ಹಂದಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು: ಕಲಬುರಗಿಯಲ್ಲಿ ಘಟನೆ

ಕಲಬುರಗಿ:-ಹಂದಿಗೆ ಡಿಕ್ಕಿ ಹೊಡೆದು ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕುಸನೂರ ರಸ್ತೆಯ ಕೃಷ್ಣಾ ನಗರ ಬಸ್ ನಿಲ್ದಾಣ ಹತ್ತಿರ ನಡೆದಿದೆ.
ನಜೀರೋದ್ದಿನ್ ಮೃತಪಟ್ಟವರು.
ಇವರು ಕುಸನೂರ ಗ್ರಾಮದ ಶರಣು ಎಂಬುವವರ ಬಳಿ ಟಿಪ್ಪರ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಬೈಕ್ ಮೇಲೆ ಕುಸನೂರ ಕಡೆ ಹೋಗುತ್ತಿದ್ದಾಗ ಕೃಷ್ಣಾ ನಗರ ಬಸ್ ನಿಲ್ದಾಣ ಹತ್ತಿರ ಹಂದಿಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದೆ.
