ಹರಿಯಾಣದಲ್ಲಿ ವಿಚಿತ್ರ ಘಟನೆ: ಮಲತಾಯಿಯೊಂದಿಗೆ ಮಗನ ಮದುವೆ, ತಂದೆಯಿಂದ ದೂರು!

ಹರಿಯಾಣ: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಪ್ರೇಮ ಪ್ರಕರಣದ ವಿಚಿತ್ರ ಘಟನೆಗಳು ನಡೆಯುತ್ತಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ಮಲತಾಯಿ ಒಬ್ಬಳು ತನ್ನ ಮಗನ್ನೇ ಓಡಿಹೋಗಿ ಮದುವೆಯಾದ ವಿಚಿತ್ರ ಘಟನೆ ಹರಿಯಾಣದಲ್ಲಿ ಬೆಳಕಿಗೆ ಬಂದಿದೆ.

ಹೌದು, ಹರಿಯಾಣದ ನುಹಾ ಜಿಲ್ಲೆಯ ಬಸ್ದಲ್ಲಾ ಗ್ರಾಮ ನಿವಾಸಿ ರಾಮ್ ಕಿಶನ್ ಎಂಬ ವ್ಯಕ್ತಿಯ ಪತ್ನಿ ಸೋಹ್ನಾ ತನ್ನ ಮಗನನ್ನೇ ಮದುವೆಯಾಗಿದ್ದಾಳೆ ಎಂದು ವರದಿಯಾಗಿದೆ.
ಅಲ್ಲದೆ, ಈ ಕುರಿತು ಪೊಲೀಸ್ ದೂರು ಕೂಡ ನೀಡಲಾಗಿದೆ.
ರಾಮ್ ಕಿಶನ್ 18 ವರ್ಷಗಳ ಹಿಂದೆ ಫಿರೋಜಬಾದ್ನ ನಿವಾಸಿಯಾದ ಯುವತಿಯನ್ನು ಮದುವೆಯಾಗಿದ್ದನು. ಬಳಿಕ ದಂಪತಿ ಗಂಡು ಮಗು ಜನನವಾಯಿತು. ಮಗು ಜನಿಸಿದ ಕೆಲ ವರ್ಷದ ನಂತರ ರಾಮಕಿಶನ್ ಪತ್ನಿ ಕಾಯಿಲೆಯಿಂದ ಮೃತಪಟ್ಟರು. ಇದಾದ ಮೂರು ವರ್ಷಗಳ ನಂತರ ರಾಮ್ ಕಿಶನ್ ಎರಡನೇ(ಸೋಹ್ನಾ) ಮದುವೆಯಾದನು. ಮಗನನ್ನು ಪಟ್ಟಣಕ್ಕೆ ಕೆಲಸಕ್ಕೆ ಸೇರಿದ್ದನು. ಬಹು ಕೆಲ ವರ್ಷಗಳ ಕಾಲ ಅಪ್ಪನಿಂದ ಮಗ ದೂರ ಇದ್ದನು.
ಆದರೆ, ಇತ್ತೀಚಿಗೆ ಮಗ ಮನೆಗೆ ಮರಳಿದ್ದನು. ಆತ ಬಂದ ಕೆಲ ದಿನಗಳಲ್ಲೇ ಮಲತಾಯಿಯ ಜತೆಗೆ ಪ್ರೇಮಾಂಕುರವಾಗಿದೆ. ಇದೀಗ ರಾಮ್ ಕಿಶೊರ್ಗೆ ತಿಳಿಸದೇ ಮಗನ ಜತೆ ತಾಯಿ ಓಡಿ ಹೋಗಿದ್ದಾಳೆ. ಅಲ್ಲದೆ, ಮನೆಯಲ್ಲಿನ 30 ಸಾವಿರ ದುಡ್ಡು, ಆಭರಣ ಕೊಂಡೊಯ್ದಿದ್ದಾರೆ ಎಂದು ರಾಮ್ ಕಿಶನ್ ಪೊಲೀಸರ ಮುಂದೆ ಹೇಳಿದ್ದಾನೆ ಎಂದು ವರದಿಯಾಗಿದೆ. ಮಗ ಮತ್ತು ಪತ್ನಿಯನ್ನು ಪತ್ತೆಮಾಡುವಂತೆ ರಾಮ್ ಕಿಶನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ
