ಬಿಗ್‌ಬಾಸ್ ಸ್ಪರ್ಧಿಗಳ ಮರುಪ್ರವೇಶ; ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿಗಾಗಿ ಶೂಟಿಂಗ್ ವಿಳಂಬ

ಜಾಲಿವುಡ್ ಸ್ಟುಡಿಯೋಸ್ ಬೀಗ ಓಪನ್ ಆಗಿದೆ. ಒಂದು ಕಡೆ ಜಾಲಿವುಡ್ ಹಾಗೂ ಬಿಗ್‌ಬಾಸ್‌ಗೆ ಗುಡ್ ನ್ಯೂಸ್ ಸಿಕ್ಕಿದೆ. ರಾತ್ರೋರಾತ್ರಿ ಬಿಗ್‌ಬಾಸ್ ಸ್ಪರ್ಧಿಗಳು ವಾಪಸ್ ಬಿಗ್‌ಹೌಸ್ ಸೇರಿದ್ದಾರೆ. ಆದರೆ, ಬಿಗ್‌ಬಾಸ್ ಮನೆಯೊಳಗೆ ಹೋದರೂ ಶೂಟಿಂಗ್ ಇನ್ನೂ ಶುರುವಾಗಿಲ್ಲ.

ಬಿಗ್‌ಬಾಸ್ ಆಡಳಿತ ಮಂಡಳಿ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಆದೇಶ ಕಾಪಿ ಬರೋವರೆಗೂ ಶೂಟಿಂಗ್ ಶುರು ಮಾಡಲು ಹಿಂದೇಟು ಹಾಕಿದೆ. ಡಿಸಿಎಂ ಡಿಕೆ ಶಿವಕುಮಾರ್ ಜಾಲಿವುಡ್ ಸ್ಟುಡಿಯೋಸ್ ಓಪನ್ ಮಾಡಿಸಿದರೂ ಶುರುವಾಗಿಲ್ಲ ಬಿಗ್‌ಬಾಸ್ ಶೂಟಿಂಗ್. ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಸಿಗುವ ತನಕ ಬಿಗ್‌ಬಾಸ್ ಆಯೋಜಕರ ತಂಡ ಶೂಟಿಂಗ್ ಶುರು ಮಾಡುತ್ತಿಲ್ಲ
ಅಂದಹಾಗೆ ಇನ್ನು ಎರಡು ದಿನಗಳ ಕಾಲ ಆಗುವಷ್ಟು ಎಪಿಸೋಡ್ ಬ್ಯಾಂಕಿಂಗ್ ಇರುವ ಧೈರ್ಯ ಬಿಗ್‌ಬಾಸ್ ಆಡಳಿತ ಮಂಡಳಿಗಿದೆ. ಹೀಗಾಗಿ, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಸಿಗುವವರೆಗೂ ಕಾಯುತ್ತಿದೆ. ಬಿಗ್‌ಬಾಸ್ ಆಡಳಿತ ಮಂಡಳಿ. ‘ಪಬ್ಲಿಕ್ ಟಿವಿ’ಗೆ ಬಿಗ್‌ಬಾಸ್ ಆಡಳಿತ ಮಂಡಳಿಯ ಉನ್ನತ ಮೂಲಗಳ ಮಾಹಿತಿ ಸಿಕ್ಕಿದೆ.