Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಳಗಾವಿ ವೈದ್ಯನಿಂದ ₹10 ಲಕ್ಷ ಲಂಚ ವಶ: ಸಿಬಿಐ ದಾಳಿ, ₹44.60 ಲಕ್ಷ ಶಂಕಾಸ್ಪದ ನಗದು ಪತ್ತೆ!

Spread the love

ಬೆಳಗಾವಿ: ಇಲ್ಲಿನ‌ ಖಾಸಗಿ ವೈದ್ಯಕೀಯ ಮಹಾವಿದ್ಯಾಲಯದ ಪರವಾಗಿ ತಪಾಶೀಲನಾ ವರದಿ ನೀಡುವುದಕ್ಕಾಗಿ, ₹10 ಲಕ್ಷ ಲಂಚ ಪಡೆಯುತ್ತಿದ್ದ ವೈದ್ಯಾಧಿಕಾರಿಯೊಬ್ಬರನ್ನು ಸಿಬಿಐ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.

ರಾಷ್ಟ್ರೀಯ ವೈದ್ಯಕೀಯ ಆಯೋಗದಲ್ಲಿ ಮೌಲ್ಯಮಾಪಕರಾಗಿರುವ, ಹಿರಿಯ ವೈದ್ಯಾಧಿಕಾರಿಯಿಂದ ಲಂಚದ ಹಣ ಕೂಡ ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಸಿಬಿಐ, ‘ಲಂಚ ಪಡೆದ ಆರೋಪಿತ ವೈದ್ಯನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಲ್ಲದೇ, ಆರೋಪಿಗೆ ಸಂಬಂಧಿಸಿದಂತೆ ಬೆಳಗಾವಿ, ಕೊಲ್ಕತ್ತ ಮತ್ತು ಬೆಳಗಾವಿಯಲ್ಲಿ ಕಚೇರಿ, ಮನೆ ಸೇರಿದಂತೆ ವಿವಿಧೆಡೆ ತಪಾಸಣೆ ನಡೆಸಲಾಗಿದ್ದು, ದಾಖಲೆಗಳಿಲ್ಲದ‌ ₹44.60 ಲಕ್ಷ ವಶಪಡಿಸಿಕೊಳ್ಳಲಾಗಿದೆ.

ಆರೋಪಿ ವೈದ್ಯ ಹಾಗೂ ಖಾಸಗಿ ಸಂಸ್ಥೆಯ ಇಬ್ಬರು ಪ್ರತಿನಿಧಿಗಳು ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ‌ ಎಂದು ಸಿಬಿಐ ಪ್ರಕಟಣೆ ತಿಳಿಸಿದೆ


Spread the love
Share:

administrator

Leave a Reply

Your email address will not be published. Required fields are marked *