Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹೊಸ ವರ್ಷದ ದಿನವೇ ಉದ್ಯಮಿಗೆ ಬಿಗ್ ಶಾಕ್: ನಂಬಿಕಸ್ಥ ಕೆಲಸಗಾರರಿಂದಲೇ ಕೋಟಿ ಮೌಲ್ಯದ ಚಿನ್ನ ಲೂಟಿ!

Spread the love

ಬೆಂಗಳೂರು: ಉದ್ಯಮಿಯೊಬ್ಬರ ಮನೆಯಲ್ಲಿ ಮನೆ ಕೆಲಸಗಾರರೇ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನ ಕದ್ದಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಹೊಸ ವರ್ಷಾಚರಣೆಗೆಂದು ಕುಟುಂಬ ಬೇರೆ ರಾಜ್ಯಕ್ಕೆ ತೆರಳುವ ವೇಳೆ ಕೆಲಸಗಾರರ ಬಳಿ ಕೀ ಕೊಟ್ಟು ತೆರಳಿತ್ತು. ಇದನ್ನೇ ಬಂಡವಾಳ ಮಾಡಕೊಂಡು ಮನೆಯಲ್ಲಿ ಆರೋಪಿಗಳು ಕಳ್ಳತನ ನಡೆಸಿದ್ದಾರೆ ಎನ್ನಲಾಗಿದೆ.

ಡಿ.30ರಂದು ಸದಾಶಿವ ನಗರದ ಉದ್ಯಮಿ ಅಭಿಷೇಕ್ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಬರೋಬ್ಬರಿ 1.37 ಕೋಟಿ ರೂ. ಮೌಲ್ಯದ ಚಿನ್ನ, ವಾಚ್​​ಗಳನ್ನು ಕಳವು ಮಾಡಲಾಗಿದೆ. ಆ ಪೈಕಿ ಚಿನ್ನ 1.27 ಕೋಟಿ ರೂ. ಮೌಲ್ಯದಾಗಿದ್ದರೆ, ವಾಚ್​​ಗಳು 10 ಲಕ್ಷ ಬೆಲೆಬಾಳುವಂತದ್ದು ಎಂದು ತಿಳಿದುಬಂದಿದೆ. ಆರೋಪಿಗಳಾದ ಹಾಜಿರ ಬೇಗಂ ಮತ್ತುಆಕೆಯಪತಿ ಶಾಹೀರ್​​ಗೆ ಖಾಕಿ ಬಲೆ ಬೀಸಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದೆ.

ಪಶ್ಚಿಮ ಬಂಗಾಳ ಮೂಲದ ಹಾಜಿರ ಬೇಗಂ ಮತ್ತು ಶಾಹೀರ್​​ ದಂಪತಿ ಈ ಹಿಂದೆ 2022ರಿಂದ 2024ರ ವರೆಗೆ ಅಭಿಷೇಕ್ ಮನೆಯಲ್ಲೇ ಕೆಲಸ ಮಾಡಿದ್ದರು. ಆ ಬಳಿಕ ಕೆಲಸ ಬಿಟ್ಟಿದ್ದ ಇವರು ಮತ್ತೆ ಮತ್ತೆ 2025 ಡಿ.27ರಂದು ಕೆಲಸಕ್ಕೆ ಸೇರಿದ್ದರು. ಡಿ. 30ರಂದು ಹೊಸ ವರ್ಷಾಚರಣೆ ಸಲುವಾಗಿ ಕೊಯಮತ್ತೂರಿಗೆ ಅಭಿಷೇಕ್ ಕುಟುಂಬ ತೆರಳಿದ್ದು, ತಮ್ಮ ಅತ್ತೆಗೆ ಕೊಡು ಎಂದು ಹಾಜಿರಾ ಬಳಿ ಒಂದು ಕೀಯನ್ನು ಕೊಟ್ಟು ಹೋಗಿದ್ದರು. ಆದರೆ ಸಂಜೆಯಾದರೂ ಮನೆಯ ಕೀಯನ್ನ ಅತ್ತೆಗೆ ಹಾಜಿರಾ ಕೊಟ್ಟಿಲ್ಲ. ಹೀಗಾಗಿ ವಿಚಾರಿಸಲು ದೂರವಾಣಿ ಕರೆ ಮಾಡಲಾಗಿದ್ದು, ಆ ವೇಳೆ ಹಾಜಿರಾ ದಂಪತಿ ಮೊಬೈಲ್​​ ಸ್ವಿಚ್​​ಆಫ್​​ ಆಗಿತ್ತು. ಬಳಿಕ ತಮ್ಮ ಕಾರಿನ ಡ್ರೈವರ್ ಮೂಲಕ ಮನೆ ಪರಿಶೀಲನೆ ನಡೆಸಿದಾಗ, ಮನೆಯ ಕಬೋರ್ಡ್​​ಗಳು ಓಪನ್ ಆಗಿರೋದು ಬೆಳಕಿಗೆ ಬಂದಿದೆ.  979 ಗ್ರಾಂ ಚಿನ್ನಾಭರಣ ಮತ್ತು ವಾಚ್​​ಗಳನ್ನು ಕೆಲಸದವರು ಕದ್ದು ಎಸ್ಕೇಪ್​​ ಆಗಿರೋದು ಕುಟುಂಬಕ್ಕೆ ಗೊತ್ತಾಗಿದೆ.


Spread the love
Share:

administrator

Leave a Reply

Your email address will not be published. Required fields are marked *