಲ್ಲಿ ವಾಮಾಚಾರ ಮಾಡಲಾಗಿದೆ. ಹೊಸ ವರ್ಷದ ಸಂಭ್ರಮಾಚರಣೆಯಲ್ಲಿದ್ದ ಜನರಿಗೆ ಆಘಾತ ಎದುರಾಗಿದೆ. ರಸ್ತೆಯಲ್ಲಿ ಅರಿಶಿನ, ಕುಂಕುಮ, ನಿಂಬೆಹಣ್ಣು, ದೀಪ ಇಟ್ಟು ಪೂಜೆ ಮಾಡಲಾಗಿದೆ. ತಮಾಷೆಗೆ ಮಾಡಿದ್ದಾರಾ ಅಥವಾ ಉದ್ದೇಶ ಪೂರ್ವಕವಾಗಿ ಮಾಡಿದ್ದಾರಾ ಎಂಬುವುದು ತಿಳಿದುಬಂದಿಲ್ಲ. ಸದ್ಯ ಇದರಿಂದಾಗಿ ಗ್ರಾಮಸ್ಥರು ಗಾಬರಿಯಾಗಿದ್ದಾರೆ. ಪೊಲೀಸ್ ತನಿಖೆಗೆ ಜನರು ಒತ್ತಾಯಿಸಿದ್ದಾರೆ.
