Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬಿಹಾರ ಚುನಾವಣೆ ಫೀವರ್ ಬೆಂಗಳೂರಿಗೂ ವಿಸ್ತರಣೆ: 5 ಲಕ್ಷಕ್ಕೂ ಹೆಚ್ಚು ಬಿಹಾರಿ ಮತದಾರರನ್ನು ಸೆಳೆಯಲು ಬಿಜೆಪಿ, ‘ಜನ್ ಸುರಾಜ್’ ಸ್ಪರ್ಧೆ

Spread the love

ಬಿಹಾರ ವಿಧಾನಸಭಾ ಚುನಾವಣೆ(Bihar Assembly Election)ಗೆ ದಿನಾಂಕಗಳು ಘೋಷಣೆಯಾಗಿದ್ದು, ಎರಡು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಬಿಜೆಪಿ ಹಾಗೂ ಈಗಷ್ಟೇ ಕಣ್ತೆರೆದಿರುವ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷ ಬೆಂಗಳೂರಿನಲ್ಲಿರುವ ಬೆಂಗಳೂರಿನಲ್ಲಿರುವ ಬಿಹಾರಿಗಳನ್ನು ಚುನಾವಣೆಗೆ ಸಜ್ಜುಗೊಳಿಸಲು ಮುಂದಾಗಿದೆ. ಈ ಎರಡೂ ಪಕ್ಷಗಳು ಕಾಂಗ್ರೆಸ್​​ಗಿಂತ ಹಲವು ಹೆಜ್ಜೆಗಳನ್ನು ಮುಂದಿರಿಸಿದ್ದಾರೆ.

ಕರ್ನಾಟಕದಲ್ಲಿ ಬಿಹಾರಿಗಳನ್ನು ಚುನಾವಣೆಗೆ ಸಜ್ಜುಗೊಳಿಸಲು ಕಾಂಗ್ರೆಸ್​ ಯಾವುದೇ ಅಭಿಯಾನವನ್ನು ಕೈಗೊಂಡಿಲ್ಲ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ಬಿಹಾರದಲ್ಲಿ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮತ ಎಣಿಕೆ ನವೆಂಬರ್ 14 ರಂದು ನಡೆಯಲಿದೆ. ಕರ್ನಾಟಕದಲ್ಲಿ ವಾಸವಿರುವ ಇತರ ರಾಜ್ಯಗಳ ಜನರೊಂದಿಗೆ ವ್ಯವಹರಿಸುವ ಬಿಜೆಪಿಯ ವಿವಿಧ ಭಾಷಿಕ ಪ್ರಕೋಷ್ಟ (ವಿಬಿಪಿ), ಮಾರ್ಚ್‌ನಲ್ಲಿ ಬಿಹಾರ ದಿವಸ್ ಆಚರಿಸುವ ಮೂಲಕ ತನ್ನ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿತು.

ಬೆಂಗಳೂರು ಮತ್ತು ಸುತ್ತಮುತ್ತ ಸುಮಾರು ಐದು ಲಕ್ಷ ಬಿಹಾರಿಗಳಿದ್ದಾರೆ ಎಂದು ಅಂದಾಜು ಮಾಡಲಾಗಿದೆ ಎಂದು ವಿಬಿಪಿ ರಾಜ್ಯ ಸಹ-ಸಂಚಾಲಕ ಸನ್ನಿ ರಾಜ್ ಹೇಳಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಯುಗೆ ಸಮಾನ ಸೀಟು ಹಂಚಿಕೆ ಸಾಧ್ಯತೆ

ಭಾನುವಾರ, ನಾವು ಬ್ಯಾಟರಾಯನಪುರದಲ್ಲಿ ಒಂದು ಕಾರ್ಯಕ್ರಮವನ್ನು ನಡೆಸಲಾಯಿತು, ಅಲ್ಲಿ ಬಿಜೆಪಿ ಸಂಸದ ಮನೋಜ್ ತಿವಾರಿ, ಬಿಹಾರ ರಾಜ್ಯ ಕಾರ್ಯದರ್ಶಿ ರತ್ನೇಶ್ ಕುಶ್ವಾಹ ಮತ್ತು ಇತರ ಪಕ್ಷದ ನಾಯಕರು ಹಾರಿಗಳನ್ನು ಉದ್ದೇಶಿಸಿ ಮಾತನಾಡಿದರು ಎಂದು ಸನ್ನಿ ರಾಜ್ ತಿಳಿಸಿದ್ದಾರೆ.

ತಮ್ಮ ರಾಜ್ಯದಲ್ಲಿ ಚುನಾವಣಾ ಸಂಬಂಧಿತ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಇಚ್ಛಿಸುವ ಬಿಹಾರಿಗಳನ್ನು ಬೆಂಗಳೂರಿನಿಂದ ಕಳುಹಿಸಲಾಗುವುದು ಎಂದು ರಾಜ್ ಹೇಳಿದರು. ಈ ವಾರದ ಆರಂಭದಲ್ಲಿ, ಜನ್ ಸುರಾಜ್‌ನ ಬಿಹಾರದ ಅಧ್ಯಕ್ಷ ಮನೋಜ್ ಭಾರ್ತಿ ಬಿಹಾರಿ ಕೂಡ ಬೆಂಗಳೂರಿಗೆ ಬಂದಿದ್ದರು.

ನಾವು ಏಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ವಾಸಿಸುವ ಬಿಹಾರದ ಜನರನ್ನು ತಲುಪಲು ಪ್ರಾರಂಭಿಸಿದ್ದೇವೆ. ಇಲ್ಲಿಯವರೆಗೆ, ನಾವು 20,000 ಬಿಹಾರಿಗಳನ್ನು ತಲುಪಿದ್ದೇವೆ. ಇದರಲ್ಲಿ ಸಂಘಮಿತ್ರ ಎಕ್ಸ್‌ಪ್ರೆಸ್ ಮತ್ತು ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಜನರನ್ನು ಭೇಟಿ ಮಾಡುವುದು ಕೂಡ ಸೇರಿದೆ ಎಂದು ಜನ್ ಸುರಾಜ್ ಬೆಂಗಳೂರಿನ ಸಂಯೋಜಕರಾದ ಡಾ. ನಿಶ್ಚಿತ್ ಕೆ.ಆರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುಮಾರು ಎಂಟು ಲಕ್ಷ ಬಿಹಾರಿಗಳು ಕಾರ್ಮಿಕರಿದ್ದಾರೆ,ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿಯೇ 4,000 ಬಿಹಾರಿಗಳಿದ್ದಾರೆ. ಜನ್ ಸುರಾಜ್ ಪಕ್ಷವು 4,500 ಬಿಹಾರಿಗಳನ್ನು ಒಳಗೊಂಡ ಒಂದು ಡಜನ್‌ಗೂ ಹೆಚ್ಚು ವಾಟ್ಸಾಪ್ ಗುಂಪುಗಳನ್ನು ರಚಿಸಿದೆ. ಬೆಂಗಳೂರಿನಲ್ಲಿ ತಮ್ಮ ಪಕ್ಷದ 120 ಜನರು ಕೆಲಸ ಮಾಡುತ್ತಿದ್ದಾರೆ ಎಂದು ನಿಶ್ಚಿತ್ ಹೇಳಿದರು.

ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿರುವ ಬಿಹಾರಿಗಳನ್ನು ಸಂಪರ್ಕಿಸಲಿದೆ, ಅವರ ಬೆಂಬಲವನ್ನು ಪಡೆದೇ ಪಡೆಯುತ್ತೇವೆ ಎಂದು ಕಾಂಗ್ರೆಸ್​ನ ಹಿರಿಯ ಎಂಎಲ್​ಸಿಯೊಬ್ಬರು ಹೇಳಿದ್ದಾರೆ. ಕರ್ನಾಟಕದಲ್ಲಿ ಲಕ್ಷಾಂತರ ಬಿಹಾರಿಗಳು ಕೆಲಸ ಮಾಡುತ್ತಿದ್ದಾರೆ ಎಂದು ಎಲ್ಲಾ ಪಕ್ಷಗಳು ಹೇಳಿಕೊಂಡರೂ, ಇಲ್ಲಿನ ಕಾರ್ಮಿಕ ಇಲಾಖೆಯು ಬಿಹಾರದ 22,374 ಉದ್ಯೋಗಿಗಳು ಅಥವಾ ಕಾರ್ಮಿಕರ ಮಾಹಿತಿಯನ್ನು ಮಾತ್ರ ಹೊಂದಿದೆ.


Spread the love
Share:

administrator

Leave a Reply

Your email address will not be published. Required fields are marked *