Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೈಕ್ ಟ್ಯಾಕ್ಸಿ ನಿಷೇಧದ ಬಿಸಿ – ಫುಡ್ ಡೆಲಿವರಿಗೂ ಬಂತು ಆತಂಕ, ಗಿಗ್ ಕಾರ್ಮಿಕರ ಬದುಕು ಅತಂತ್ರ!

Spread the love

Zomato, Swiggy accused of unfair practices in food delivery market: Report  - India Today

ಬೆಂಗಳೂರು: ಬೈಕ್ ಟ್ಯಾಕ್ಸಿ (Bike Taxi) ಕಾರ್ಯಾಚರಣೆಗೆ ಅವಕಾಶ ನಿರಾಕರಿಸಿ ಕರ್ನಾಟಕ ಹೈಕೋರ್ಟ್ ಈಗಾಗಲೇ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸಾರಿಗೆ ‌ಇಲಾಖೆ ನೂರಾರು ಬೈಕ್ ಟ್ಯಾಕ್ಸಿಗಳನ್ನು ಸೀಜ್ ಮಾಡಿದೆ. ಹೀಗಾಗಿ ಬೈಕ್ ಟ್ಯಾಕ್ಸಿ ಓಡಿಸುತ್ತಿದ್ದವರು ಇದೀಗ ಸ್ವಿಗ್ಗಿ, ಜೊಮೆಟೋ, ಪೋರ್ಟರ್ ಸೇರಿದಂತೆ ಆನ್ಲೈನ್ ಡೆಲಿವೆರಿ ಆಯಪ್ಗಳ ಮೊರೆ ಹೋಗಿದ್ದಾರೆ.

ಆದರೆ ಆನ್ಲೈನ್ ಡೆಲಿವೆರಿ ಆಯಪ್ಗಳನ್ನು ಈಗಾಗಲೇ ಲಕ್ಷಾಂತರ ಯುವಕರು ಬಳಸಿ ಜೀವನ ನಡೆಸುತ್ತಿದ್ದಾರೆ. ಬೈಕ್ ಟ್ಯಾಕ್ಸಿ ಯುವಕರು ಈಗ ಆನ್ಲೈನ್ ಡೆಲಿವರಿ ಆಯಪ್ಗಳಿಗೆ ಶಿಫ್ಟ್ ಆಗಿರುವುದರಿಂದ ಸರಿಯಾಗಿ ಆರ್ಡರ್ ಸಿಗದೆ ಕಂಗಲಾಗಿದ್ದಾರೆ.

ಬೈಕ್ ಟ್ಯಾಕ್ಸಿ ಹುಡುಗರನ್ನು ಕೇಳುವವರೇ ಇಲ್ಲ. ಸರ್ಕಾರ ಅನುಮತಿ ನೀಡುವ ಸಂದರ್ಭದಲ್ಲೇ ಇವೆಲ್ಲವನ್ನೂ ನೋಡಿ ಅನುಮತಿ ನೀಡಬೇಕಿತ್ತು. ಈಗ ಏಕಾಏಕಿ ಯೆಲ್ಲೋ ಬೋರ್ಡ್ ಬೇಕು ಅಂದರೆ ಕಷ್ಟ ಆಗುತ್ತದೆ. ಬೈಕ್ ಟ್ಯಾಕ್ಸಿ ಓಡಿಸುತ್ತಿದ್ದವರು ಕಂಗಲಾಗಿದ್ದಾರೆ. ಬೈಕ್ ಟ್ಯಾಕ್ಸಿ ಓಡಿಸುತ್ತಿದ್ದವರು ಫುಡ್ ಡೆಲಿವರಿ ಮಾಡಲು ಮುಂದಾಗಿದ್ದಾರೆ. ಇನ್ನೂ ಕೆಲವರು ಕೂಲಿ ಕೆಲಸ ಮಾಡಲು ಮುಂದಾಗಿದ್ದಾರೆ ಎಂದು ಡೆಲಿವರಿ ಬಾಯ್ಸ್ ಅಸೋಸಿಯೇಷನ್ ಹೇಳಿದೆ.

ಆನ್ಲೈನ್ ಡೆಲಿವರಿ ಬೈಕ್ಗಳಿಗೂ ಕಡಿವಾಣ?

ಬೈಕ್ ಟ್ಯಾಕ್ಸಿ ನಿಷೇಧದ ಬಳಿಕ ಸ್ವಿಗ್ಗಿ, ಜೊಮೆಟೋದಂಥ ಆನ್ಲೈನ್ ಡೆಲಿವರಿ ಮಾಡುವ ಬೈಕ್ಗಳಿಗೂ ಕಡಿವಾಣ ಬೀಳಲಿದೆಯೇ ಎಂಬ ಅನುಮಾನ ಕಾಡತೊಡಗಿದೆ. ಖಾಸಗಿ ಬೈಕ್ ಬಳಸದಂತೆ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಇದರಿಂದ ಗಿಗ್ ಕಾರ್ಮಿಕರಲ್ಲಿ ಆತಂಕ ಶುರುವಾಗಿದೆ. ಅಮೆಜಾನ್, ಫ್ಲಿಪ್‌ಕಾರ್ಟ್, ಸ್ವಿಗ್ಗಿ, ಜೊಮೆಟೋದಂಥ ಇ-ಕಾಮರ್ಸ್, ಕ್ವಿಕ್ ಕಾಮರ್ಸ್ ಉದ್ದೇಶಕ್ಕೆ ಖಾಸಗಿ ವಾಹನ ಬಳಸುವವರಿಗೂ ಸಮಸ್ಯೆ ಎದುರಾಗಲಿದೆಯಾ ಎಂಬ ಆತಂಕ ಶುರುವಾಗಿದೆ.

ಕೇಂದ್ರ ಸರ್ಕಾರ ಹೇಳುವುದೇನು?

ಗಿಗ್ ಕಾರ್ಮಿಕರ ಅಪಾಯ ಮತ್ತು ಸಂಚಾರ ಸುರಕ್ಷತೆ ಬಗ್ಗೆ ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಸಂಚಾರ ನಿಯಮ ಉಲ್ಲಂಘನೆ, ಸಾರ್ವಜನಿಕ ಸುರಕ್ಷತಾ ಅಪಾಯ, ನಗರ ಸಂಚಾರ ದಟ್ಟಣೆ ಉಲ್ಲೇಖಿಸಿ, ಇ-ಕಾಮರ್ಸ್ ಮತ್ತು ಕ್ವಿಕ್ -ಕಾಮರ್ಸ್ ಪ್ಲಾಟ್‌ಫಾರ್ಮ್ ಗಿಗ್ ಕಾರ್ಮಿಕರು ಖಾಸಗಿ ವಾಹನ ಬಳಸುತ್ತಿರುವ ಕುರಿತು ಕೇಂದ್ರ ಸಾರಿಗೆ ಇಲಾಖೆ ಕಳವಳ ವ್ಯಕ್ತಪಡಿಸಿದೆ.

ಈ ಬಗ್ಗೆ ನೋವು ತೊಡಿಕೊಂಡ ಆನ್ಲೈನ್ ಡೆಲಿವರಿ ಬಾಯ್ ಒಬ್ಬರು, ನಿನ್ನೆ-ಮೊನ್ನೆಯಿಂದ ನಾವು ವೈಟ್ ಬೋರ್ಡ್ ಬೈಕ್ನಲ್ಲಿ ಆನ್ಲೈನ್ ಡೆಲಿವೆರಿ ಮಾಡುತ್ತಿಲ್ಲ. ತುಂಬಾ ವರ್ಷಗಳಿಂದ ಮಾಡುತ್ತಿದ್ದೇವೆ. ಈಗ ದಿಢೀರಾಗಿ ಯೆಲ್ಲೋ ಬೋರ್ಡ್ ಬೇಕು ಅಂದರೆ ಎಲ್ಲಿಂದ ತರುವುದು. ಈಗಿರುವ ಬೈಕ್ಗೆ ಮಾಡಿರುವ ಸಾಲವೇ ಇನ್ನೂ ಮುಗಿದಿಲ್ಲ. ಹೀಗಿರುವಾಗ ಹೊಸ ಬೈಕ್ ತೆಗೆದುಕೊಂಡರೆ ಅದಕ್ಕೂ ಸಾಲ ತೆಗೆದುಕೊಳ್ಳಬೇಕು. ಆರಂಭದಲ್ಲೇ ಹೇಳಿದ್ದರೆ ನಾವು ಯೆಲ್ಲೋ ಬೋರ್ಡ್ ಬೈಕ್ ಅನ್ನೇ ತೆಗೆದುಕೊಳ್ಳುತ್ತಿದ್ದೆವು. ಈ ಬೈಕ್ ಅನ್ನೇ ಉಚಿತವಾಗಿ ಯೆಲ್ಲೋ ಬೋರ್ಡ್ ಮಾಡಿಕೊಡಲಿ‌ ಇದರಿಂದ ನಮಗೆ ತುಂಬಾ ಸಹಾಯ ಆಗುತ್ತದೆ ಎಂದಿದ್ದಾರೆ.

ರ್ಯಾಪಿಡೋ ಬ್ಯಾನ್ ಆಗುವ ಮೊದಲು ಪ್ರತಿದಿನ ಒಂದು ಸಾವಿರ ರುಪಾಯಿ ಆದಾಯ ಗಳಿಸುತ್ತಿದ್ದೆವು. ಬ್ಯಾನ್ ಆದ ಮೇಲೆ ಪ್ರತಿದಿನ 500 ರುಪಾಯಿ ಆದಾಯ ಬರುತ್ತಿದೆ. ರ್ಯಾಪಿಡೋ ಬ್ಯಾನ್ ಆಗಿರುವುದಕ್ಕೆ ಎಲ್ಲಾ ರ್ಯಾಪಿಡೋ ಹುಡುಗರು ಡೆಲಿವೆರಿ ಮಾಡಲು ಬಂದಿದ್ದಾರೆ. ಕಳೆದ ಎರಡು ವರ್ಷದಿಂದ ಸ್ವಿಗ್ಗಿಯಲ್ಲಿ ಡೆಲಿವೆರಿ ಮಾಡುತ್ತಿದ್ದೇನೆ ಎಂದು ಡೆಲಿವೆರಿ ಬಾಯ್ ಸೋಮಿತ್ರ ನಾಥ್‌ ಎಂಬವರು ಅಳಲು ತೋಡಿಕೊಂಡಿದ್ದಾರೆ.

ಒಟ್ಟಿನಲ್ಲಿ ಬೈಕ್ ಟ್ಯಾಕ್ಸಿ ನಿಷೇಧದ ಬೆನ್ನಲ್ಲೇ ಬೈಕ್ ಓಡಿಸುತ್ತಿದ್ದ ಹುಡುಗರು ಆನ್ಲೈನ್ ಡೆಲಿವರಿ ಮಾಡಲು ಮುಂದಾಗಿದ್ದಾರೆ. ಇದರಿಂದ ಅಲ್ಲೂ ಸರಿಯಾಗಿ ಆರ್ಡರ್ ಸಿಗದೆ, ಇತ್ತ ಬೈಕ್ ಟ್ಯಾಕ್ಸಿಯೂ ಇಲ್ಲದೆ ಕಂಗಲಾಗಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *