Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನಾಯಿ ಮರಿ ರಕ್ಷಣೆ ವೇಳೆ ಕಚ್ಚಿದ ಪರಿಣಾಮ – ರೇಬಿಸ್ ಸೋಂಕಿನಿಂದ ಪ್ರೊ ಕಬಡ್ಡಿ ಆಕಾಂಕ್ಷಿ ಬ್ರಿಜೇಶ್ ಸಾವು

Spread the love

ಮೀರತ್ : ಚರಂಡಿಯಲ್ಲಿ ಬಿದ್ದಿದ್ದ ನಾಯಿ ಮರಿಯ ರಕ್ಷಣೆ ಸಂದರ್ಭ ಅದು ಕಚ್ಚಿದ ಪರಿಣಾಮ ಶಂಕಿತ ರೇಬಿಸ್ ನಿಂದಾಗಿ ಎರಡು ತಿಂಗಳ ನಂತ ರಾಜ್ಯಮಟ್ಟದ ಕಬ್ಬಡಿ ಆಟಗಾರ ಸಾವನಪ್ಪಿದ ಘಟನೆ ಉತ್ತರಪ್ರದೇಶದಲ್ಲಿ ಬುಲಂದ್ ಶಹರ್ ನಲ್ಲಿ ನಡೆದಿದೆ. ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ವಿಜೇತ ಮತ್ತು ಪ್ರೊ ಕಬಡ್ಡಿ ಲೀಗ್‌ನ ಆಕಾಂಕ್ಷಿಯಾಗಿದ್ದ 22 ವರ್ಷದ ಬ್ರಿಜೇಶ್ ಸೋಲಂಕಿ ಮೃತ ಕಬ್ಬಡಿ ಆಟಗಾರ.

ಎರಡು ತಿಂಗಳ ಹಿಂದೆ ಚರಂಡಿಗೆ ಬಿದ್ದಿದ್ದ ನಾಯಿಮರಿಯನ್ನು ರಕ್ಷಣೆ ಮಾಡಿದ್ದರು. ಈ ವೇಳೆ ಅದು ಅವರಿಗೆ ಕಚ್ಚಿತ್ತು, ಆದರೆ ಸೋಲಂಕಿ ರೇಬಿಸ್ ಲಸಿಕೆಯನ್ನು ತೆಗೆದುಕೊಳ್ಳದೆ ನಿರ್ಲಕ್ಷ ಮಾಡಿದ್ದರು. ಎರಡು ತಿಂಗಳ ಬಳಿಕ ಅವರಿಗೆ ರೇಬಿಸ್ ಲಕ್ಷಣಗಳು ಕಾಣಿಸಲಾರಂಭಿಸಿದ್ದವು. ಜೂನ್ 26 ರಂದು ಏಕಾಏಕಿ ಸೋಲಂಕಿ ಆರೋಗ್ಯದಲ್ಲಿ ಏರುಪೇರಾಗಿತ್ತು. ಅವರ ಸ್ಥಿತಿ ಹದಗೆಟ್ಟ ಕಾರಣ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ನಂತರ ನೋಯ್ಡಾದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಸಹೋದರ ಸಂದೀಪ್ ಕುಮಾರ್ ನೀಡಿರುವ ಮಾಹಿತಿ ಪ್ರಕಾರ ಬ್ರಿಜೇಶ್ ಸೊಲಂಕಿ ಇದ್ದಕ್ಕಿದ್ದಂತೆ ನೀರಿಗೆ ಹೆದರುತ್ತಿದ್ದರು ಮತ್ತು ರೇಬೀಸ್ ಲಕ್ಷಣಗಳನ್ನು ತೋರಿಸುತ್ತಿದ್ದರು. ನಂತರ ನೋಯ್ಡಾದಲ್ಲಿ ವೈದ್ಯರು ಅವನಿಗೆ ರೇಬೀಸ್ ಸೋಂಕು ತಗುಲಿರುವ ಸಾಧ್ಯತೆಯನ್ನು ದೃಢಪಡಿಸಿದರು. ನಾಯಿ ಕಚ್ಚಿದ್ದನ್ನು ನಿರ್ಲಕ್ಷ ಮಾಡಿದ್ದಕ್ಕೆ ಉದಯೋನ್ಮುಖ ಕಬ್ಬಡಿ ಆಟಗಾರ ಪ್ರಾಣ ಕಳೆದುಕೊಳ್ಳಬೇಕಾಯಿತು.


Spread the love
Share:

administrator

Leave a Reply

Your email address will not be published. Required fields are marked *