Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಭಾರತಿ-ಸುಮಿತ್ರಾ ಸಲಿಂಗ ಕಾಮದ ದಾಂಧಲೆ: ಐದು ತಿಂಗಳ ಕಂದಮ್ಮನನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ನಾಟಕವಾಡಿದ ವಿವಾಹಿತೆ

Spread the love

ಆನೇಕಲ್/ತಮಿಳುನಾಡು: ಮಹಿಳೆ ಮತ್ತು ಯುವತಿಯ ಸಲಿಂಗ ಕಾಮದ (Homosexuality) ದಾಹಕ್ಕೆ ಐದು ತಿಂಗಳ ಕಂದಮ್ಮ ಬಲಿಯಾಗಿರುವ ಘಟನೆ ರಾಜ್ಯದ ಗಡಿಭಾಗ ತಮಿಳುನಾಡಿನ (Tamil Nadu) ಕೆಳಮಂಗಲಂ (Kelamangalam) ಸಮೀಪದ ಚಿನ್ನಟ್ಟಿಯಲ್ಲಿ ನಡೆದಿದೆ.

ಭಾರತಿ (26) ಎಂಬ ವಿವಾಹಿತೆಯ ಜೊತೆ ಸುಮಿತ್ರಾ (22) ಎಂಬ ಯುವತಿ ಸಲಿಂಗ ಕಾಮ ನಡೆಸುತ್ತಿದ್ದಳು. ಸುರೇಶ್ ಮತ್ತು ಭಾರತಿಗೆ ಮದುವೆಯಾಗಿ ಐದು ವರ್ಷವಾಗಿತ್ತು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು, ಒಂದು ಗಂಡು ಮಗುವಿತ್ತು. ಅದೇ ಏರಿಯಾದ ಯುವತಿ ಸುಮಿತ್ರಾ ಎಂಬಾಕೆಯ ಜೊತೆಗೆ ಭಾರತಿ ಸ್ನೇಹ ಬೆಳೆಸಿಕೊಂಡಿದ್ದಳು. ಸ್ನೇಹ ಸಲಿಂಗ ಕಾಮಕ್ಕೆ ತಿರುಗಿ, ಪತಿ ಇಲ್ಲದೆ ಇದ್ದಾಗ ಮನೆಯಲ್ಲಿ ಸೇರಿಕೊಳ್ಳುತ್ತಿದ್ದರು. ಕಳೆದ ನಾಲ್ಕು ವರ್ಷಗಳಿಂದ ಭಾರತಿ-ಸುಮಿತ್ರಾ ಸಲಿಂಗ ಕಾಮಿಗಳಾಗಿದ್ದರು. ಇಬ್ಬರು ಮಾತನಾಡಿಕೊಳ್ಳೋಕೆ ಬೇರೆ ಮೊಬೈಲ್ ಕೂಡ ಇಟ್ಟುಕೊಂಡಿದ್ದರು. ಸ್ನಾನ ಮಾಡುವಾಗ ನಗ್ನವಾಗಿ ವೀಡಿಯೋ ಕಾಲ್ ಮಾಡೋದು, ಇಬ್ಬರು ಕಿಸ್ ಮಾಡುತ್ತ ಪೋಟೋ ಕೂಡ ಕ್ಲಿಕ್ಲಿಸಿಕೊಂಡಿದ್ದರು. ಭಾರತಿ ಎದೆ ಮೇಲೆ ‘ಸುಮಿ’ ಎಂದು ಟ್ಯಾಟೂ ಹಾಕಿಸಿಕೊಂಡಿದ್ದಳು. ಅಲ್ಲದೇ ಇಬ್ಬರೂ ಫೋಟೋಗಳನ್ನ ಹಾಕಿ ರೀಲ್ಸ್ ವಿಡಿಯೋ ಕೂಡ ಮಾಡಿದ್ದರು

ಕಳೆದ ಐದು ತಿಂಗಳ ಹಿಂದೆಯಷ್ಟೇ ಭಾರತಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಮಗು ಆದಾಗಿನಿಂದ ಭಾರತಿ ತನ್ನನ್ನ ಅವೈಡ್ ಮಾಡುತ್ತಿದ್ದಾಳೆ ಎಂದು ಸುಮಿತ್ರಾ ಅಂದುಕೊಂಡಿದ್ದಳು. ಈ ವಿಚಾರವಾಗಿ ಇಬ್ಬರ ಮಧ್ಯೆ ಪದೇ ಪದೇ ಜಗಳವಾಗುತ್ತಿತ್ತು. ಮಗುವಿನಿಂದಲೇ ಈ ಗಲಾಟೆ ಆಗುತ್ತಿದೆ ಎಂದು ಮಗುವನ್ನ ಕೊಲೆ ಮಾಡುವಂತೆ ಸುಮಿತ್ರಾ ಭಾರತಿಗೆ ತಿಳಿಸಿದ್ದಳು. ಅದರಂತೆ ಭಾರತಿ ತನ್ನ ಮಗುವನ್ನ ಉಸಿರುಗಟ್ಟಿಸಿ ಕೊಲೆ ಮಾಡಿ ಬಳಿಕ ಹಾಲು ಕುಡಿಯುವಾಗ ನೆತ್ತಿಗೇರಿ ಸಾವನ್ನಪ್ಪಿದೆ ಎಂದು ಕಥೆಕಟ್ಟಿದ್ದಳು. ಇದನ್ನೇ ನಿಜ ಎಂದು ತಿಳಿದ ಕುಟುಂಬಸ್ಥರು ಮಗುವಿನ ಅಂತ್ಯಸಂಸ್ಕಾರ ಮಾಡಿ ಮುಗಿಸಿದ್ದರು

ಇದಾದ ಬಳಿಕ ಭಾರತಿ ಪತಿ ಸುರೇಶ್‌ಗೆ ಮನೆಯಲ್ಲಿ ಭಾರತಿ ಮತ್ತು ಸುಮಿತ್ರಾ ಬಳಸುತ್ತಿದ್ದ ಮೊಬೈಲ್ ಸಿಕ್ಕಿತ್ತು. ಅದರಲ್ಲಿ ಇಬ್ಬರ ಸಲಿಂಗ ಕಾಮದ ವಿಷಯ ಮತ್ತು ಮಗುವಿನ ಕೊಲೆ ರಹಸ್ಯ ಬಯಲಾಗಿದೆ. ಸತ್ಯಾಂಶ ತಿಳಿದ ಸುರೇಶ್ ಪೋಲಿಸರಿಗೆ ಕಂಪ್ಲೆಂಟ್ ಕೊಡೋದಾಗಿ ಹೇಳಿ ಹೋಗಿದ್ದ. ಈ ವೇಳೆ ಸುರೇಶ್‌ಗೆ ಫೋನ್ ಮಾಡಿ ಭಾರತಿ ಮಗುವನ್ನ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಆಡಿಯೋ, ವೀಡಿಯೋ, ಫೋಟೋಗಳ ಸಮೇತವಾಗಿ ಪೊಲೀಸರಿಗೆ ಸುರೇಶ್ ದೂರು ನೀಡಿದ್ದಾರೆ. ಘಟನೆ ಸಂಬಂಧ ಕೆಳಮಂಗಲಂ ಪೊಲೀಸ್ ಠಾಣೆಯಲ್ಲಿ ಭಾರತಿ ಮತ್ತು ಸುಮಿತ್ರಾ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *