ಬೆಂಗಳೂರಿಗರಿಗೆ ಬಿಗ್ ಶಾಕ್: ನೈಸ್ ರಸ್ತೆ ಟೋಲ್ ದರ ದುಬಾರಿ, ಜುಲೈ 1ರಿಂದಲೇ ಜಾರಿ!

ಬೆಂಗಳೂರಿಗರೇ ಇಲ್ಲಿ ಕೇಳಿ… ಟೋಲ್ ದರಗಳು ಇಂದಿನಿಂದ ದುಬಾರಿ.. ಹೌದು, ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಒಂದಾದ ನೈಸ್ ರಸ್ತೆಯ ಟೋಲ್ ದರಗಳು ಜುಲೈ 1ನೇ ತಾರೀಖು ಮಧ್ಯರಾತ್ರಿಯಿಂದಲೇ ಏರಿಕೆಯಾಗಿವೆ. ಈ ರಸ್ತೆಯು ನಗರದ ಹೊರವಲಯದಲ್ಲಿ ಸಂಚರಿಸುವವರಿಗೆ ಟೋಲ್ ದರ ಹೆಚ್ಚಳದಿಂದ ಜೇಬಿಗೆ ಕತ್ತರಿ ಬಿದ್ದಿದೆ.

ಹಾಗಿದ್ರೆ ಯಾವ ವಾಹನಗಳಿಗೆ ಎಷ್ಟು ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ ಎಂಬ ಹೆಚ್ಚಿನ ವಿವರ ಇಲ್ಲಿದೆ ನೋಡಿ.
ನೈಸ್ ರಸ್ತೆ ಟೋಲ್ ದರ ಏರಿಕೆ
ಬೆಮಗಳೂರಿನ ನೈಸ್ ರಸ್ತೆ ಟೋಲ್ ದರ ಏರಿಕೆಯ ಕುರಿತು ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸ್ (ನೈಸ್) ಲಿಮಿಟೆಡ್ ಮತ್ತು ಕರ್ನಾಟಕ ಸರ್ಕಾರ ಸೆಪ್ಟೆಂಬರ್ 4, 2000 ರಂದು ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಈ ದರಗಳನ್ನು ಪರಿಷ್ಕರಿಸಲಾಗಿದೆ. ಈ ಒಪ್ಪಂದದ ಅನುಸಾರವಾಗಿ, ನಿರ್ದಿಷ್ಟ ಅವಧಿಗಳಲ್ಲಿ ಟೋಲ್ ದರಗಳನ್ನು ಪರಿಷ್ಕರಿಸಲು ಅವಕಾಶವಿದೆ. ಅದರಂತೆ ಈಗ ದರ ಹೆಚ್ಚಳವನ್ನು ಮಾಡಲಾಗಿದೆ.
ನೈಸ್ ರಸ್ತೆ ಟೋಲ್ ದರ ಏರಿಕೆ ಹೊಸ ದರಗಳ ಪ್ರಕಾರ, ದ್ವಿಚಕ್ರ ವಾಹನಗಳು ಮತ್ತು ಕಾರುಗಳು ಪ್ರಯಾಣಿಸುವ ದೂರವನ್ನು ಆಧಾರಿಸಿ, ಪ್ರತಿ ಪ್ರಯಾಣಕ್ಕೆ 3 ರಿಂದ 5 ರೂಪಾಯಿಗಳಷ್ಟು ಹೆಚ್ಚುವರಿ ಶುಲ್ಕವನ್ನು ವಾಹನ ಸಾವರು ಪಾವತಿ ಮಾಡಬೇಕಾಗುತ್ತದೆ. ಇನ್ನು ಬಸ್‌ಗಳ ಟೋಲ್ ದರವು 10 ರಿಂದ 25 ರೂಪಾಯಿಗಳವರೆಗೆ ಹೆಚ್ಚಳವಾಗಿದೆ. ಇದು ಬಸ್ ಸಾರಿಗೆ ಸಂಸ್ಥೆಗಳ ಮೇಲೆ ಕೂಡ ಪರಿಣಾಮವನ್ನು ಬೀರಬಹುದು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬನಶಂಕರಿ, ತಾವರೆಕೆರೆ, ಎಲೆಕ್ಟ್ರಾನಿಕ್ಸ್ ಸಿಟಿ ಸೇರಿದಂತೆ ಹಲವು ಪ್ರದೇಶಗಳಿಗೆ ನೈಸ್ ರಸ್ತೆಯ ಮೂಲಕ ಬಸ್ ಸೇವೆಗಳನ್ನು ಒದಗಿಸುತ್ತದೆ. ಟೋಲ್ ದರ ಏರಿಕೆಯ ಪರಿಣಾಮವಾಗಿ ಬಿಎಂಟಿಸಿ ತನ್ನ ಬಸ್ ಟಿಕೆಟ್ ದರಗಳನ್ನು ಹೆಚ್ಚಿಸುವ ಸಾಧ್ಯತೆ ಕೂಡ ಹೆಚ್ಚಾಗಿ ಇದೆ. ಒಂದು ವೇಳೆ ಬಿಎಂಟಿಸಿ ಟಿಕೆಟ್ ದರವನ್ನು ಹೆಚ್ಚಿಸಿದರೆ, ಪ್ರಯಾಣಿಕರ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಬೀಳುತ್ತದೆ
ಪರಿಷ್ಕೃತ ಟೋಲ್ ಶುಲ್ಕಗಳು
ಹೂಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆಗೆ ಹೋಗುವ ವಾಹನಗಳಿಗೆ ಕಾರು 65 ರೂ. ಬಸ್ 195 ರೂ, ಟ್ರಕ್ 128 ರೂ ದ್ವಿಚಕ್ರ ವಾಹನಗಳಿಗೆ 30 ರೂ ಶುಲ್ಕಗಳು ಇವೆ. ಕನಕಪುರ ರಸ್ತೆಯಿಂದ ಕ್ಲೋವರ್‌ಲೀಫ್ ಜಂಕ್ಷನ್‌ಗೆ ಕಾರು 35 ರೂ, ಬಸ್ 95ರೂ.ಟ್ರಕ್ 60 ದ್ವಿಚಕ್ರ ವಾಹನಗಳಿಗೆ 10 ರೂ ಶುಲ್ಕಗಳು ಇವೆ.ಬನ್ನೇರುಘಟ್ಟ ರಸ್ತೆಯಿಂದ ಕನಕಪುರ ರಸ್ತೆಗೆ ಕಾರು 48ರೂ. ಬಸ್ 155 ರೂ, ಟ್ರಕ್ 98 ರೂ ದ್ವಿಚಕ್ರ ವಾಹನಗಳಿಗೆ 98 ರೂ ಶುಲ್ಕಗಳು ಇವೆ ಕ್ಲೋವರ್‌ಲೀಫ್ ಜಂಕ್ಷನ್‌ನಿಂದ ಮೈಸೂರು ಕಡಗೆ ಸಂಚಾರ ಮಾಡುವ ವಾಹನಗಳಿಗೆ ಕಾರು 33ರೂ. ಬಸ್ 85 ರೂ, ಟ್ರಕ್ 50 ರೂ ದ್ವಿಚಕ್ರ ವಾಹನಗಳಿಗೆ 10 ರೂ ಶುಲ್ಕಗಳು ಇವೆ
ನೈಸ್ ರಸ್ತೆಯು ಬೆಂಗಳೂರು ನಗರದ ಹೊರವಲಯದಲ್ಲಿ ಸಂಚರಿಸುವವರಿಗೆ ಒಂದು ಪ್ರಮುಖ ರಸ್ತೆಯಾಗಿದೆ. ಇದು ನಗರದ ದಕ್ಷಿಣ ಭಾಗವನ್ನು ಪೂರ್ವ ಮತ್ತು ಪಶ್ಚಿಮ ಭಾಗಗಳೊಂದಿಗೆ ಸಂಪರ್ಕಿಸುತ್ತದೆ. ಟೋಲ್ ದರ ಏರಿಕೆಯು ಈ ರಸ್ತೆಯಲ್ಲಿ ನಿತ್ಯ ಸಂಚರಿಸುವ ವಾಹನ ಸವಾರರಿಗೆ ಒಂದು ರೀತಿಯಲ್ಲಿ ಹೊರೆಯಾಗಲಿದೆ.
ಒಟ್ಟಾರೆಯಾಗಿ ಹೇಳುವುದಾದರೆ ನೈಸ್ ರಸ್ತೆಯ ಟೋಲ್ ದರಗಳ ಪರಿಷ್ಕರಣೆಯು ವಾಹನ ಸವಾರರ ಮೇಲೆ ಹಾಗೂ ಸಾರ್ವಜನಿಕ ಸಾರಿಗೆಯ ದರಗಳ ಮೇಲೂ ಕೂಡ ಹೆಚ್ಚಿನ ಪರಿಣಾಮ ಬೀರುವಂತಹ ಸಾಧ್ಯತೆ ಹೆಚ್ಚಾಗಿ ಇದೆ. ಜುಲೈ 1 ರಿಂದ ಹಲವಾರು ಬದಲಾವಣೆಗಳು ಜಾರಿಯಾಗಿ ಸಾರ್ವಜನಿಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.
