Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

🏢 ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ‘ಸಮಾನಾಂತರ ಸರ್ಕಾರ’: ಅಕ್ರಮಗಳಿಗೆ ಪೊಲೀಸರ ಬದಲು ತಾವೇ ಲಕ್ಷಾಂತರ ರೂ. ದಂಡ ವಿಧಿಸುತ್ತಿದ್ದ ಅಸೋಸಿಯೇಷನ್ ವಿರುದ್ಧ FIR ದಾಖಲು

Spread the love

ಬೆಂಗಳೂರು : ಕುಂಬಳಗೋಡು ವ್ಯಾಪ್ತಿಯಲ್ಲಿರುವ ‘ಪ್ರಾವಿಡೆಂಟ್ ಸನ್​ವರ್ತ್ ಅಪಾರ್ಟ್​​​ಮೆಂಟ್ ಓನರ್ಸ್ ಅಸೋಸಿಯೇಷನ್’ ಕಾನೂನು ಮತ್ತು ಪೊಲೀಸ್ ವ್ಯವಸ್ಥೆಯನ್ನು ಮೀರಿ ತನ್ನದೇ ಆದ ಆಡಳಿತ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ರೂಪಿಸಿಕೊಂಡು ನಿವಾಸಿಗಳಿಂದ ಲಕ್ಷಾಂತರ ರೂಪಾಯಿ ದಂಡ ವಸೂಲಿ ಮಾಡುತ್ತಿದ್ದ ಗಂಭೀರ ವಿಚಾರವೊಂದು ವಿಷಲ್ ಬ್ಲೋವರ್ ನೀಡಿದ ದೂರಿನಿಂದಾಗಿ ಬಯಲಿಗೆ ಬಂದಿದೆ. ಈ ಅಪಾರ್ಟ್​ಮೆಂಟ್ ಆಡಳಿತ ಮಂಡಳಿಯು ಮಾದಕ ವಸ್ತುಗಳ ಬಳಕೆ, ಅಕ್ರಮ ವಸ್ತುಗಳ ಸಾಗಾಟ ಹಾಗೂ ಲೈಂಗಿಕ ದೌರ್ಜನ್ಯದಂತಹ ಗಂಭೀರ ಅಪರಾಧ ಚಟುವಟಿಕೆಗಳು ನಡೆದಾಗ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವ ಬದಲು, ತಾವೇ ವಿಚಾರಣೆ ನಡೆಸಿ ಭಾರಿ ಪ್ರಮಾಣದ ದಂಡ ವಿಧಿಸುತ್ತಿತ್ತು; ಲಭ್ಯವಿರುವ ದಾಖಲೆಗಳ ಪ್ರಕಾರ, 2025ರ ಜುಲೈನಿಂದ ಅಕ್ಟೋಬರ್ ಅವಧಿಯಲ್ಲಿ ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಸಾಗಾಟಕ್ಕಾಗಿ ವಿವಿಧ ವ್ಯಕ್ತಿಗಳಿಂದ 10,000 ರೂ.ನಿಂದ 50,000 ರೂ.ವರೆಗಿನ ದಂಡವನ್ನು ವಸೂಲಿ ಮಾಡಲಾಗಿದ್ದು, ಅಚ್ಚರಿಯೆಂದರೆ ಮನೆ ಕೆಲಸದಾಕೆಗೆ ಮುತ್ತಿಟ್ಟ ಪ್ರಕರಣವನ್ನೂ ಪೊಲೀಸರಿಗೆ ತಿಳಿಸದೆ 20,000 ರೂ. ದಂಡ ವಿಧಿಸಿ ಆಂತರಿಕವಾಗಿ ಬಗೆಹರಿಸಿಕೊಳ್ಳಲಾಗಿತ್ತು.

ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಕಾಯ್ದೆ (KAOA) 1972ರ ಅಡಿಯಲ್ಲಿ ಸಂಘಟನೆಗಳಿಗೆ ಕೇವಲ ಆಸ್ತಿ ನಿರ್ವಹಣೆಯ ಜವಾಬ್ದಾರಿ ಇರುತ್ತದೆಯೇ ಹೊರತು ದಂಡ ವಿಧಿಸುವ ಅಥವಾ ಶಿಕ್ಷೆ ನೀಡುವ ಯಾವುದೇ ನ್ಯಾಯಾಂಗ ಅಧಿಕಾರ ಇರುವುದಿಲ್ಲ ಎಂಬ ಕಾನೂನು ಅಂಶವನ್ನು ದೂರುದಾರರು ಎತ್ತಿ ತೋರಿಸಿದ್ದಾರೆ. ಈ ಸಮಾನಾಂತರ ಆಡಳಿತ ವ್ಯವಸ್ಥೆಯು ಕಾನೂನುಬಾಹಿರ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಕುಂಬಳಗೋಡು ಪೊಲೀಸರು ಇದೀಗ ಎಫ್‌ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದು, ಯಾವುದೇ ಅಕ್ರಮ ಅಥವಾ ಅಪರಾಧ ಪ್ರಕರಣಗಳು ಸಂಭವಿಸಿದಲ್ಲಿ ಸಂಘಟನೆಗಳು ಕಾನೂನನ್ನು ಕೈಗೆತ್ತಿಕೊಳ್ಳದೆ ನೇರವಾಗಿ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *