ರಾಯಚೂರಿನಲ್ಲಿ ವಿಚಿತ್ರ ಕಳ್ಳತನ: ಕಸ ವಿಲೇವಾರಿ ವಾಹನವನ್ನೇ ಹೊತ್ತೊಯ್ದ ಕಳ್ಳರು!

ರಾಯಚೂರು : ಸಾಮಾನ್ಯವಾಗಿ ಮನೆ ಬೀಗ ಮುರಿದು ಕಳ್ಳತನ ಮಾಡುವ ಮನೆಗಳನ್ನು ಬಿಟ್ಟು ಸರ್ಕಾರದ ಕಸ ವಿಲೇವಾರಿ ವಾಹನವನ್ನೇ ಕಳ್ಳತನ ಮಾಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಇಲ್ಲಿನ ಸಿರವಾರ ತಾಲೂಕಿನ ಕವಿತಾಳದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

ಇಲ್ಲಿನ ಕವಿತಾಳದ ಪಂಚಾಯಿತಿ ಕಚೇರಿಯ ಆವರಣದಲ್ಲಿ ನಿಲ್ಲಿಸಲಾಗಿದ್ದ ಕಸ ವಿಲೇವಾರಿ ವಾಹನ ಕಳ್ಳತನವಾಗಿದೆ.
ಇನ್ನು ಕಳ್ಳತನ ಮಾಡುವ ವೇಳೆ ಗಾಬರಿಯಿಂದ ಕಚೇರಿಯ ಕಂಪೆಂಡ್ ಗೊಡೆದೆ ವಾಹನ ಡಿಕ್ಕಿ ಹೊಡೆದು ವಾಹನ ಕದ್ದು ಎಸ್ಕೇಪ್ ಆಗಿದ್ದಾರೆ.
ಇನ್ನು ವಿಪರಿಯಸ ಅಂದ್ರೆ ಇಷ್ಟೂ ದಿನ ವಾಹನಗಳಿಗೆ ಡೀಸೆಲ್ ಹಣವಿರದ ಕಾರಣ ಗಾಡಿಗಳನ್ನು ಹಾಗೇ ನಿಲ್ಲಿಸಲಾಗುತ್ತು.ಆದ್ರೆ ಇತ್ತೀಚೆಗಷ್ಟೆ ಹಣ ರಿಲೀಸ್ ಕಾರಣ ಡೀಸೆಲ್ ತುಂಬಿ ಇನ್ಸೂರೆನ್ಸ್ ನವೀಕರಣ ಮಾಡಿ 4 ವಾಹನಗಳನ್ನು ನಿಲ್ಲಿಸಲಾಗಿತ್ತು. ಈ ವೇಳೆ ಕಳ್ಳರು ಸುಮಾರು 8 ಲಕ್ಷ ಬೆಲೆ ಬಾಳುವ ಒಂದು ವಾಹನವನ್ನು ಕದ್ದು ಪರಾರಿಯಾಗಿದ್ದಾರೆ.
ಕವಿತಾಳ ಪಂಚಾಯಿತಿ ಕಚೇರಿಗೆ ಎರಡನೇ ಶನಿವಾರ (ಜು.12) ರಜೆಯಿದ್ದ ಕಾರಣ ಯಾವುದೇ ಸಿಬ್ಬಂದಿ ಇರಲಿಲ್ಲ. ಇದೇ ಸಮಯ ನೋಡಿ ಕಳ್ಳರು ಕೈಚಳಕ ತೋರಿದ್ದು ಈ ಕುರಿತು ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
