Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಹಳೆಯ ವಾಹನಗಳಿಗೆ ನಿಷೇಧ- ವಿಂಟೇಜ್ ಕಾರುಗಳಿಗೆ ವಿನಾಯಿತಿ ಏಕೆ?

Spread the love

ಇತ್ತೀಚೆಗಷ್ಟೇ ದೆಹಲಿ ಸರ್ಕಾರವು ಅವಧಿ ಮುಗಿದ ವಾಹನಗಳಿಗೆ ಅಂದರೆ, 15 ವರ್ಷ ಅಥವಾ ಅದಕ್ಕಿಂತ ಹಳೆಯದಾದ ಪೆಟ್ರೋಲ್ ಮತ್ತು 10 ವರ್ಷ ಅಥವಾ ಅದಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳಿಗೆ ಇಂಧನ ನಿಷೇಧವನ್ನು ಜಾರಿಗೊಳಿಸಿದೆ. ಇದನ್ನು ಜಾರಿಗೊಳಿಸುವ ಮೂಲಕ ಅನೇಕ ಹಳೆಯ ವಾಹನಗಳನ್ನು ಹೊಂದಿರುವ ಮಾಲೀಕರಿಗೆ ದೊಡ್ಡ ಶಾಕ್ ನೀಡಿದೆ.

ಸ್ಥಳೀಯ ಇಂಧನ ಹೊರಸೂಸುವಿಕೆ ಮೂಲಗಳ ಮಾಹಿತಿಯಂತೆ ದೆಹಲಿಯಲ್ಲಿ ವಾಹನಗಳು ಅತಿ ಹೆಚ್ಚು ಮಾಲಿನ್ಯಕಾರಕಗಳಾಗಿವೆ. ದೆಹಲಿ ಮಾಲಿನ್ಯದ ಅರ್ಧಕ್ಕಿಂತ ಹೆಚ್ಚು (ಶೇ. 51) ಪಾಲು ವಾಹನಗಳಿಂದಲೇ ಇದೆ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ (CSE) ನವೆಂಬರ್ 2024ರಲ್ಲಿ ಬಿಡುಗಡೆ ಮಾಡಿದ ವಿಶ್ಲೇಷಣೆ ತಿಳಿಸಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ವಾಯು ಗುಣಮಟ್ಟ ನಿರ್ವಹಣಾ ಆಯೋಗ (CAQM) ದೆಹಲಿ-ಎನ್​ಸಿಆರ್​ನಾದ್ಯಂತ ಎಲ್ಲ ರೀತಿಯ (ಸರಕು ವಾಹಕ, ವಾಣಿಜ್ಯ, ವಿಂಟೇಜ್, ದ್ವಿಚಕ್ರ ವಾಹನಗಳು) ಜೀವಿತಾವಧಿ ಮುಗಿದ ವಾಹನಗಳ ವಿರುದ್ಧ ಕಠಿಣ ಕ್ರಮಗಳನ್ನು ಜಾರಿಗೊಳಿಸುವ ಶಾಸನಬದ್ಧ ನಿರ್ದೇಶನ ಸಂಖ್ಯೆ 89 ಅನ್ನು ಹೊರಡಿಸಿದೆ.

ವಿಂಟೇಜ್​ ವರ್ಸರ್ಸ್​ 10 ವರ್ಷಗಳ ಕಾರು

ದೆಹಲಿ-ಎನ್‌ಸಿಆರ್ 10 ವರ್ಷ ಹಳೆಯ ಡೀಸೆಲ್ ಮತ್ತು 15 ವರ್ಷ ಹಳೆಯ ಪೆಟ್ರೋಲ್ ವಾಹನಗಳನ್ನು ರದ್ದುಗೊಳಿಸುವ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿದರೆ, ಇತ್ತ ವಿಂಟೇಜ್​ ಕಾರುಗಳು ಈ ನಿಯಮದಿಂದ ಫ್ರೀ ಪಾಸ್​ ಪಡೆದಂತಾಗಿದೆ. ವಿಂಟೇಜ್​ ಪಟ್ಟಿಯಡಿ ಇರುವ ಅದೆಷ್ಟೋ ಸಂಖ್ಯೆಯ ಕಾರುಗಳು 50, 80, 100 ವರ್ಷಕ್ಕಿಂತ ಹಳೆಯದ್ದಾಗಿವೆ. ಈ ಕ್ಲಾಸಿಕ್ ಇಂಜಿನ್​ಗಳು, ದುಬಾರಿ ಮೌಲ್ಯದ ಕಟ್ಟಡಗಳಿಗಿಂತ ಹಳೆಯದಾಗಿದ್ದರೂ, ನೋಂದಣಿ ರದ್ದುಗೊಳಿಸುವಿಕೆ ಮತ್ತು ಸ್ಕ್ರ್ಯಾಪಿಂಗ್‌ನಿಂದ ತಪ್ಪಿಸಿಕೊಂಡಿವೆ. ಇಷ್ಟಲ್ಲದೇ ವಿಶೇಷ ಸಂದರ್ಭಗಳಲ್ಲಿಯೂ ಸಹ ರಸ್ತೆಗಳಲ್ಲಿ ಚಲಾಯಿಸಲು ಕಾನೂನುಬದ್ಧವಾಗಿ ಅನುಮತಿ ಪಡೆದಿವೆ.

ನಿಯಮ ಹೇಳುವುದೇನು?

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, 50 ವರ್ಷಕ್ಕಿಂತ ಹಳೆಯದಾದ ಮತ್ತು ನಿರ್ದಿಷ್ಟ ಪಾರಂಪರಿಕ ಮಾನದಂಡಗಳನ್ನು ಪೂರೈಸುವ ವಾಹನಗಳನ್ನು ಮಾತ್ರ ವಿಂಟೇಜ್ ಮೋಟಾರ್ ವಾಹನಗಳಾಗಿ ನೋಂದಾಯಿಸಬಹುದು. ಈ ವರ್ಗದ ಅಡಿಯಲ್ಲಿ ವರ್ಗೀಕರಿಸಿದ ಬಳಿಕವೇ ಅವು ವಿಭಿನ್ನ ನಿಯಮಗಳಿಗೆ ಒಳಪಟ್ಟಿರುತ್ತವೆ ಮತ್ತು ನಿಯಮಿತ ಫಿಟ್‌ನೆಸ್ ಪರೀಕ್ಷೆಗಳು ಮತ್ತು ಮಾಲಿನ್ಯ ತಪಾಸಣೆಗಳಿಂದ ವಿನಾಯಿತಿ ಸೇರಿದಂತೆ ಕೆಲವು ಸವಲತ್ತುಗಳನ್ನು ಪಡೆಯುತ್ತವೆ.

ವಿಂಟೇಜ್ ಕಾರುಗಳಿಗೆ ಮಾತ್ರ ವಿನಾಯಿತಿ ಏಕೆ?

ಸರ್ಕಾರವು ವಿಂಟೇಜ್ ಕಾರುಗಳನ್ನು ಪಾರಂಪರಿಕ ಆಸ್ತಿ ಎಂದು ಪರಿಗಣಿಸಿದೆ. ಅದೇ ವಿಶೇಷ. ಇವುಗಳನ್ನು ಕೇವಲ ಒಂದು ಯಂತ್ರ ಎನ್ನದೇ ಇತಿಹಾಸ ಮತ್ತು ಸಂಸ್ಕೃತಿಯ ಸಂಕೇತಗಳು ಎಂದು ಭಾವಿಸಲಾಗಿದೆ. ಅವುಗಳ ನಿರ್ಬಂಧಿತ ಬಳಕೆಯು, ಸಾಮಾನ್ಯವಾಗಿ ಪ್ರದರ್ಶನಗಳು, ವಿಂಟೇಜ್ ರ್ಯಾಲಿಗಳು, ಮದುವೆ ಸಮಾರಂಭ ಮತ್ತು ಕೆಲವೊಮ್ಮೆ ಸಿನಿಮಾ ಚಿತ್ರೀಕರಣ ಅಥವಾ ಫೋಟೋ ಶೂಟ್‌ಗಳಿಗೂ ಬಳಿಸಿಕೊಳ್ಳಲಾಗುತ್ತದೆ. ಮಾಲಿನ್ಯ, ಸಂಚಾರ ಅಥವಾ ರಸ್ತೆ ಸುರಕ್ಷತೆಯ ಮೇಲೆ ಅವು ಅತ್ಯಲ್ಪ ಪರಿಣಾಮ ಬೀರುವ ಹಿನ್ನಲೆ ಈ ವಾಹನಗಳಿಗೆ ವಿನಾಯಿತಿ ಲಭ್ಯ ಎಂದು ವರದಿಗಳು ಹೇಳಿವೆ.

ಅತೀ ಮುಖ್ಯವಾಗಿ…

ಅತೀ ಮುಖ್ಯವಾಗಿ, ದಿನನಿತ್ಯದ ಸಂಚಾರ ಮತ್ತು ದಟ್ಟಣೆಯ ಭಾಗವಾಗಿರುವ ಸಾಮಾನ್ಯ ಕಾರುಗಳಿಗೆ ಹೋಲಿಸಿದರೆ ವಿಂಟೇಜ್​ ಕಾರುಗಳು ಭಿನ್ನ. ಇವು ಸಾರ್ವಜನಿಕ ರಸ್ತೆಗಳಲ್ಲಿ ಅಪರೂಪದಲ್ಲೇ ಅಪರೂಪಕ್ಕೆ ಕಾಣಸಿಗುತ್ತವೆ. ಇದರ ಪರಿಣಾಮವಾಗಿ, ಅಧಿಕಾರಿಗಳು ಅವುಗಳನ್ನು ವಾಯು ಮಾಲಿನ್ಯದ ಭಾಗವಲ್ಲ ಎಂದು ಪರಿಗಣಿಸಿದ್ದಾರೆ. ಬದಲಿಗೆ ಮ್ಯೂಸಿಯಂ ಮತ್ತು ಇತರೆ ಈವೆಂಟ್​ಗಳಿಗೆ ಸೀಮಿತಗೊಳಿಸಲಾಗಿದೆ.

‘ವಿಂಟೇಜ್’ ಪಡೆಯಲು ಅರ್ಹತೆ ಏನು?

ಭಾರತದಲ್ಲಿ, ಮೊದಲ ನೋಂದಣಿ ದಿನಾಂಕದಿಂದ 50 ವರ್ಷಗಳಿಗಿಂತ ಹಳೆಯದಾದ ಮತ್ತು ಹೆಚ್ಚಾಗಿ ಮಾರ್ಪಾಡುಗಳಿಗೆ ಒಳಗಾಗದ ಯಾವುದೇ ಮೋಟಾರು ವಾಹನವನ್ನು ವಿಂಟೇಜ್ ಎಂದು ನೋಂದಾಯಿಸಬಹುದಾಗಿದೆ. ಪ್ರಸ್ತುತ, 1974ಕ್ಕೂ ಮುನ್ನ ತಯಾರಿಸಿದ ವಾಹನಗಳು ಈ ಪಟ್ಟಿಗೆ ಸೇರಿವೆ.


Spread the love
Share:

administrator

Leave a Reply

Your email address will not be published. Required fields are marked *