ಟ್ರ್ಯಾಕ್ಟರ್‌ಗೆ ಬೈಕ್ ಢಿಕ್ಕಿ – ನಾಲ್ಕು ವರ್ಷದ ಮಗುವಿನ ದುಃಖಕರ ಸಾವು

ಚಾಮರಾಜನಗರ : ಟ್ರ್ಯಾಕ್ಟರ್ ಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ನಾಲ್ಕು ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ಕೊಳ್ಳೇಗಾಲ ತಾಲ್ಲೂಕಿನ ಚಿಲಕವಾಡಿ ಬಳಿ ನಡೆದಿದೆ. ಕೊಳ್ಳೇಗಾಲ ತಾಲ್ಲೂಕಿನಚಿಲಕವಾಡಿ ಬಳಿ ನಡೆದಿದೆ. ಕೊಳ್ಳೇಗಾಲ ತಾಲ್ಲೂಕಿನ ಗುಂಡೇಗಾಲ ಗ್ರಾಮದ ನಂಜುಂಡಸ್ವಾಮಿ,ಕಾವ್ಯ ದಂಪತಿಯ ಪುತ್ರಿ ಹರ್ಷಿತಾ ಮೃತಪಟ್ಟ ಮಗು. ಮಗಳ ಜೊತೆಗೆ ಮೈಸೂರಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಎದುರಿಗೆ ಇದ್ದ ಟ್ರ್ಯಾಕ್ಟರ್ ಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ದಂಪತಿ ಮತ್ತು ಮಗು ಗಾಯಗೊಂಡಿದ್ದಾರೆ.
ಹರ್ಷಿತಾಳಿಗೆ ತೀವ್ರತರ ಪೆಟ್ಟಾಗಿದ್ದು, ಆಸ್ಪತ್ರೆಗೆ ಸೇರಿಸಲು ತರಳುತ್ತಿರುವಾಗಲೇ ಹರ್ಷಿತ ಮೃತಪಟ್ಟಿದ್ದಾಳೆ
ಮಾಂಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

