Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಳಗಾವಿ: 17 ವರ್ಷದ ಬಾಲಕಿಗೆ ಅತ್ಯಾಚಾರದ ಆರೋಪದಲ್ಲಿ ಲೋಕೇಶ್ವರ ಸ್ವಾಮೀಜಿ ಬಂಧನ

Spread the love

ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಮೇಖಳಿ ರಾಮಮಂದಿರದ ಸ್ವಾಮೀಜಿಯಾದ ಲೋಕೇಶ್ವರ ಸ್ವಾಮೀಜಿ 17 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿಯಲ್ಲಿ ಬಂಧನಕ್ಕೊಳಗಾಗಿದ್ದಾರೆ.
ಬಾಲಕಿಗೆ ಆರಾಮಿಲ್ಲದ ಕಾರಣ ಮಠದಲ್ಲಿ ಬಾಲಕಿಯನ್ನು ಪೋಷಕರು ಎಂದಿನಂತೆ ಬಿಟ್ಟುಹೋಗಿದ್ದರು.
ಈ ವೇಳೆ ಮೇ 13ರಂದು ಬಾಲಕಿಯನ್ನು ವಾಪಸ್‌ ಮನೆಗೆ ಬಿಡುವುದಾಗಿ ಕರೆದುಕೊಂಡು ಹೊರಟ ಲೋಕೇಶ್ವರ ಸ್ವಾಮೀಜಿ ಮೇ 13 ಹಾಗೂ ಮೇ 14ರಂದು ರಾಯಚೂರಿನಲ್ಲಿ ವಾಸ್ತವ್ಯ ಹೂಡಿ ಬಳಿಕ ಮೇ 15ರಂದು ಬಾಗಲಕೋಟೆಯಲ್ಲಿ ರಾತ್ರಿ ಕಳೆದಿದ್ದ.

ಈ ಎರಡೂ ಕಡೆ ವಾಸ್ತವ್ಯ ಹೂಡಿದ್ದಾಗಲೂ ಅತ್ಯಾಚಾರ ನಡೆಸಲಾಗಿದೆ ಎಂದು ಬಾಲಕಿ ಆರೋಪಿಸಿದ್ದು, ವಿಷಯವನ್ನು ಯಾರ ಬಳಿಯಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾಗಿ ತಿಳಿಸಿದ್ದಾರೆ.

ಬಾಗಲಕೋಟೆ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಪೊಲೀಸರು ಮೂಡಲಗಿ ಮಹಿಳಾ ಠಾಣೆಗೆ ವರ್ಗಾಯಿಸಿದ್ದರು. ಅದರಂತೆ ಇದೀಗ ಪೊಕ್ಸೊ ಪ್ರಕರಣದಡಿಯಲ್ಲಿ ಸ್ವಾಮೀಜಿಯನ್ನು ಬಂಧಿಸಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *