ಭಾರತಕ್ಕೆ ಬಂದ “ಬೆಡ್ರೂಮ್ ಜಿಹಾದಿ” -ಸೈನಿಕರಿಗೆ ಹೊಸ ಸವಾಲು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಸಂಸ್ಥೆಗಳು “ಬೆಡ್ರೂಮ್ ಜಿಹಾದಿಗಳು” ಎಂಬ ಹೊಸ ಕುತಂತ್ರದ ಸವಾಲನ್ನು ಎದುರಿಸುತ್ತಿವೆ.

ಮನೆಯ ನಾಲ್ಕು ಗೋಡೆಗಳ ಒಳಗೆ ಇದ್ದುಕೊಂಡೇ ಈ ನವ ಜಿಹಾದಿಗಳು ಸಾಮಾಜಿಕ ಮಾಧ್ಯಮಗಳನ್ನು ಬಳಸಿ ಸುಳ್ಳು ಮಾಹಿತಿ ಮತ್ತು ಕೋಮು ಕಲಹಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಂಪ್ರದಾಯಿಕ ಸಶಸ್ತç ಉಗ್ರರಿಂದ ದೂರವಿರುವ ಈ ಶತ್ರುಗಳು ಗಡಿ ಭಾಗದಿಂದ ಈ ಪ್ರದೇಶವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತನಿಖೆಯಲ್ಲಿ ಪಾಕಿಸ್ತಾನದಲ್ಲಿನ ಭಯೋತ್ಪಾದಕ ಗುಂಪುಗಳು ಮತ್ತು ಅವರ ಪರವಾವರು ನಿಯಂತ್ರಿಸುತ್ತಿರುವ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳ ಜಾಲವು ಸ್ಥಳೀಯ ಡಿಜಿಟಲ್ ಜಾಗಕ್ಕೆ ನುಗ್ಗಿ, ಕೋಮುಗಲಭೆ ಮತ್ತು ಕಣಿವೆಯಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಪ್ರಚೋದನಕಾರಿ ವಿಷಯ ಮತ್ತು ಪ್ರಚಾರವನ್ನು ಹರಡುತ್ತಿದೆ ಎಂದು ತಿಳಿದುಬಂದಿದೆ.
“ವರ್ಷಗಳ ಕಾಲ ಸಶಸ್ತç ಉಗ್ರರ ವಿರುದ್ಧ ಹೋರಾಡಿದ ನಂತರ, ಭದ್ರತಾ ಸಂಸ್ಥೆಗಳು ಈ ಹೊಸ ರೀತಿಯ ಶತ್ರುವನ್ನು ಎದುರಿಸುತ್ತಿವೆ. ಈ ಹೊಸ ಜಿಹಾದಿಗಳು ಕಂಪ್ಯೂಟರ್ ಮತ್ತು ಸ್ಮಾರ್ಟ್ ಫೋನ್ನ್ಗ ಳನ್ನು ಬಳಸಿ ಎಲ್ಲಿಂದಲಾದರೂ ಯುದ್ಧ ಸಾರುತ್ತಾರೆ, ವದಂತಿಗಳನ್ನು ಹರಡುತ್ತಾರೆ ಮತ್ತು ಯುವಕರ ಮೇಲೆ ಪ್ರಭಾವ ಬೀರುತ್ತಾರೆ” ಎಂದು ಬೆಳವಣಿಗೆಗಳ ಬಗ್ಗೆ ತಿಳಿದಿರುವ ಅಧಿಕಾರಿಗಳು ಹೇಳಿದ್ದಾರೆ.
ಈ ಪ್ರವೃತ್ತಿಯು 2017ರಲ್ಲಿ ಪ್ರಾರಂಭವಾಯಿತು, ಆದರೆ 2019ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದನ ನಂತರ ಇಂಟರ್ನೆಟ್ ನಿರ್ಬಂಧಗಳಿAದ ಪರಿಣಾಮಕಾರಿ ಕ್ರಮ ಕೈಗೊಂಡಾಗ ಇದು ಕೊನೆಗೊಂಡಿತು.
ಕಳೆದ ವರ್ಷ ಯಶಸ್ವಿ ವಿಧಾನಸಭಾ ಚುನಾವಣೆಗಳು ಮುಗಿದ ನಂತರ, ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ಮತ್ತು ಅಶಾಂತಿಯ ಭಾವನೆ ಸೃಷ್ಟಿಸಲು “ಬೆಡ್ರೂಮ್ ಜಿಹಾದಿಗಳು” ಮತ್ತೆ ಕಾಣಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸಿ ಕೋಮು ಘರ್ಷಣೆಗಳನ್ನು ಪ್ರಚೋದಿಸಲು ಮತ್ತು ಪ್ರದೇಶವನ್ನು ಅಸ್ಥಿರಗೊಳಿಸಲು ಸಂಘಟಿತ ಪ್ರಯತ್ನ ನಡೆಸುತ್ತಿರುವುದನ್ನು ಭದ್ರತಾ ಸಂಸ್ಥೆಗಳು ಬಹಿರಂಗಪಡಿಸಿವೆ.