ಬೆಡ್ ರೂಮಾ ಅಥವಾ ಮೃಗಾಲಯಾ? ಹಾಸಿಗೆಯ ಮೇಲೆ ಹಾವುಗಳ ರಾಶಿ – ಚೀನಾದ ಯುವತಿಯ ವಿಚಿತ್ರ ಹವ್ಯಾಸ ವೈರಲ್

ಕೆಲವು ಜನರು ಬದುಕುವ ರೀತಿ, ಸೇವಿಸುವ ಆಹಾರ ಹಾಗೂ ಹವ್ಯಾಸಗಳು ವಿಚಿತ್ರವಾಗಿರುತ್ತದೆ. ಇದನ್ನೆಲ್ಲಾ ನೋಡುವಾಗ ಇಂತಹ ಜನರು ಇರ್ತಾರಾ ಎಂದೆನಿಸದೇ ಇರದು. ಇದೀಗ ಚೀನಾದ ಯುವತಿಯೊಬ್ಬಳು ತನ್ನ ಮಲಗುವ ಕೋಣೆಯಲ್ಲಿ ರಾಶಿ ರಾಶಿ ಹಾವುಗಳನ್ನು ಸಾಕಿದ್ದಾಳೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ದೃಶ್ಯ ನೋಡಿದ ನೆಟ್ಟಿಗರು ಶಾಕ್ ಆಗಿದ್ದು, ಇದೇನು ಮೃಗಾಲಯನಾ ಅಥವಾ ಬೆಡ್ ರೂಮಾ ಎಂದು ಕೇಳಿದ್ದಾರೆ.

sports.jx.china ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಯುವತಿಯೊಬ್ಬಳು ಮಂಚದ ಮೇಲಿರುವ ಹೊದಿಕೆಯನ್ನು ಮೇಲೆಕ್ಕೆತ್ತಿರುವುದನ್ನು ನೋಡಬಹುದು. ಈ ಹಾಸಿಗೆಯ ಮೇಲೆ ಹಾವುಗಳದ್ದೇ ರಾಶಿ. ತೆವಳುತ್ತ ನೆಲದ ಮೇಲೆ ಬಿದ್ದಿದೆ. ಈ ಚೀನಾದ ಯುವತಿಯೂ ಮಲಗುವ ಕೋಣೆಯನ್ನು ಹಾವು ಸಾಕಾಣಿಕೆ ಕೇಂದ್ರವನ್ನಾಗಿಸಿಕೊಂಡಿದ್ದಾಳೆ. ಹೀಗಾಗಿ ದಿನಾಲೂ ಹೊದಿಕೆಯನ್ನು ಮೇಲಕ್ಕೆತ್ತಿ ಹಾಸಿಗೆಯಲ್ಲಿನ ಹಾವುಗಳನ್ನು ನೆಲಕ್ಕೆ ಚೆಲ್ಲಿ ಹಾಸಿಗೆಯ ಮೇಲಿನ ಭಾಗವನ್ನು ಶುಚಿಗೊಳಿಸುವುದು ಈ ಯುವತಿಯ ನಿತ್ಯದ ಕಾಯಕವಾಗಿದೆ.
ಈ ವಿಡಿಯೋ 8.2 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರೊಬ್ಬರು, ಈ ಕಣ್ಣಲ್ಲಿ ಏನೇನೂ ನೋಡ್ಬೇಕೋ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನನ್ನ ಸಂಬಂಧಿಕರಿಗೆ ಇದು ಪರ್ಫೆಕ್ಟ್ ಬೆಡ್ ಆಗಿದೆ ಎಂದು ಹೇಳಿದ್ದಾರೆ. ನನ್ನ ಸ್ನೇಹಿತರಿಗೆ ಈಕೆಗೆ ಪರಿಚಯ ಮಾಡಿಕೊಡಬೇಕು ಎಂದು ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ. ಇನ್ನು ಕೆಲವರು ಈ ವಿಡಿಯೋಗೆ ಅಚ್ಚರಿಕಾರಿ ಸಿಂಬಲ್ ಕಾಮೆಂಟ್‌ಗಳನ್ನು ಮಾಡಿದ್ದಾರೆ.
