ಬಿಗ್ ಬಾಸ್ ಖ್ಯಾತಿಯ ಅಬ್ದು ರೋಜಿಕ್ ದುಬೈನಲ್ಲಿ ಬಂಧನ: ಕಳ್ಳತನ ಆರೋಪ?

ದುಬೈ: ತಜಕಿಸ್ತಾನದ ಗಾಯಕ ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿ ಅಬ್ದು ರೋಜಿಕ್ ಅವರನ್ನು ಶನಿವಾರ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ಮಾಂಟೆನೆಗ್ರೊದಿಂದ ಶನಿವಾರ ಬೆಳಿಗ್ಗೆ 5 ಗಂಟೆಗೆ ದುಬೈಗೆ ಬಂದಿಳಿದ ಕೆಲವೇ ಹೊತ್ತಿನಲ್ಲಿ ರೋಸಿಕ್ ಅವರನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ನಿರ್ವಹಣಾ ಕಂಪನಿ ಖಲೀಜ್ ದೃಢಪಡಿಸಿದೆ.
ಬಂಧನಕ್ಕೆ ನಿಖರ ಕಾರಣಗಳನ್ನು ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ ಎಂದು ಹೇಳಲಾಗಿದ್ದು ಮಾಹಿತಿ ಪ್ರಕಾರ “ಕಳ್ಳತನದ ಆರೋಪದ ಮೇಲೆ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪ್ರಾಥಮಿಕ ಮೂಲಗಳು ಮಾಹಿತಿ ನೀಡಿವೆ.
ಬಿಗ್ ಬಾಸ್ ಮೂಲಕ ಜನಮನ್ನಣೆ:
ರೋಜಿಕ್ ಒಬ್ಬ ಜನಪ್ರಿಯ ತಜಕಿಸ್ತಾನಿ ಗಾಯಕನಾಗಿದ್ದು, ಇದಕ್ಕೂ ಮುಖ್ಯವಾಗಿ ಬಿಗ್ ಬಾಸ್ 16 ರಿಯಾಲಿಟಿ ಶೋ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅವರ ಜನಪ್ರಿಯತೆ ಹೆಚ್ಚಾಯಿತು. ಅವರ ಓಹಿ ದಿಲಿ ಜೋರ್, ಚಾಕಿ ಚಾಕಿ ಬೋರಾನ್ ಮತ್ತು ಮೋಡರ್ ಸೇರಿದಂತೆ ಹಲವು ಹಾಡುಗಳು ಜನಪ್ರಿಯತೆ ಗಳಿಸಿದೆ.