Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಟ್ರಂಪ್ ಆಡಳಿತಕ್ಕೆ ಬಿಗ್ ಶಾಕ್: ಇರಾನ್ ವಿರುದ್ಧದ ಯುದ್ಧ ವಿರೋಧಿಸಿ ಅಮೆರಿಕದ ಭಯೋತ್ಪಾದನಾ ನಿಗ್ರಹ ಕೇಂದ್ರದ ಮುಖ್ಯಸ್ಥ ರಾಜೀನಾಮೆ

Spread the love

ವಾಷಿಂಗ್ಟನ್: ಇರಾನ್ ವಿರುದ್ಧ ಇಸ್ರೇಲ್ ಹಾಗೂ ಅಮೆರಿಕ ಜಂಟಿಯಾಗಿ ನಡೆಸುತ್ತಿರುವ ಮಿಲಿಟರಿ ದಾಳಿಯನ್ನು ವಿರೋಧಿಸಿ, ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ಮುಖ್ಯಸ್ಥ ಜೋಸೆಫ್ ಕೆಂಟ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
ತಮ್ಮರಾಜೀನಾಮೆ ಪತ್ರದಲ್ಲಿ ಅವರು, ‘ಇರಾನ್ ನಿಂದ ಅಮೆರಿಕಕ್ಕೆ ತಕ್ಷಣದ ಯಾವುದೇ ಭದ್ರತಾ ಬೆದರಿಕೆ ಇರಲಿಲ್ಲ. ಇಸ್ರೇಲ್ ನ ಒತ್ತಡದ ಹಿನ್ನೆಲೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುದ್ಧ ಆರಂಭಿಸಲು ಮುಂದಾದರು’ ಎಂದು ಆರೋಪಿಸಿದ್ದಾರೆ.
‘ಇರಾನ್ ವಿರುದ್ಧದ ಯುದ್ಧವನ್ನು ಬೆಂಬಲಿಸಲು ನನ್ನ ಆತ್ಮಸಾಕ್ಷಿ ಒಪ್ಪುವುದಿಲ್ಲ’ ಎಂದು ಸ್ಪಷ್ಟಪಡಿಸಿರುವ ಕೆಂಟ್, ತಮ್ಮ ನಿರ್ಧಾರ ನೈತಿಕ ನಿಲುವಿನ ಆಧಾರಿತವಾಗಿದೆ ಎಂದು ತಿಳಿಸಿದ್ದಾರೆ. ಇರಾನ್ ನಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆ ರಾಜೀನಾಮೆ ಸಲ್ಲಿಸಿರುವ ಟ್ರಂಪ್ ಆಡಳಿತದ ಮೊದಲ ಪ್ರಮುಖ ಅಧಿಕಾರಿ ಇವರಾಗಿದ್ದಾರೆ.

‘ನಾವು ಇಸ್ರೇಲ್‌ನ ಒತ್ತಡ ಹಾಗೂ ಅದರ ಅಮೆರಿಕದ ಒಳರಾಜಕೀಯದ ಮೇಲೆ ಇರುವ ಪ್ರಭಾವದ ಪರಿಣಾಮವಾಗಿ ಈ ಯುದ್ಧವನ್ನು ಪ್ರಾರಂಭಿಸಿದ್ದೇವೆ ಎಂಬುದು ಸ್ಪಷ್ಟವಾಗಿದೆ’ ಎಂದು ಅವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಜೂನ್ 2025ರವರೆಗೆ ಮಧ್ಯಪ್ರಾಚ್ಯದ ಯುದ್ಧಗಳು ಅಮೆರಿಕದ ಜೀವಹಾನಿ ಹಾಗೂ ಆರ್ಥಿಕ ನಷ್ಟಕ್ಕೆ ಕಾರಣವಾಗಿವೆ ಎಂಬುದು ಟ್ರಂಪ್‌ ಅವರಿಗೆ ತಿಳಿದಿತ್ತು. ಆದರೆ ಬಳಿಕ ಹಿರಿಯ ಇಸ್ರೇಲ್ ಅಧಿಕಾರಿಗಳು ಹಾಗೂ ಅಮೆರಿಕದ ಪ್ರಭಾವಶಾಲಿ ಮಾಧ್ಯಮ ವಲಯಗಳು ತಪ್ಪು ಮಾಹಿತಿಯನ್ನು ಹರಡಿದ ಪರಿಣಾಮ, ಇರಾನ್ ವಿರುದ್ಧ ಯುದ್ಧದ ವಾತಾವರಣ ನಿರ್ಮಾಣವಾಯಿತು ಎಂದು ಕೆಂಟ್ ಆರೋಪಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *