ಬೆಂಗಳೂರು ಏರ್ಪೋರ್ಟ್‌ನಲ್ಲಿ ಕಸ್ಟಮ್ಸ್ ಭರ್ಜರಿ ಬೇಟೆ: 38 ಕೋಟಿ ಮೌಲ್ಯದ ಕೊಕೇನ್ ವಶ!

ಬೆಂಗಳೂರು :ಮಕ್ಕಳ ಕಥೆ ಪುಸ್ತಕಗಳ ರಟ್ ನೊಳಗೆ ಅಡಗಿಸಿಕೊಂಡು ಬೆಂಗಳೂರಿಗೆ ಬಂದಿದ್ದ ವಿದೇಶೀ ಪ್ರಯಾಣಿಕನಿಂದ 38.60 ಕೋಟಿ ರೂ. ಮೌಲ್ಯದ ಕೊಕೆನ್ ಅನ್ನು ಬೆಂಗಳೂರಿನ ವಿಮಾನ ನಿಲ್ದಾಣದಲ್ಲ ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ ಕಸ್ಟಮ್ಸ್ ಅಧಿಕಾರಿಗಳು 7.72 ಕೆಜಿ ತೂಕದ ಕೊಕೆನ್ ವಶಪಡಿಸಿಕೊಂಡಿದ್ದಾರೆ.

ಬ್ರೆಜಿಲ್ನ ಸೌಪಾಲೊ ಏರ್ಪೋರ್ಟ್ನಿಂದ ಬಂದಿದ್ದ ವ್ಯಕ್ತಿಯ ಲಗೇಜ್ ಅನ್ನು ಅನುಮಾನ ಬಂದು ತಪಾಸಣೆ ಮಾಡಿದ ಕಸ್ಟಮ್ಸ್ ಅಧಿಕಾರಿಗಳು ಭಾರೀ ಪ್ರಮಾಣದ ಕೊಕೆನ್ ಪತ್ತೆ ಹಚ್ಚಿದ್ದಾರೆ.
ಬ್ರೆಜಿಲ್ನ ಸೌಪಾಲೊ ಏರ್ಪೋರ್ಟ್ನಿಂದ ಕೆಐಎಬಿಗೆ ಬಂದಿದ್ದ ಪ್ರಯಾಣಿಕ ಲಗೇಜ್ ಬ್ಯಾಗ್ನಲ್ಲಿ ಮಕ್ಕಳ ಕಥೆ ಪುಸ್ತಕಗಳ ಬುಕ್ಗಳ ರಟ್ ಅಡಿಯಲ್ಲಿ ಡ್ರಗ್ಸ್ ಇಟ್ಟಿದ್ದ. ಅನುಮಾನಗೊಂಡ ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ಲಗೇಜ್ ಬ್ಯಾಗ್ ಪರಿಶೀಲನೆ ನಡೆಸಿದಾಗ ಡ್ರಗ್ಸ್ ಪತ್ತೆ ಆಗಿದೆ.

ಡ್ರಗ್ಸ್ ಅಡಗಿಸಿ ಸಾಗಾಟಕ್ಕೆ ಯತ್ನಿಸಿದ್ದ ಪ್ರಯಾಣಿಕನನ್ನು ಇದೀಗ ವಶಕ್ಕೆ ಪಡೆದಿರುವ ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.