ಭಾಷಾ ಸಂಘರ್ಷದ ಬಗ್ಗೆ ಆಟೋ ಚಾಲಕನ ದೃಷ್ಟಿಕೋನದ ಮಾತು ವೈರಲ್

ಬೆಂಗಳೂರು:ಇತ್ತೀಚಿನ ದಿನಗಳಲ್ಲಿ ಕನ್ನಡ ಹಾಗೂ ಮರಾಠಿ ಭಾಷೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿವೆ. ಇದೇ ವಿಚಾರವಾಗಿ ಬೆಂಗಳೂರು ಹಾಗೂ ಮಹಾರಾಷ್ಟ್ರದಲ್ಲಾಗುವ ಸಮಸ್ಯೆಗಳ ಬಗ್ಗೆ ವರದಿಯಾಗುತ್ತಿದೆ.
ಇದೀಗ ಆಟೋ ಚಾಲಕನೊಬ್ಬ ತನ್ನ ವಿಭಿನ್ನ ದೃಷ್ಟಿಕೋನದಿಂದ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ವೈರಲ್ ಆಗುತ್ತಿದ್ದಾನೆ.
ಆತನು ತಿಳಿಸಿದ ಹಾಗೆ ಆಟೋ ಚಾಲಕರು ಭಾಷೆಯ ಮೇಲೆ ಪ್ರದರ್ಶಿಸುವ ಕೋಪವು ಒಂದು ಹತಾಶೆ ಎಂದು ಹೇಳಿದ್ದಾನೆ. ಇನ್ನು ಬೆಂಗಳೂರು ನಗರದಲ್ಲಿ ನಿಜವಾಗಿ ತೊಂದರೆ ಇಲ್ಲ. ಬೆಂಗಳೂರು ಸಂಘರ್ಷದ ಬದಲು ದಯೆಯ ಮೇಲೆ ಸಾಗುತ್ತಿದೆ ಎಂದು ಹೇಳಿದ್ದಾರೆ.

ಕ್ಯಾತಿ ಶ್ರೀ ಹೆಸರಿನ ಪ್ರಯಾಣಿಕರೊಬ್ಬರು ಆಟೋ ಡ್ರೈವರ್ನೊಂದಿಗೆ ಮಾತನಾಡಲು ಪ್ರಾರಂಭಿಸಿ, ಕೆಲವು ಹಿಂದಿ ನುಡಿಗಟ್ಟುಗಳನ್ನು ಕನ್ನಡದಲ್ಲಿ ಹೇಳಲು ಕೇಳುತ್ತಾಳೆ. ಆಗ ಆತನು ಅದಕ್ಕೆ ನಯವಾಗಿ ಪ್ರತಿಕ್ರಿಯಿಸುತ್ತಾನೆ. ನಂತರ ಆಕೆಯು ಬೆಂಗಳೂರಿನಲ್ಲಿ ನಡೆಯುವ ಭಾಷಾ ಸಂಘರ್ಷದ ಬಗ್ಗೆ ಕೇಳುತ್ತಾಳೆ. ಅದಕ್ಕೆ ಪ್ರತಿಕ್ರಿಯಿಸಿದ ಆಟೋ ಡ್ರೈವರ್ ಕೆಲವರು ಮಧ್ಯಪಾನ ಮಾಡಿ ಆಕ್ರಮಣಕಾರರಾಗಿ ವರ್ತಿಸುತ್ತಾರೆ. ಜಗಳಗಳು ಹೀಗೆಯೆ ಆಗುತ್ತವೆ. ಇಲ್ಲದಿದ್ದರೆ ನಗರದಲ್ಲಿ ಯಾವುದೂ ಸಮಸ್ಯೆ ಇಲ್ಲ. ಎಲ್ಲರೂ ಶಾಂತಿಯಿಂದ ಬದುಕುತ್ತಾರೆ. ಇಲ್ಲಿ ಏನಾದರೂ ಸಂಭವಿಸಿದರೆ ಅದಕ್ಕೆ ಕಾರಣ ಮನೆಯಲ್ಲಿನ ವೈಯಕ್ತಿಕ ಸಮಸ್ಯೆಗಳು. ನಗರದೊಳಗೆ ಯಾವುದೆ ಸಮಸ್ಯೆ ಇಲ್ಲ. ಬೆಂಗಳೂರಿನಲ್ಲಿ ಎಲ್ಲವೂ ಪ್ರಥಮ ದರ್ಜೆಯದ್ದಾಗಿದೆ ಎಂಬ ಸಂಭಾಷಣೆಯನ್ನು ಕ್ಯಾತಿ ಶ್ರೀ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಕನ್ನಡ ಹಾಗೂ ಹಿಂದಿ ಭಾಷೆಯ ಸಂಘರ್ಷದ ಬಗ್ಗೆ ಯಾವಾಗಲೂ ಸುದ್ದಿ ಬರುತ್ತಿದೆ. ನಾನು ಕರ್ನಾಟಕದಲ್ಲಿ ಇದ್ದು, 4 ತಿಂಗಳುಗಳಾಗಿದೆ. ಬೆಂಗಳೂರು ಸುತ್ತ ಓಡಾಡಿದ್ದೇನೆ ನನಗೆ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ನಾನು ಹಲವಾರು ಕ್ಯಾಬ್ ಆಟೋದಲ್ಲಿ ಹಲವು ಬಾರಿ ಪ್ರಯಾಣ ಬೆಳೆಸಿದ್ದೇನೆ. ಆಹಾರ ಸೇವಿಸಿದ್ದೇನೆ. ನೀವು ಹಿಂದಿಯಲ್ಲಿ ಮಾತನಾಡುವ ವ್ಯಕ್ತಿಯಾಗಿದ್ದರೆ ಯಾರು ನಿಮ್ಮ ಬಗ್ಗೆ ಕಾಳಜಿ ವಹಿಸುವುದಿಲ್ಲ. ಹೀಗಾಗಿ ಇಂಗ್ಲಿಷ್ ತಿಳಿದುಕೊಳ್ಳುವುದು ಖಂಡಿತವಾಗಿಯೂ ಒಳ್ಳೆಯದು. ಇಲ್ಲಿ ಉತ್ತಮವಾಗಿ ಸಂವಹನ ನಡೆಸಲು ಸಹಾಯ ಮಾಡುತ್ತದೆ ಎಂದು ಕ್ಯಾತಿ ಶ್ರೀ ವ್ಯಕ್ತಪಡಿಸಿದ್ದಾರೆ