ಆಟೋ ಚಾಲಕನಿಗೆ ಹಲ್ಲೆ, ನಿಂದನೆ: ವಿಡಿಯೋ ವೈರಲ್ ಬೆನ್ನಲ್ಲೇ ಪುತ್ತೂರಿನ ಇಬ್ಬರು ಟ್ರಾಫಿಕ್ ಪೊಲೀಸರ ಅಮಾನತು; ಎಸ್ಪಿ ಅರುಣ್ ಕುಮಾರ್ ಆದೇಶ

ಪುತ್ತೂರು: ಆಟೋ ಚಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿರುವ ಇಬ್ಬರು ಟ್ರಾಫಿಕ್ ಪೊಲೀಸರನ್ನು ದಕ್ಷಿಣಕನ್ನಡ ಜಿಲ್ಲಾ ಎಸ್ಪಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಪುತ್ತೂರಿನ ಫಿಲೋಮಿನಾ ಕಾಲೇಜು ಬಳಿ ನಿನ್ನೆ ಈ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನಿನ್ನೆ ಸಂಜೆ ಆಟೋ ಚಾಲಕ ಬಶೀರ್ ಎಂಬವರು ಸಮವಸ್ತ್ರ ಧರಿಸಿದೇ ಆಟೋ ಚಲಾಯಿಸಿಕೊಂಡು ಬಂದಿದ್ದಾರೆ. ಈ ವೇಳೆ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪುತ್ತೂರು ಸಂಚಾರ ಪೊಲೀಸ್ ಠಾಣಾ ಎಎಸ್ಐ ಚಿದಾನಂದ ರೈ, ಮತ್ತು ,ಸಿಪಿಸಿ ಶ್ರೀ ಶೈಲ ಎಂ ಕೆ ಎಂಬುವರು ಆಟೋವನ್ನು ನಿಲ್ಲಿಸಲು ಸೂಚಿಸಿದ್ದಾರೆ. ಆದರೆ ಆಟೋ ಚಾಲಕ ಗಾಡಿ ನಿಲ್ಲಿಸದೆ ವೇಗವಾಗಿ ಹೋಗಿದ್ದಾನೆ. ಈ ವೇಳೆ ವಾಹನವನ್ನು ಹಿಂಬಾಲಿಸಿದ ಇಬ್ಬರು ಟ್ರಾಫಿಕ್ ಪೊಲೀಸ್ ಸಿಬ್ಬಂದಿ ವಾಹನ ನಿಲ್ಲಿಸಿ ಆಟೋ ಡ್ರೈವರ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ಹಲ್ಲೆ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ವೈರಲ್ ಆಗಿತ್ತು. ಇದೀಗ ಚಿದಾನಂದ ರೈ, ಎ.ಎಸ್.ಐ ಮತ್ತು ಸಿಪಿಸಿ ಶ್ರೀ ಶೈಲ ಎಂ ಕೆ ರವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ ಎಂದು ಎಸ್ಪಿಅರುಣ್ ಕುಮಾರ್ ತಿಳಿಸಿದ್ದಾರೆ.