ಆಸ್ಟ್ರೇಲಿಯಾದ ಮೊದಲ ದೇಶೀಯ ರಾಕೆಟ್ 14 ಸೆಕೆಂಡಿನಲ್ಲಿ ಪತನ

ಸಿಡ್ನಿ: ಆಸ್ಟ್ರೇಲಿಯಾದ ಮೊದಲ ದೇಶೀಯ ನಿರ್ಮಿತ ರಾಕೆಟ್ ಉಡಾವಣೆಯಾದ ಕೇವಲ 14 ಸೆಕೆಂಡುಗಳಲ್ಲಿ ಪತನಗೊಂಡಿದೆ. ಗಿಲ್ಮೋರ್ ಸ್ಪೇಸ್ ಟೆಕ್ನಾಲಜೀಸ್ ಅಭಿವೃದ್ಧಿಪಡಿಸಿದ ಎರಿಸ್ ರಾಕೆಟ್ ಅನ್ನು ನಿನ್ನೆ ಆಸ್ಟ್ರೇಲಿಯಾದ ಉತ್ತರ ಕ್ವೀನ್ಸ್‌ಲ್ಯಾಂಡ್‌ನ ಬೋವೆನ್ ಬಳಿಯ ಬಾಹ್ಯಾಕಾಶ ನಿಲ್ದಾಣದಿಂದ ಪರೀಕ್ಷಾರ್ಥ ಉಡಾವಣೆ ಮಾಡಲಾಯ್ತು.

ಅಪಾರ ಪ್ರಮಾಣದ ಮಾಹಿತಿಯನ್ನು ನಾವು ಕಲಿತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಅಲ್ಲದೇ ಕಂಪನಿಯು ಈ ಉಡಾವಣೆಯನ್ನು ಯಶಸ್ಸು ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಬಣ್ಣಿಸಿದೆ. ಮೊದಲ ಉಡಾವಣೆಯಲ್ಲಿ ನಾಲ್ಕು ಹೈಬ್ರಿಡ್ ಎಂಜಿನ್‌ಗಳು ಉರಿಯಿತು, 23 ಸೆಕೆಂಡುಗಳಲ್ಲಿ ಎಂಜಿನ್ ಸುಟ್ಟುಹೋಯಿತು ಮತ್ತು 14 ಸೆಕೆಂಡುಗಳ ಹಾರಾಟವನ್ನು ಸಾಧಿಸಿತು ಎಂದು ಅವರು ಹೇಳಿಕೊಂಡಿದ್ದಾರೆ. ಗಿಲ್ಮೋರ್ ಸ್ಪೇಸ್ ಟೆಕ್ನಾಲಜೀಸ್ ಈ ಹಿಂದೆ ಮೇ ತಿಂಗಳಲ್ಲಿ ಮತ್ತು ಈ ತಿಂಗಳ ಆರಂಭದಲ್ಲಿ ರಾಕೆಟ್ ಉಡಾವಣೆಗಳನ್ನು ನಿಗದಿಪಡಿಸಿತ್ತು, ಆದರೆ ತಾಂತ್ರಿಕ ಸಮಸ್ಯೆಗಳು ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಈ ಎರಡು ಕಾರ್ಯಗಳನ್ನು ಮುಂದೂಡಿತ್ತು.
