ಆಟೋ ಚಾಲಕನಿಂದ ಯುಪಿಐ ನಿರಾಕರಣೆ – ಹಣ ಪಾವತಿ ಮಾಡದೇ ಹೋದ ಪ್ರಯಾಣಿಕ

ಬೆಂಗಳೂರಿನಲ್ಲಿ ಈಗಾಗಲೇ ಆಟೋ ದರ ಭಾರಿ ದುಬಾರಿಯಾಗಿದೆ. 100 ಕೊಡಿ 200 ಕೊಡಿ, ಒಲಾ ಉಬರ್‌ನಲ್ಲಿ ಎಷ್ಟು ತೋರಿಸ್ತಿದೆ ಅಷ್ಟು ಕೊಡಿ ಅಂತ ಹೇಳುವವರೇ ಹೊರತು ಆಟೋ ಮೀಟರ್ ಆನ್ ಮಾಡುವ ಆಟೋ ಚಾಲಕರೊಬ್ಬರು ಕಣ್ಣಿಗೆ ಕಾಣುವುದಕ್ಕೂ ಇತ್ತೀಚೆಗೆ ಕಾಣ ಸಿಗುತ್ತಿಲ್ಲ. ಹೀಗಿರುವಾಗ ಆಟೋ ಚಾಲಕೊಬ್ಬರು ಯುಪಿಐ ಇಲ್ಲ ಓನ್ಲಿ ಕ್ಯಾಶ್ ಪೇ ಮಾಡಿ ಎಂದು ಪ್ರಯಾಣಿಕರೊಬ್ಬರಿಗೆ ಹೇಳಿದ್ದಾರೆ.

ಆದರೆ ಪೇ ಮಾಡುವುದಾದರೆ ಯಪಿಐ ಮಾತ್ರ ಕ್ಯಾಶ್ ಇಲ್ಲ ಎಂದು ಪ್ರಯಾಣಿಕ ಹಣ ನೀಡದೇ ಹೋಗಿದ್ದಾಗಿ ಹೇಳಿಕೊಂಡಿದ್ದಾನೆ. ಈತ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಹೇಳಿಕೊಂಡಿದ್ದು, ಈತನ ಪೋಸ್ಟ್ ಈಗ ಭಾರಿ ವೈರಲ್ ಆಗ್ತಿದೆ. ಪ್ರಯಾಣಿಕನ ಕೃತ್ಯಕ್ಕೆ ಪರ ವಿರೋಧ ಕೇಳಿ ಬರುತ್ತಿದೆ.
ರಾಜ್ಯದೆಲ್ಲೆಡೆ ಯುಪಿಐ ಮೂಲಕ 40 ಲಕ್ಷಕ್ಕಿಂತಲೂ ಅಧಿಕ ವ್ಯವಹಾರ ನಡೆಸಿದ ಅನೇಕ ಸಣ್ಣಪುಟ್ಟ ವ್ಯಾಪಾರಿಗಳಿಗೆ ಜಿಎಸ್ಟಿ ನೋಟೀಸ್ ಜಾರಿಯಾಗಿರುವುದರಿಂದ ಅನೇಕರು ಬೆಂಗಳೂರಿನಲ್ಲಿ ಅಂಗಡಿಗಳ ಮುಂದೆ ಇದ್ದ ಯುಪಿಐ ಸ್ಟಿಕ್ಕರ್‌ಗಳನ್ನು ಕಿತ್ತೆಸದಿದ್ದಾರೆ. ಅಲ್ಲದೇ ಸರಕಿಗೆ ಪ್ರತಿಯಾಗಿ ಯುಪಿಐ ಬದಲು ಬರೀ ಕ್ಯಾಶ್ ಮಾತ್ರ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಹೀಗಿರುವಾಗ ಆಟೋ ಚಾಲಕರು ಕೂಡ ಕೆಲವರು ಕ್ಯಾಶ್ ಮಾತ್ರ ತೆಗೆದುಕೊಳ್ಳುವುದು ಯುಪಿಐ ಇಲ್ಲ ಎಂದು ಹೇಳುತ್ತಿದ್ದಾರೆ. ಹೀಗೆ ಆಟೋ ಚಾಲಕರೊಬ್ಬರು ಪ್ರಯಾಣಿಕನಿಗೆ ಕ್ಯಾಶ್ ಕೊಡಿ ಯುಪಿಐ ಇಲ್ಲ ಎಂದು ಹೇಳಿದ್ದಾರೆ. ಆದರೆ ಪ್ರಯಾಣಿಕ ಯುಪಿಐ ಇದ್ದರೆ ಮಾತ್ರ ಪಾವತಿ ಮಾಡುವುದಾಗಿ ಹೇಳಿದ್ದಾರೆ.
ಈ ವೇಳೆ ಪ್ರಯಾಣಿಕನಿಗೂ ಆಟೋ ಚಾಲಕನಿಗೂ ವಾಗ್ವಾದ ಶುರುವಾಗಿದ್ದು, ತಾನು ಕ್ಯಾಶ್ ಇಲ್ಲದ ಕಾರಣ ಹಣ ಪಾವತಿ ಮಾಡದೇ ಹೋಗುತ್ತಿರುವುದಾಗಿ ಹೇಳಿದ್ದಾನೆ. ಈ ವೇಳೆ ಆಟೋ ಚಾಲಕ ಧೈರ್ಯ ಇದ್ದರೆ ಹೋಗು ಎಂದು ಪ್ರಯಾಣಿಕನಿಗೆ ಧಮ್ಕಿ ಹಾಕಿದ್ದಾನೆ. ಇದಕ್ಕೆ ಪ್ರಯಾಣಿಕ ಹಣ ಪಾವತಿ ಮಾಡದೇ ಹೋಗಿದ್ದಾಗಿ ಹೇಳಿಕೊಂಡಿದ್ದಾನೆ. ಈ ಪೋಸ್ಟ್ ರೆಡಿಟ್‌ನಲ್ಲಿ ನಂತರ ಭಾರಿ ವೈರಲ್ ಆಗಿದೆ.
ಅನೇಕರು ಆಟೋ ಚಾಲಕರಿಗೆ ಯುಪಿಐ ಕಡ್ಡಾಯ ಇಲ್ಲ, ನೀವು ಹಣ ನೀಡದೆ ಬಂದಿದ್ದು ತಪ್ಪು ಎಂದು ಪೋಸ್ಟ್ ಮಾಡಿದ ಪ್ರಯಾಣಿಕನನ್ನು ಟೀಕಿಸಿದ್ದಾರೆ.
ಇಂದು ಬೆಳಗ್ಗೆ ಆಟೋ ಚಾಲಕ ಯುಪಿಐ ನಿರಾಕರಿಸಿದರು. ನಾನು ನಗದು ಪಾವತಿಸುವುದಿಲ್ಲ ಎಂದು ಹೇಳಿದೆ. ಆತ ಸ್ವಲ್ಪ ಬೆದರಿಕೆ ಹಾಕಿದ. ನಾನು ಕ್ಯಾಶ್ ಪಾವತಿಗೂ ಮೊದಲೇ ಆತ ಆಪ್‌ನಲ್ಲಿ ಪ್ರಯಾಣಕ್ಕಾಗಿ ಹಣ ಪಾವತಿಸಲಾಗಿದೆ ಎಂದು ಗುರುತು ಮಾಡಿದ್ದ. ನಾನು ಯುಪಿಐಲಿ ಮಾತ್ರ ಹಣ ಪಾವತಿ ಮಾಡುವುದಾಗಿ ಹೇಳಿ ಅವನ ಜೊತೆಗಿನ ಸಂಭಾಷಣೆಯನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದೆ. ಅವನು ಯಾರಿಗೋ ಕರೆ ಮಾಡಿ ಏನು ಮಾಡಬೇಕೆಂದು ಕೇಳಿದ. ಆತನೊಂದಿಗೆ ಫೋನ್‌ನಲ್ಲಿದ್ದ ವ್ಯಕ್ತಿ ನನ್ನೊಂದಿಗೆ ಮಾತನಾಡಲು ಕೇಳಿದ. ನಾನು ಯಾವುದೇ ಬೇರೆ ವ್ಯಕ್ತಿಯೊಂದಿಗೆ ಮಾತನಾಡುವುದಿಲ್ಲ ಎಂದು ಹೇಳಿದೆ. QR ಕೋಡ್ ಅಥವಾ ಮೊಬೈಲ್ ಸಂಖ್ಯೆಯನ್ನು ತೋರಿಸಿ ಹಣ ಪಾವತಿ ಮಾಡುತ್ತೇನೆ ಅಥವಾ ಹೊರಟು ಹೋಗುತ್ತಿದ್ದೇನೆ ಎಂದು ಹೇಳಿದೆ. ಆತ, ಧೈರ್ಯವಿದ್ದರೆ ಹೊರಟು ಹೋಗು ಎಂದು ಹೇಳಿದ.. ನಾನು ಹೊರಟು ಬಂದೆ ಎಂದು ವ್ಯಕ್ತಿ ತನ್ನ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾನೆ.
ಆದರೆ ಬಡ ಆಟೋ ಚಾಲಕನಿಗೆ ಹಣ ಪಾವತಿ ಮಾಡದೇ ಏಕೆ ಬಂದೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಈತನ ಪೋಸ್ಟ್‌ನ್ನು ಒಂದು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ನೀವು ಆಪ್‌ನಲ್ಲಿ ಬುಕ್ ಮಾಡಿದಾಗ ನಗದು ಎಂದು ಬರೆದಿತ್ತೋ ಅಥವಾ UPI ಎಂದು ಬರೆದಿತ್ತೋ?
ಕನಿಷ್ಠ ಉಬರ್‌ನಲ್ಲಿ ಬುಕಿಂಗ್ ಮಾಡುವ ಮೊದಲು ಪಾವತಿ ವಿಧಾನವನ್ನು ಆಯ್ಕೆ ಮಾಡಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಕೆಲವರು ಈತ ನಡೆದಿಲ್ಲದ ಕತೆ ಹೇಳ್ತಿದ್ದಾನೆ ಎಂದಿದ್ದು ರೆಕಾರ್ಡ್ ಮಾಡಿದ ವೀಡಿಯೋವನ್ನು ಕೂಡ ಜೊತೆಗೆ ಪೋಸ್ಟ್ ಮಾಡುವಂತೆ ಆಗ್ರಹಿಸಿದ್ದಾರೆ. ಈ ಬಗ್ಗೆ ನಿಮಗೇನನಿಸ್ತಿದೆ ಕಾಮೆಂಟ್ ಮಾಡಿ.