Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬಿಗ್ ಬಜೆಟ್ ‘ರಾಮಾಯಣ’ ಟೀಸರ್‌ಗೆ ಆರಂಭಿಕ ಹಿನ್ನಡೆ: ರಾಮ-ರಾವಣ ದರ್ಶನವೂ ವೀಕ್ಷಕರನ್ನು ಸೆಳೆಯಲಿಲ್ಲವೇ?

Spread the love

ಬಾಲಿವುಡ್‌ನ ಬಹು ನಿರೀಕ್ಷಿತ ಚಿತ್ರ ರಾಮಾಯಾಣ ಚಾಪ್ಟರ್‌ 1ರ ಇಂಟ್ರೊಡಕ್ಷನ್‌ ಗ್ಲಿಂಪ್ಸ್‌ ಅನ್ನು ಬಿಡುಗಡೆ ಮಾಡಲಾಯಿತು. ಸಂಪೂರ್ಣ ವಿಎಫ್‌ಎಕ್ಸ್‌ನಿಂದ ಕೂಡಿದ್ದ ಈ 3.03 ನಿಮಿಷದ ವಿಡಿಯೊದಲ್ಲಿ ಬ್ರಹ್ಮ, ವಿಷ್ಣು ಹಾಗೂ ಶಿವನ ಸೃಷ್ಟಿಯಾದ ರಾವಣ ಹಾಗೂ ತ್ಯಾಗ ಮತ್ತು ಧರ್ಮಕ್ಕೆ ಪ್ರತೀಕವಾದ ರಾಮನ ಪರಿಚಯವನ್ನು ಅತ್ಯುನ್ನತ ಮಟ್ಟದಲ್ಲಿ ರಚಿಸಲಾಗಿದ್ದು, ವೀಕ್ಷಕರ ಮನ್ನಣೆ ಗಳಿಸಿದೆ.

ಗ್ಲಿಂಪ್ಸ್‌ ವಿಎಫ್‌ಎಕ್ಸ್‌ಗೆ ಭಾರೀ ಮನ್ನಣೆ ವ್ಯಕ್ತವಾಗುತ್ತಿದ್ದು, ಎಡಿಟಿಂಗ್‌ಗಾಗಿ ಎಂಟು ಬಾರಿ ಆಸ್ಕರ್‌ ಪಡೆದಿರುವ ಡಿಎನ್‌ಇಜಿ ತನ್ನ ಕೈಚಳಕ ತೋರಿಸಿದೆ. ಎಆರ್‌ ರಹಮಾನ್‌ ಹಾಗೂ ಹ್ಯಾನ್ಸ್‌ ಜಿಮ್ಮರ್‌ ಹಿನ್ನೆಲೆ ಸಂಗೀತ ವಿಡಿಯೊನ ಗುಣಮಟ್ಟವನ್ನು ಮತ್ತಷ್ಟು ಹೆಚ್ಚಿಸಿದೆ.

ಗ್ಲಿಂಪ್ಸ್‌ನ ಕೊನೆಯ ಒಂದೆರಡು ಸೆಕೆಂಡ್‌ ರಾಮ ಹಾಗೂ ರಾವಣರ ದರ್ಶನವಾಗಲಿದ್ದು, ಇದು ಅಭಿಮಾನಿಗಳ ಪಾಲಿನ ಫೇವರಿಟ್‌ ಭಾಗವಾಗಿದೆ. ಇಷ್ಟು ಶ್ರೀಮಂತವಾಗಿದ್ದ ರಾಮಾಯಣ ಗ್ಲಿಂಪ್ಸ್‌ ಬಿಡುಗಡೆಯಾದ 24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದುಕೊಂಡ ದಾಖಲೆ ಪಡೆದುಕೊಳ್ಳಲಿದೆ ಎಂದು ಊಹಿಸಲಾಗಿತ್ತು.

ದೊಡ್ಡ ದೊಡ್ಡ ಸ್ಟಾರ್‌ಗಳು ಗ್ಲಿಂಪ್ಸ್‌ನ ಲಿಂಕ್‌ ಹಂಚಿಕೊಳ್ಳುವ ಮೂಲಕ ಪ್ರಚಾರವನ್ನೂ ಮಾಡಿದರು. ಆದರೂ ರಾಮಾಯಣ ಗ್ಲಿಂಪ್ಸ್‌ ಮೊದಲ 24 ಗಂಟೆಗಳಲ್ಲಿ 12.9 ಮಿಲಿಯನ್‌ ವೀಕ್ಷಣೆಗಳನ್ನು ಮಾತ್ರ ಪಡೆದುಕೊಂಡಿದೆ. ಸೋನಿ ಮ್ಯೂಸಿಕ್‌ ಇಂಡಿಯಾ ಹಾಗೂ ವರ್ಲ್ಡ್‌ ಆಫ್ ರಾಮಾಯಣ ಈ ಎರಡೂ ಚಾನೆಲ್‌ಗಳಲ್ಲಿ ಈ ಗ್ಲಿಂಪ್ಸ್‌ ಬಿಡುಗಡೆಯಾಗಿದ್ದು, ಇದು ಎರಡೂ ಚಾನೆಲ್‌ಗಳು ಸೇರಿದ ವೀಕ್ಷಣೆಯಾಗಿದೆ.

ಇನ್ನು ರಾಮಾಯಣಕ್ಕೆ ನಿರೀಕ್ಷಿತ ವೀಕ್ಷಣೆಗಿಂತ ಕಡಿಮೆ ಬರಲು ಕಾರಣ ಹೊಸ ಚಾನೆಲ್‌ನಲ್ಲಿ ಅಪ್‌ಲೋಡ್‌ ಮಾಡಿದ್ದು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಹ್ಯಾಂಡಲ್‌ಗಳಲ್ಲಿ ಹಂಚಿಕೊಂಡಿದ್ದು, ಇನ್ನು ಟೀಸರ್‌ನಲ್ಲಿ ಚಿತ್ರದ ದೃಶ್ಯಗಳು ಇಲ್ಲದೇ ಇರುವುದು ಸಹ ವೀಕ್ಷಣೆ ಕಡಿಮೆಯಾಗುವುದಕ್ಕೆ ಕಾರಣ ಎನ್ನಬಹುದು. ಮುಂದಿನ ದಿನಗಳಲ್ಲಿ ಟೀಸರ್‌ ಹಾಗೂ ಟ್ರೈಲರ್‌ಗಳಲ್ಲಿ ಐಮ್ಯಾಕ್ಸ್‌ಗೆಂದೇ ತಯಾರಾಗಿರುವ ರಾಮಾಯಣ ತನ್ನ ಖದರ್‌ ಪ್ರದರ್ಶಿಸಲಿದೆ.

ಬಿಡುಗಡೆಯಾದ 24 ಗಂಟೆಗಳಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದುಕೊಂಡ ಗ್ಲಿಂಪ್ಸ್‌ಗಳು
1.‌ ರಾಕಿಂಗ್ ಸ್ಟಾರ್‌ ಯಶ್‌ ಅವರ ಮುಂದಿನ ಚಿತ್ರ ಟಾಕ್ಸಿಕ್‌ ಗ್ಲಿಂಪ್ಸ್‌ 36 ಮಿಲಿಯನ್‌ ವೀಕ್ಷಣೆಗಳನ್ನು ಪಡೆದುಕೊಂಡು ಅಗ್ರಸ್ಥಾನದಲ್ಲಿದ್ದು, ರಾಮಾಯಣ ಈ ದಾಖಲೆಯನ್ನು ಮುರಿದರೆ ನಂಬರ್‌ 1 ಆಗಲಿದೆ.

  1. ರಾಮ್‌ಚರಣ್‌ ನಟೆಯ ಪೆಡ್ಡಿ – 31.15 ಮಿಲಿಯನ್
  2. ಅಲ್ಲು ಅರ್ಜುನ್‌ ನಟನೆಯ ಪುಷ್ಪ 2 – 27.67 ಮಿಲಿಯನ್‌
  3. ಜೂನಿಯರ್‌ ಎನ್‌ಟಿಆರ್ ನಟನೆಯ ದೇವರ – 26.17 ಮಿಲಿಯನ್‌
  4. ವಿಜಯ್‌ ನಟನೆಯ ಜನನಾಯಗನ್‌ – 22.57 ಮಿಲಿಯನ್‌.

Spread the love
Share:

administrator

Leave a Reply

Your email address will not be published. Required fields are marked *