Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಂಗಳೂರು: ಕುಡಿದು ಗೋವಾ ಬಸ್ ಚಲಾಯಿಸುತ್ತಿದ್ದ ಸೀಬರ್ಡ್ ಚಾಲಕ ಅರೆಸ್ಟ್; 30 ಪ್ರಯಾಣಿಕರ ಪ್ರಾಣದ ಜೊತೆ ಚೆಲ್ಲಾಟ

Spread the love

ಬೆಂಗಳೂರು: ಡ್ರಿಂಕ್‌ ಆಂಡ್‌ ಡ್ರೈವ್‌ (Drink and Drive) ತಪಾಸಣೆ ವೇಳೆ ಸೀಬರ್ಡ್‌ ಚಾಲಕ ಬೆಂಗಳೂರಿನ (Bengaluru) ಸಂಚಾರ ಪೊಲೀಸರ (Traffic Police) ಕೈಗೆ ಸಿಕ್ಕಿಬಿದ್ದಿದ್ದಾನೆ.

ಹೊಸ ವರ್ಷಕ್ಕೆ ಕೇವಲ 4 ದಿನಗಳ ಬಾಕಿ ಇರುವ ಹಿನ್ನೆಲೆಯಲ್ಲಿ ಬೆಂಗಳೂರಿನ 140ಕ್ಕೂ ಹೆಚ್ಚು ಜಾಗಗಳಲ್ಲಿ ಪೊಲೀಸರು ತಪಾಸಣೆಗೆ ಇಳಿದಿದ್ದರು. ಈ ವೇಳೆ ಗೋವಾಗೆ ತೆರಳುತ್ತಿದ್ದ ಸೀಬರ್ಡ್‌ ಬಸ್ ಚಾಲಕ (Seabird Bus Driver) ಕುಡಿದಿರುವುದು ಆಲ್ಕೋಮೀಟರ್‌ನಲ್ಲಿ (Alcometer) ದೃಢಪಟ್ಟಿದೆ

ಬೆಂಗಳೂರಿನಿಂದ ಗೋವಾಗೆ ಈ ಬಸ್ಸಿನಲ್ಲಿ 30 ಜನ ಪ್ರಯಾಣಿಸುತ್ತಿದ್ದರು. ಉಪ್ಪಾರಪೇಟೆ ಪೊಲೀಸರು ಚಾಲಕ ದಿನೇಶ್‌ನನ್ನು ವಶಕ್ಕೆ ಪಡೆದಿದ್ದಾರೆ.

ತಡರಾತ್ರಿ ಸುಮಾರು 500ಕ್ಕೂ ಹೆಚ್ಚು ಕೇಸ್ ದಾಖಲಾಗಿದ್ದು ಕಳೆದ 3 ದಿನಗಳಲ್ಲಿ 1500ಕ್ಕೂ ಹೆಚ್ಚು ಕೇಸ್‌ ದಾಖಲಾಗಿದೆ. ಕುಡಿದು ಚಾಲನೆ ಮಾಡಿದವರ ವಾಹನಗಳನ್ನು ಜಪ್ತಿ ಮಾಡಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *