Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬಿಹಾರ: 16 ವರ್ಷದ ಬಾಲಕಿಗೆ 10 ಜನರಿಂದ ಸಾಮೂಹಿಕ ಅತ್ಯಾಚಾರ – ಇಬ್ಬರು ಆರೋಪಿಗಳ ಬಂಧನ

Spread the love

ಬಿಹಾರ: ಬಹಿರ್ದೆಸೆಗೆ ತೆರಳಿದ್ದ ಅಪ್ರಾಪ್ತೆಯನ್ನು ಅಪಹರಿಸಿ, 10 ಜನರ ಗುಂಪು ಸಾಮೂಹಿಕ ಅತ್ಯಾಚಾರ ನಡೆಸಿದ ಭಯಾನಕ ಪ್ರಕರಣ ಬಿಹಾರದಲ್ಲಿ ನಡೆದಿದೆ. ಮಾರ್ಚ್​ 15 ರಂದು ಈ ಕೃತ್ಯ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಜಿಲ್ಲೆಯ ಗ್ರಾಮವೊಂದರ 16 ವರ್ಷದ ಬಾಲಕಿ ರಾತ್ರಿ ಹೊತ್ತಲ್ಲಿ ಬಹಿರ್ದೆಸೆಗೆ ತೆರಳಿದಾಗ ಆರೋಪಿಗಳು ಅಪಹರಿಸಿ, ತೋಟವೊಂದರಲ್ಲಿ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ. ಇದರಿಂದ ಆಕೆ ಪ್ರಜ್ಞೆ ತಪ್ಪಿದ್ದಳು. ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.

ಘಟನೆಯ ವಿವರ: ಕುಟುಂಬಸ್ಥರು ನೀಡಿದ ದೂರಿನ ಪ್ರಕಾರ, ಮಾರ್ಚ್​ 15ರ ಹೋಳಿ ಆಚರಣೆಯ ದಿನದಂದು ಈ ಪ್ರಕರಣ ನಡೆದಿದೆ. ರಾತ್ರಿ 9 ಗಂಟೆ ಸುಮಾರಿನಲ್ಲಿ ಬಾಲಕಿ ಬಹಿರ್ದೆಸೆಗೆ ತೆರಳಿದ್ದಾಳೆ. ಪಾನಮತ್ತರಾಗಿದ್ದ 10 ಯುವಕರ ಗುಂಪು ಆಕೆಯನ್ನು ಬಲವಂತವಾಗಿ ಸಮೀಪದ ತೋಟಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.

ಯುವತಿ ಬಹಳ ಸಮಯವಾದರೂ ಹಿಂತಿರುಗದಿದ್ದಾಗ, ಕುಟುಂಬಸ್ಥರು ಆಕೆಯನ್ನು ಹುಡುಕಾಡಿದ್ದಾರೆ. ಈ ವೇಳೆ, ತೋಟದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದಾಳೆ. ಮೊದ ಮೊದಲು ಆಕೆ ಘಟನೆಯ ಬಗ್ಗೆ ಯಾರಲ್ಲೂ ಬಾಯಿಬಿಟ್ಟಿಲ್ಲ. ಬಳಿಕ ತಾಯಿಯ ಒತ್ತಾಯದ ಬಳಿಕ ತನ್ನ ಮೇಲಾದ ಪೈಶಾಚಿಕ ಕೃತ್ಯದ ಬಗ್ಗೆ ತಿಳಿಸಿದ್ದಾಳೆ.

ವಿಡಿಯೋ ವೈರಲ್​ ಬೆದರಿಕೆ: ಕಿಡಿಗೇಡಿಗಳ ಗುಂಪು ಸಾಮೂಹಿಕ ಅತ್ಯಾಚಾರದ ವಿಡಿಯೋ ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದಲ್ಲಿ ವೈರಲ್​ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಬಾಲಕಿ ಮೊದಲು ಯಾರಿಗೂ ತಿಳಿಸಿರಲಿಲ್ಲ. ಮಾರ್ಚ್​ 25 ರಂದು ಕುಟುಂಬಸ್ಥರು ಆರೋಪಿಗಳ ವಿರುದ್ಧ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ. ಇಬ್ಬರು ಆರೋಪಿಗಳ ಬಂಧನ: ಸಂತ್ರಸ್ತೆಯು 10 ಮಂದಿ ಆರೋಪಿಗಳ ಹೆಸರನ್ನು ದೂರಿನಲ್ಲಿ ನಮೂದಿಸಿದ್ದಾರೆ. ಇದರಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡ ಇನ್ನಿತರರಿಗಾಗಿ ಹುಡುಕಾಟ ನಡೆಯುತ್ತಿದೆ. ಘಟನಾ ಸ್ಥಳದಲ್ಲಿ ರಕ್ತದ ಕಲೆಗಳು ಕಂಡು ಬಂದಿವೆ. ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಅತ್ಯಾಚಾರದ ಬಳಿಕ ವಿಡಿಯೋ ಮಾಡಿದ್ದು, ಘಟನೆ ಹೊರಬಂದರೆ ವೈರಲ್​ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಸಂತ್ರಸ್ತೆ ಕೃತ್ಯ ನಡೆದಿದ್ದನ್ನು ಮುಚ್ಚಿಟ್ಟಿದ್ದರು. ಇದೀಗ, ಹೇಳಿಕೆ ನೀಡಿದ್ದಾರೆ. ಕೋರ್ಟ್​ ಮುಂದೆ ಸಾಕ್ಷ್ಯಗಳನ್ನು ಸಲ್ಲಿಸಲಾಗುವುದು. ಆರೋಪಿಗಳಿಗೆ ಶಿಕ್ಷೆ ಕೊಡಿಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *