ವಾಸಯೋಗ್ಯಕ್ಕೆ ಗುರುಗಾಂವ್‌ಗಿಂತ ಬೆಂಗಳೂರು ಬೆಸ್ಟ್

ಕೆಲಸವೆಂದ ಮೇಲೆ ಒಂದು ಊರು ಬಿಟ್ಟು ಮತ್ತೊಂದು ಊರಿಗೆ ತೆರಳಲೇ ಬೇಕು. ಹೀಗಾಗಿ ಒಂದೊಂದು ಊರಲ್ಲೂ ಒಂದೊಂದು ರೀತಿಯ ಅನುಭವವಾಗುವುದು ಸಹಜ. ಆದರೆ ಕೆಲವರು ಈ ಬಗ್ಗೆ ಹೇಳ್ತಾರೆ, ಇನ್ನು ಕೆಲವರು ಎಲ್ಲಾ ಅನುಭವಗಳನ್ನು ಜೀವನದ ಪಾಠವಾಗಿ ಸ್ವೀಕರಿಸುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿಯೂ ಗುರುಗಾಂವ್ (Gurgaon) ಹಾಗೂ ಬೆಂಗಳೂರು (Bengaluru) ಈ ಎರಡು ನಗರದಲ್ಲಿ ಯಾವ ನಗರ ಸುರಕ್ಷಿತ ಹಾಗೂ ವಾಸಯೋಗ್ಯವಾಗಿದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಇವರ ಪೋಸ್ಟ್ ಎರಡು ನಗರಗಳ ರಸ್ತೆಗಳು, ಸುರಕ್ಷತೆ ಮತ್ತು ವಾಸಯೋಗ್ಯದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

ಪ್ರಾಮಾಣಿಕ ಅನುಭವ ಹಂಚಿಕೊಂಡ ವ್ಯಕ್ತಿ
@dconhue ಎಂಬ ಹೆಸರಿನ ರೆಡ್ಡಿಟ್ ಬಳಕೆದಾರರು ಪೋಸ್ಟ್ ಹಂಚಿಕೊಂಡು ಗುರಗಾಂವ್ vs ಬೆಂಗಳೂರು: ಎರಡರಲ್ಲೂ ವಾಸಿಸಿದ ನನ್ನ ವೈಯಕ್ತಿಕ ಅನುಭವ” ಎಂಬ ಶೀರ್ಷಿಕೆಯಲ್ಲಿ ಕೆಲವು ವಿಚಾರಗಳನ್ನು ಹೇಳಿದ್ದಾರೆ. ನನಗೆ ಗುರುಗಾಂವ್ (ಗುರುಗ್ರಾಮ) ಮತ್ತು ಬೆಂಗಳೂರಿನಲ್ಲಿ ವಾಸಿಸುವ ಅವಕಾಶ ಸಿಕ್ಕಿದೆ. ಮೂಲಸೌಕರ್ಯ ಮತ್ತು ವಾಸಯೋಗ್ಯ ವಿಚಾರಕ್ಕೆ ಸಂಬಂಧಿಸಿದ್ದಂತೆ ಈ ಎರಡೂ ನಗರಗಳ ನಡುವಿನ ಕುರಿತು ನನ್ನ ಪ್ರಾಮಾಣಿಕ ಅನುಭವವನ್ನು ಹಂಚಿಕೊಳ್ಳಲು ನಾನು ಬಯಸುತ್ತೇನೆ ಎಂದಿದ್ದಾರೆ.
ಗುರುಗಾಂವ್ ವಿಭಿನ್ನ ಕಥೆಗಳ ಸಮ್ಮಿಲನ
ಗುರುಗಾಂವ್ ಭಾರತದ ಉನ್ನತ ಕಾರ್ಪೊರೇಟ್ ಕೇಂದ್ರಗಳಲ್ಲಿ ಒಂದಾಗಿರಬೇಕು, ಆದರೆ ವಾಸ್ತವವು ವಿಭಿನ್ನ ಕಥೆಯನ್ನು ಹೇಳುತ್ತದೆ. ಇಲ್ಲಿ ದೊಡ್ಡ ಸಮಸ್ಯೆಗಳೆಂದರೆ ಅದುವೇ ರಸ್ತೆಗಳ ಸ್ಥಿತಿ. ಎಲ್ಲೆಡೆ ಗುಂಡಿಗಳಿವೆ, ಇದು ನಿಜಕ್ಕೂ ಜೀವಕ್ಕೆ ಅಪಾಯಕಾರಿ. ಇನ್ನೂ ಆಘಾತಕಾರಿ ಸಂಗತಿಯೆಂದರೆ 20 ಕೋಟಿ ಮೌಲ್ಯದ ಐಷಾರಾಮಿ ಅಪಾರ್ಟ್‌ಮೆಂಟ್‌ಗಳ ಮುಂದೆಯೂ ಹಾಳಾದ ರಸ್ತೆಗಳು , ಕಸ ಮತ್ತು ತೆರೆದ ಚರಂಡಿಗಳನ್ನು ಕಾಣಬಹುದು. ಕಸ ನಿರ್ವಹಣೆ ಕಳಪೆಯಾಗಿದೆ, ಅನೇಕ ಪ್ರದೇಶಗಳು ಕೆಟ್ಟ ವಾಸನೆಯಿಂದ ತುಂಬಿ ಹೋಗಿವೆ. ಸ್ಥಳೀಯ ಅಪರಾಧಗಳು ಮತ್ತು ಗೂಂಡಾಗಿರಿಯಂತಹ ವಾತಾವರಣವಿದ್ದು, ಅಭದ್ರತೆಯ ಭಾವನೆಯನ್ನು ಉಂಟು ಮಾಡುತ್ತದೆ. ಗುರುಗಾಂವ್‌ನಲ್ಲಿರುವ ಬಸ್ ನಿಲ್ದಾಣವು ಭೀಕರ ಸ್ಥಿತಿಯಲ್ಲಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅದು ಸರಿಯಾದ ಬಸ್ ನಿಲ್ದಾಣದಂತೆ ಕಾಣುತ್ತಿಲ್ಲ, ಇದು ‘ಸಹಸ್ರಮಾನ ನಗರ’ ಎಂದು ಹೇಳಿಕೊಳ್ಳುವ ನಗರಕ್ಕೆ ಇದು ತದ್ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರು ವಾಸಯೋಗ್ಯ, ಸುರಕ್ಷಿತ ನಗರ
ಬೆಂಗಳೂರು ಗುರುಗಾಂವ್ ಗಿಂತ ವಿಭಿನ್ನವಾಗಿದೆಹಾಗೂ ಉತ್ತಮವಾಗಿದೆ. ರಸ್ತೆಗಳು ಹೆಚ್ಚಾಗಿ ಉತ್ತಮ ಸ್ಥಿತಿಯಲ್ಲಿವೆ. ಹೌದು, ಕೆಲವು ಪ್ರದೇಶಗಳಲ್ಲಿ ಕೆಟ್ಟ ತೇಪೆಗಳಿವೆ, ಮೆಟ್ರೋ ನಿರ್ಮಾಣದಿಂದಾಗಿ ಹೀಗಿವೆ. ಈ ಕನಿಷ್ಠ ಸಮಸ್ಯೆಗಳಿಗೆ ಒಂದು ಕಾರಣವಿದ್ದು ಆದರೆ ತಾತ್ಕಾಲಿಕವಾಗಿರುತ್ತದೆ. ಗುರುಗಾಂವ್‌ನಂತಹ ಕಸ ತುಂಬಿದ ಪ್ರದೇಶಗಳನ್ನು ನೀವು ನೋಡುವುದಿಲ್ಲ. ಬೆಂಗಳೂರಿನ ಜನರು ಉತ್ತಮ ನಾಗರಿಕ ಪ್ರಜ್ಞೆಯನ್ನು ಹೊಂದಿದ್ದಾರೆ. ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಡಲು ಹೆಚ್ಚಿನ ಎಲ್ಲರೂ ಕೈ ಜೋಡಿಸುತ್ತಾರೆ. ಬೆಂಗಳೂರಿನ ಅತೀ ದೊಡ್ಡ ಸಮಸ್ಯೆಯೆಂದರೆ ಅದುವೇ ಅಧಿಕ ಜನಸಂಖ್ಯೆ. ಇದು ಸಂಚಾರ ದಟ್ಟಣೆಗೆ ಕಾರಣವಾಗುತ್ತದೆ, ಆದರೆ ಇಲ್ಲಿನ ವ್ಯವಸ್ಥೆಯು ಗುರುಗಾಂವ್‌ಗಿಂತ ವ್ಯವಸ್ಥಿತವಾಗಿ ನಿರ್ವಹಿಸಲು ಪ್ರಯತ್ನಿಸುತ್ತಿದೆ. ಸುರಕ್ಷತೆ ಹಾಗೂ ಭದ್ರತೆಯಲ್ಲಿ ಬೆಂಗಳೂರು ಮುಂದಿದೆ. ಇಲ್ಲಿನ ಕಾನೂನು ವ್ಯವಸ್ಥೆಯೂ ಉತ್ತಮವಾಗಿದೆ. ಸಮಸ್ಯೆಗಳ ವಿರುದ್ಧ ಇಲ್ಲಿನ ಜನರು ಧ್ವನಿ ಎತ್ತುವ ಸಂದರ್ಭಗಳೇ ಹೆಚ್ಚು. ಬೆಂಗಳೂರಿನಲ್ಲಿ ಐಷಾರಾಮಿ ಕಟ್ಟಡಗಳು, ಜಾಗವು ಬಹಳ ದುಬಾರಿಯಾಗಿದೆ. ವಾಸಯೋಗ್ಯತೆ ಹಾಗೂ ಮೂಲಭೂತ ನಾಗರಿಕ ಮೂಲ ಸೌಕರ್ಯವನ್ನು ಪರಿಗಣಿಸಿದಾಗ ಈ ಬೆಲೆಯೂ ಸಮಂಜಸವಾಗಿದೆ ಎಂದಿದ್ದಾರೆ.
ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕುತ್ತಿದ್ದಂತೆ ಬಳಕೆದಾರರು ಕಾಮೆಂಟ್ ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರ, ನೀವು ಎಲ್ಲಿಯವರು ಎಂದು ಕೇಳಿದ್ದಾರೆ. ಮತ್ತೊಬ್ಬರು, ನಾನು ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ದೆಹಲಿ ಹಾಗೂ ಗುರಗಾಂವ್ ಅಷ್ಟೊಂದು ಕಲುಷಿತವಾಗಿಲ್ಲದಿದ್ದರೆ ನಾನು ಅಲ್ಲಿ ವಾಸಿಸಲು ಇಷ್ಟಪಡುತ್ತಿದ್ದೆ. ವಾಯು ಮಾಲಿನ್ಯವನ್ನು ಹೊರತುಪಡಿಸಿ ದೆಹಲಿಯ ಮೂಲಸೌಕರ್ಯ ಮತ್ತು ರಸ್ತೆಗಳು ವಿಶ್ವ ದರ್ಜೆಯವು. ಹೆಬ್ಬಾಳದಿಂದ ವಿಮಾನ ನಿಲ್ದಾಣಕ್ಕೆ ಹೋಗುವ ವಿಮಾನ ನಿಲ್ದಾಣ ರಸ್ತೆಯನ್ನು ಹೊರತುಪಡಿಸಿ ಬೆಂಗಳೂರಿನಲ್ಲಿ ಸರಿಯಾದ ರಸ್ತೆಗಳಿಲ್ಲ ಎಂದು ವಾಸ್ತವ ಸ್ಥಿತಿಯ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಗುಂಡಿಗಳು ಇಲ್ಲದ ರಸ್ತೆಗಳನ್ನು ನೀವು ಎಲ್ಲಿ ನೋಡಿದ್ದೀರಿ. ಇಲ್ಲಿ ಗುಂಡಿಗಳಿಲ್ಲದ ಯಾವುದೇ ರಸ್ತೆ ಇಲ್ಲ. ಈ ರಸ್ತೆಗಳು ಸಾವಿನ ಕೂಪಗಳಾಗಿವೆ ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ನಲ್ಲಿ ಹೇಳಿದ್ದಾರೆ.