Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಂಗಳೂರು: ಶಾಲಾ ಶುಲ್ಕದಲ್ಲಿ 4 ಕೋಟಿ ರೂ. ಗುಳುಂ; ಖಾಸಗಿ ಶಾಲೆಯ ನಾಲ್ವರು ಸಿಬ್ಬಂದಿ ವಿರುದ್ಧ ವಂಚನೆ ಆರೋಪ!

Spread the love

ಬೆಂಗಳೂರು: ನಗರದ (Bengaluru) ಖಾಸಗಿ ಶಾಲೆಯೊಂದರ (School) ನಾಲ್ವರು ಉದ್ಯೋಗಿಗಳ ವಿರುದ್ಧ ಶಾಲೆ ಮತ್ತು ಶಿಕ್ಷಣ ಸಂಸ್ಥೆಗೆ ಸೇರಿದ 4 ಕೋಟಿ ರೂ. ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.

ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಶಾಲೆಗೆ ಆರೋಪಿಗಳು 2017ರಿಂದ 4 ಕೋಟಿ ರೂ. ವಂಚಿಸಿದ್ದಾರೆ. ವಿದ್ಯಾರ್ಥಿಗಳ ಶುಲ್ಕದ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಶಾಲೆ & ಟ್ರಸ್ಟ್ ನಲ್ಲಿ ಅಕೌಂಟೆಂಟ್ಸ್, ಟ್ರಾನ್ಸ್‌ಪೋರ್ಟ್ ಇನ್ಚಾರ್ಜ್ ಆಗಿದ್ದ ಸಾಗರ್, ಮುರುಳಿ, ಮನೋಜ್, ಮೋಹನ್ ಮತ್ತು ಕಿಶೋರ್ ಎಂಬವರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ

ಈ ಸಂಬಂಧ ಶಿಕ್ಷಣ ಸಂಸ್ಥೆಯ ನಿರ್ದೇಶಕ ಸಿಸಿಬಿಗೆ (CCB) ದೂರು ನೀಡಿದ್ದರು. ದೂರಿನಡಿ ಎಫ್‍ಐಆರ್ ದಾಖಲಿಸಿಕೊಂಡು, ಸಾಗರ್ ಮತ್ತು ಮನೋಜ್‍ನನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ


Spread the love
Share:

administrator

Leave a Reply

Your email address will not be published. Required fields are marked *