ಬಿಎಂಟಿಸಿ ಬಸ್ ಡಿಕ್ಕಿ- ಸ್ಕೂಟರ್ ಸವಾರ ಸಾವಿಗೆ ಶಿಕಾರ

ಬೆಂಗಳೂರು: ಬಿಎಂಟಿಸಿ ಬಸ್ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿದ ಘಟನೆ ಹೆಬ್ಬಾಳದ ರಿಂಗ್ ರಸ್ತೆಯಲ್ಲಿರುವ ಕಲ್ಯಾಣ ನಗರದ ಬಳಿ ನಡೆದಿದೆ.
ಮೊಹಮ್ಮದ್ ಜಮೀರ್ ಮೃತ ದುರ್ದೈವಿ (40). ಸ್ಕೂಟರ್ನಲ್ಲಿ ಪತ್ನಿ, ಇಬ್ಬರು ಮಕ್ಕಳು ತೆರಳುತ್ತಿದ್ದಾಗ ಬಿಎಂಟಿಸಿ ಬಸ್ಸು ಡಿಕ್ಕಿ ಹೊಡೆದಿದೆ.ಪತ್ನಿ , ಮಕ್ಕಳಿಗೆ ಚಿಕ್ಕಪುಟ್ಟ ಗಾಯ, ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್ ನಂ KA-51 AJ 8655 ನಿಂದ ಈ ಅಪಘಾತ ಸಂಭವಿಸಿದೆ.