Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಂಗಳೂರಿನ ಕೆ.ಆರ್.ಮಾರ್ಕೆಟ್ ಹೂವಿನ ಮಾರುಕಟ್ಟೆ ಸ್ಥಳಾಂತರ: ಹೆಬ್ಬಾಳದ ಜಿಕೆವಿಕೆ ಆವರಣಕ್ಕೆ ಶಿಫ್ಟ್

Spread the love

ಸಿಲಿಕಾನ್ ಸಿಟಿಯಲ್ಲಿ KR ಮಾರ್ಕೆಟ್ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಏನೇ ಫಂಕ್ಷನ್ ಇದ್ರೂ ಮೊದಲು ನೆನಪಾಗೋದೇ KR ಮಾರ್ಕೆಟ್. ಹೂ ಬೇಕು ಅಂದ್ರೆ ಚೀಪ್ ಆಗಿ ಸಿಗುತ್ತೆ ಅಂತ ಅಲ್ಲಿಗೆ ಹೋಗ್ತೀವಿ.

ಆದ್ರೆ ಇದೀಗ ಇನ್ಮುಂದೆ ಹೂ ತರೋದಕ್ಕೆ KR ಮಾರ್ಕೆಟ್ಗೆ ಹೋಗಂಗಿಲ್ಲ.

ಯಾಕಂದ್ರೆ ಹೂವಿನ ಮಾರ್ಕೆಟ್ ಅತಿ ಶೀಘ್ರದಲ್ಲಿ ಬೇರೆಡೆ ಶಿಫ್ಟ್ ಆಗುತ್ತಿದೆ ಅಂತೆ.

ಹೌದು, ಸಿಲಿಕಾನ್ ಸಿಟಿಯ ಬಹು ಬೇಡಿಕೆಯ ಕೆ ಆರ್ ಮಾರ್ಕೆಟ್ನಿಂದ ಹೂವಿನ ಮಾರ್ಕೆಟ್ ಶಿಫ್ಟ್ ಮಾಡೋದಕ್ಕೆ ಬಿಬಿಎಂಪಿ ಸಿದ್ಧತೆ ಮಾಡ್ಕೊಂಡಿದೆ. ಈಗಾಗಲೇ ಹೊಸ ಹೂವಿನ ಮಾರುಕಟ್ಟೆಗೆ ಸ್ಥಳ ಕೂಡ ನಿಗದಿಯಾಗಿದೆ. ನಗರದ ಹೆಬ್ಬಾಳ ಬಳಿ ಇರೋ ಜಿಕೆವಿಕೆ ಆವರಣಕ್ಕೆ ಹೂವಿನ ಮಾರ್ಕೆಟ್ ಶೀಘ್ರದಲ್ಲೇ ಸ್ಥಳಾಂತರವಾಗಲಿದೆ.

ಈ ಬಗ್ಗೆ ಗ್ರೇಟರ್ ಬೆಂಗಳೂರು ಅಥಾರಿಟಿಯ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅಧಿಕೃತ ಮಾಹಿತಿ ನೀಡಿದ್ದಾರೆ.

ಬೆಳಿಗ್ಗೆ 3 ಗಂಟೆಯಿಂದ ಕೆ ಆರ್ ಮಾರುಕಟ್ಟೆಯ ಸುತ್ತಲಿನ ರಸ್ತೆಗಳಲ್ಲಿ ಹೂ ಮಾರಾಟ ಆರಂಭವಾಗುತ್ತೆ. ಕೆಳ ಅಂತಸ್ತಿನಲ್ಲಿ ಇರುವ ಹೂವಿನ ಮಾರುಕಟ್ಟೆಯಿಂದ ಮಾರುಕಟ್ಟೆಯ ಸುತ್ತಮುತ್ತ ಟ್ರಾಫಿಕ್ ಸಮಸ್ಯೆ ಉಂಟಾಗುತ್ತೆ. ಟ್ರಾಫಿಕ್ ಸಮಸ್ಯೆಯಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತೆ. ಇನ್ನೂ ರೈತರು ತರುವ ಹೂಗಳಿಗೆ ಕೆ. ಆರ್ ಮಾರುಕಟ್ಟೆಯಲ್ಲಿ ಸರಿಯಾದ ಸಂಸ್ಕರಣಾ ಘಟಕದ ಕೊರತೆಯಿದೆ. ಸಂಸ್ಕರಣಾ ಘಟಕ ಇಲ್ಲದೆ ರೈತರು ಬೆಳೆದ ಹೂ ಗಳು ಹಾಳಾಗಿ ನಷ್ಟ ಆಗುತ್ತಿದೆ. ಈ ಸಮಸ್ಯೆಗಳ ಪರಿಹಾರಕ್ಕೆ ಕೆ ಆರ್ ಮಾರುಕಟ್ಟೆಯ ಹೂವಿನ ಮಾರುಕಟ್ಟೆ ಸ್ಥಳಾಂತರಕ್ಕೆ ಸರ್ಕಾರ ಮುಂದಾಗಿದೆ. ನಗರದ ಹೆಬ್ಬಾಳ ಬಳಿ ಇರೋ ಜಿಕೆವಿಕೆ ಆವರಣಕ್ಕೆ ಹೂವಿನ ಮಾರುಕಟ್ಟೆ ಶಿಪ್ಟ್ ಮಾಡಲು ನಿರ್ಧರಿಸಿದೆ.

ಸುಮಾರು 5 ಎಕರೆ ವಿಸ್ತೀರ್ಣದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣವಾಗಲಿದೆ. ಸುಮಾರು 400ರಿಂದ 500 ಮಳಿಗೆ ನಿರ್ಮಾಣ ಮಾಡಿ ಹೂವಿನ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಸರ್ಕಾರದ ಈ ನಿರ್ಧಾರಕ್ಕೆ ಮುಂದಿನ ದಿನಗಳಲ್ಲಿ ಯಾವ ರೀತಿಯ ರೆಸ್ಪಾನ್ಸ್ ಸಿಗುತ್ತೆ ಕಾದುನೋಡಬೇಕಿದೆ.


Spread the love
Share:

administrator

Leave a Reply

Your email address will not be published. Required fields are marked *