Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕರ ಬಂಟ ಮಲಿಯಾಳಿ ಅಜಿತ್ ಪರಾರಿ, ಭೈರತಿ ಬಸವರಾಜ್ ವಿಚಾರಣೆಗೆ ಹಾಜರು

Spread the love

ಬೆಂಗಳೂರು: ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಶಾಸಕ ಭೈರತಿ ಬಸವರಾಜ್‌ ಎರಡು ಬಾರಿ ಪೊಲೀಸರ ವಿಚಾರಣೆ ಎದುರಿಸಿದ್ದಾರೆ. ತನಿಖಾಧಿಕಾರಿ ಮುಂದೆ ಹಾಜರಾಗಿ ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಕೊಲೆಗೂ ತಮಗೂ ಸಂಬಂಧವಿಲ್ಲ ಅಂದಿದ್ದಾರೆ. ಈ ಮಧ್ಯೆ ಬಂಧನ ಭೀತಿಯಿಂದ ಮತ್ತೊಬ್ಬ ಆರೋಪಿ ಪರಾರಿ ಆಗಿದ್ದಾನೆ. ಭೈರತಿ ಬಸವರಾಜ್​​ ಬಲಗೈ ಬಂಟ ಮಲಿಯಾಳಿ ಅಜಿತ್ ಎಸ್ಕೇಪ್ ಆದ ಆರೋಪಿ. ಸಾಕಷ್ಟು ಕಡೆ ಪೊಲೀಸರು ಹುಡುಕಾಟ ನಡೆಸಿದರು ಪತ್ತೆ ಆಗಿಲ್ಲ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕಿರಣ್​ ಮನೆ ಮತ್ತು ಕಚೇರಿಯಲ್ಲಿ ಪೊಲೀಸರು ಪರಿಶೀಲಿಸಿದ್ದರು. ಈ ವೇಳೆ ಮಲಿಯಾಳಿ ಅಜಿತ್​ಗೆ ಸೇರಿದ ಕೆಲವು ದಾಖಲೆಗಳು ಪತ್ತೆ ಆಗಿವೆ. ಈ ದಾಖಲೆ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಮಲಿಯಾಳಿ ಅಜಿತ್​ಗೆ ಪೊಲೀಸರು ನೋಟಿಸ್ ನೀಡಿದ್ದರು.​ ಆದರೆ ನೋಟಿಸ್ ಸ್ವೀಕರಿಸಿದ್ದ ಅಜಿತ್​ ವಿಳಾಸವಿಲ್ಲದ ಲೆಟರ್​​​​ ಹೆಡ್​​ನಲ್ಲಿ ಉತ್ತರ ನೀಡಿದ್ದ.

ಪೊಲೀಸರಿಗೇ ಅವಾಜ್​ ಹಾಕಿದ್ದ ಅಜಿತ್ 

‘ನಾನು ಹೈಕೋರ್ಟ್ ವಕೀಲ. ನನಗೆ ನೀವು ಸುಖಾಸುಮ್ಮನೆ ತೊಂದರೆ ನೀಡುತ್ತಿದ್ದೀರಿ. ನನಗೆ ಹಾಗೂ ಜಗ್ಗನಿಗೆ ಅಥವಾ ಕೊಲೆಯಾದ ಶಿವನ ಜೊತೆ ಯಾವುದೇ ರೀತಿಯ ಸಂಬಂಧವಿಲ್ಲ. ಒಂದು ವೇಳೆ ನೀವು ನನ್ನನ್ನು ಈ ಕೇಸ್​​​ನಲ್ಲಿ ಸಿಲುಕಿಸುವ ಪ್ರಯತ್ನ ಪಟ್ಟರೆ ನಾನು ಕಾನೂನಿನ ರೀತಿಯಲ್ಲಿ ಕ್ರಮಕ್ಕೆ ಮುಂದಾಗುತ್ತೇನೆ’ ಎಂದು ಅಜಿತ್ ಉತ್ತರ ನೀಡಿದ್ದ.

ತಕ್ಷಣವೇ ಪೊಲೀಸರು ಪ್ರತ್ಯುತ್ತರವಾಗಿ ಕೆಲವು ಕೇಸ್ ಅಂಶಗಳನ್ನು ಇಟ್ಟುಕೊಂಡು ಪ್ರಶ್ನೆ ಮಾಡಿದ್ದಾರೆ. ಇದಾದ ಬಳಿಕ ಟಿ.ಸಿ ಪಾಳ್ಯದಲ್ಲಿರುವ ಸಿನಿಮಾಸ್​​ ವಿ ಗ್ರೂಪ್​​ನ ಕಚೇರಿಯನ್ನು ಖಾಲಿ ಮಾಡಿ ಎಸ್ಕೇಪ್ ಆಗಿದ್ದಾನೆ. ಸದ್ಯ ಕಚೇರಿ ಬಳಿ ಪೊಲೀಸರ ನಿಯೋಜನೆ ಮಾಡಲಾಗಿದೆ.

ಡೆಡ್ಲಿ ಮರ್ಡರ್​ಗೂ ಮುನ್ನ ಜಗ್ಗನ ಸ್ಕೆಚ್ ಹೇಗಿತ್ತು?

ಇನ್ನು ಬಿಕ್ಲು ಶಿವ ಕೊಲೆಗೆ ಜಗ್ಗ ಅಲಿಯಾಸ್​ ಜಗದೀಶ್​ ಪ್ರೀಪ್ಲಾನ್​ ಮಾಡಿದ್ದ. ರಾಮಮೂರ್ತಿ ನಗರದ ಬಾರ್ ನಲ್ಲಿ ಹತ್ಯೆಗೆ ಸ್ಕೆಚ್​ ಹಾಕಲಾಗಿತ್ತು. ಜುಲೈ 15ರ ರಾತ್ರಿ ಶಿವನ ಕೊಲೆಗೂ ಮುನ್ನ ಎಂಟು ಜನ ಆರೋಪಿಗಳೊಂದಿಗೆ ಜಗದೀಶ್ ಮೀಟಿಂಗ್ ಮಾಡಿದ್ದ. ಹಂತಕರು ಸ್ಕೆಚ್ ಹಾಕಿದ್ದ ಸಿಸಿ ಕ್ಯಾಮೆರಾ ದೃಶ್ಯವಳಿ ಟಿವಿ9 ಗೆ ಲಭ್ಯವಾಗಿದೆ.


Spread the love
Share:

administrator

Leave a Reply

Your email address will not be published. Required fields are marked *