ಕನ್ನಡದಲ್ಲಿ ನಿರರ್ಗಳವಾಗಿ ಮಾತನಾಡಿ ಗಮನ ಸೆಳೆದ ಆಸ್ಟ್ರೇಲಿಯಾದ ವ್ಯಕ್ತಿ!

ನಮ್ಮಲ್ಲಿ ಅನೇಕರಿಗೆ ಕನ್ನಡ (Kannada) ಮಾತನಾಡಲು ಗೊತ್ತಿದ್ದರೂ ಇಂಗ್ಲಿಷ್ ಭಾಷೆಯ ವ್ಯಾಮೋಹದಿಂದ ಈ ಭಾಷೆ ಮಾತನಾಡಲು ಹಿಂಜರಿಯುತ್ತಾರೆ. ಹೀಗಿರುವಾಗ ವಿದೇಶಿಗರು ಕನ್ನಡ ಭಾಷೆ ಮಾತನಾಡಲು ಪ್ರಯತ್ನಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಅವರ ಬಾಯಿಯಿಂದ ಕನ್ನಡ ಪದಗಳನ್ನು ಕೇಳುವುದೇ ಕಿವಿಗೆ ಇಂಪೆನಿಸುತ್ತದೆ.

ಇದೀಗ ನಿರರ್ಗಳವಾಗಿ ಕನ್ನಡ ಮಾತನಾಡುವ ಆಸ್ಟ್ರೇಲಿಯಾದ ವ್ಯಕ್ತಿಯ (Australian) ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋಗೆ ನೆಟ್ಟಿಗರಿಂದ ಮೆಚ್ಚುಗೆಗಳು ಹರಿದು ಬಂದಿದೆ.
ವಿದೇಶಿಗನ ಕನ್ನಡ ಪ್ರೀತಿ
sahana gowda ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಆಸ್ಟ್ರೇಲಿಯಾದ ವ್ಯಕ್ತಿಯೂ ಸಲೀಸಾಗಿ ಕನ್ನಡ ಮಾತನಾಡುತ್ತಿರುವುದನ್ನು ಕಾಣಬಹುದು. ದೇವಾಲಯದ ಕ್ಯಾಂಟೀನ್ನಂತೆ ಕಾಣುವ ಸ್ಥಳದಲ್ಲಿ ಚಿತ್ರೀಕರಿಸಲಾದ ಈ ವೀಡಿಯೊ ಇದಾಗಿದೆ. ವಿದೇಶಿಗನು ಗ್ರಾಹಕರಿಂದ ಆರ್ಡರ್ ತೆಗೆದುಕೊಳ್ಳುವುದನ್ನು ತೋರಿಸಲಾಗಿದೆ. ಈ ವೇಳೆ ಗ್ರಾಹಕರೊಬ್ಬರು ಯಾವೆಲ್ಲಾ ಭಾಷೆ ಮಾತನಾಡಲು ಬರುತ್ತದೆ ಎಂದು ಕೇಳಿದ್ದಾರೆ. ಈ ವೇಳೆ ವಿದೇಶಿಗ ಹಿಂದಿ, ತಮಿಳು, ತೆಲುಗು, ಕನ್ನಡ, ಇಂಗ್ಲಿಷ್ ಭಾಷೆ ಹೀಗೆ ತನಗೆ ಗೊತ್ತಿರುವ ಭಾಷೆಗಳ ಲಿಸ್ಟ್ ನ್ನು ಹೇಳುತ್ತಾರೆ. ಆ ಬಳಿಕ ಅದೇ ವ್ಯಕ್ತಿಯಿಂದ ಆರ್ಡರ್ ತೆಗೆದುಕೊಂಡು ಏನೆಲ್ಲಾ ಐಟಂ ಆರ್ಡರ್ ಮಾಡಿದ್ದೀರಾ ಎಂದು ಆಸ್ಟ್ರೇಲಿಯಾದ ವ್ಯಕ್ತಿ ಕನ್ನಡದಲ್ಲೇ ಹೇಳಿದ್ದಾರೆ.