Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೈಕ್ ಟ್ಯಾಕ್ಸಿ ಸೇವೆ ಮಿಡಲ್ ಕ್ಲಾಸ್ ಗೆ ಅನುಕೂಲವಾದದ್ದಕ್ಕೆ ನಿಷೇಧ-ಮಹಿಳೆ ಆಕ್ರೋಶ

Spread the love

ಬೆಂಗಳೂರು:ಇಂದಿನಿಂದ ( ಜೂನ್‌ 16 ) ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬೈಕ್‌ ಟ್ಯಾಕ್ಸಿಗಳನ್ನು ಚಲಾಯಿಸುವಂತಿಲ್ಲ ಎಂದು ಕೋರ್ಟ್‌ ಆದೇಶ ಹೊರಡಿಸಿದೆ.

ಇತ್ತೀಚೆಗಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಬೈಕ್‌ ಟ್ಯಾಕ್ಸಿ ಜನಪ್ರಿಯತೆ ಹೆಚ್ಚಾಗಿತ್ತು.

ರಾಪಿಡೊ ಬೈಕ್‌ ಎಷ್ಟೋ ಜನರ ಪ್ರಥಮ ಆಯ್ಕೆಯಾಗಿತ್ತು. ಆದರೆ ಇದೀಗ ಬೈಕ್‌ ಟ್ಯಾಕ್ಸಿ ರದ್ದಾಗಿರುವುದು ಅದನ್ನೇ ನಂಬಿಕೊಂಡಿದ್ದ ಹಲವರು ನಾಗರಿಕರಿಗೆ ಬೇಸರವನ್ನು ತಂದಿಟ್ಟಿದೆ.

ಈ ಕುರಿತು ಇನ್ಸ್ಟಾಗ್ರಾಮ್‌ನಲ್ಲಿ ಮಹಿಳೆಯೊಬ್ಬರು ವಿಡಿಯೊವನ್ನು ಹಂಚಿಕೊಂಡಿದ್ದು, ರಾಪಿಡೊ ಬೈಕ್‌ ಟ್ಯಾಕ್ಸಿಯ ಮಹತ್ವವನ್ನು ಬಿಚ್ಚಿಟ್ಟು, ಕೋರ್ಟ್‌ ಆದೇಶದ ವಿರುದ್ಧ ದನಿ ಎತ್ತಿದ್ದಾರೆ.

ವಿಡಿಯೊ ಆರಂಭದಲ್ಲಿಯೇ ನನ್ನ ಪ್ರಶ್ನೆ ಓಲಾ, ಊಬರ್‌, ರಾಪಿಡೊವನ್ನು ಯಾಕೆ ಬ್ಯಾನ್‌ ಮಾಡಲಾಗ್ತಿದೆ ಎಂದು ಆರಂಭಿಸಿರುವ ಮಹಿಳೆ ಬಳಿಕ ನಿಮಗೆ ಗೊತ್ತಿಲ್ಲದಿದ್ದರೆ ಹೇಳುತ್ತೇನೆ ಕೇಳಿ ಬೈಕ್‌ ಟ್ಯಾಕ್ಸಿ ಜನಸಾಮಾನ್ಯರಿಗೆ ಇರುವ ಅಗ್ಗದ ಆಯ್ಕೆ. ಅದನ್ನು ನಮ್ಮಿಂದ ಕಿತ್ತುಕೊಳ್ಳುತ್ತಿದ್ದೀರ. ಬೆಂಗಳೂರಿನಲ್ಲಿ ಐಟಿಯಲ್ಲಿ ಕೆಲಸ ಮಾಡದೇ ಕಡಿಮೆ ದುಡಿಯುವ ನನ್ನಂತಹ ಜನರೂ ಇದ್ದೇವೆ ಎಂಬುದು ಗೊತ್ತಿದೆಯಾ? ಅವರು ಯಾವಾಗಲೂ ಆಟೊ ಹಾಗೂ ಕ್ಯಾಬ್ ಮಾಡಿಕೊಂಡು ಇರಲಾಗುವುದಿಲ್ಲ. ಸಾರ್ಜಜನಿಕ ಸಾರಿಗೆ ಯಾವಾಗಲೂ ಗುಂಪಿನಿಂದ ತುಂಬಿರಲಿದೆ. ಮಧ್ಯಮ ವರ್ಗದ ಜನರಿಗೆ ಏನಾದರೂ ಅನುಕೂಲವಾಗುವಂತದ್ದು ಇದ್ದರೆ ಸಾಕು ಅದನ್ನು ತೆಗೆದುಬಿಡುವುದು ಸಾಮಾನ್ಯವಾಗಿಬಿಟ್ಟಿದೆ. ಇದರಿಂದ ಅವರು ಜಾಸ್ತಿ ಕಷ್ಟಪಡ್ತಾರೆ, ಅದನ್ನು ನೋಡಿ ಹೇಗೆ ಉಳಿಯತ್ತಾರೆ ನೋಡೋಣ ಎಂದು ಖುಷಿಪಡುತ್ತಾರೆ ಎಂದು ಕಿಡಿಕಾರಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *