ಉಡುಪಿ: ಖಾಸಗಿ ಬಸ್ಸಿನ ಸ್ಟಿಯರಿಂಗ್ ಕಟ್ – ರಸ್ತೆ ಸಂಚಾರಕ್ಕೆ ಅಡಚಣೆ

ಉಡುಪಿ: ಕರಾವಳಿ ಬೈಪಾಸ್ ಸಮೀಪ ಶುಕ್ರವಾರ ರಾತ್ರಿ ಖಾಸಗಿ ಬಸ್ಸಿನ ಸ್ಟಿಯರಿಂಗ್ ಕಟ್ಟಾಗಿದ್ದು, ಕೆಲ ಹೊತ್ತುಗಳ ಕಾಲ ಟ್ರಾಫಿಕ್ ಸಮಸ್ಯೆ ಉಂಟಾಯಿತು. ಉಡುಪಿ ಕಡೆಯಿಂದ ಬ್ರಹ್ಮಾವರಕ್ಕೆ ತೆರಳುತ್ತಿದ್ದ ಬಸ್ಸಿನಲ್ಲಿ ಈ ತಾಂತ್ರಿಕ ತೊಂದರೆ ಉಂಟಾಗಿದ್ದು, ಪ್ರಯಾಣಿಕರು ಮತ್ತು ಸ್ಥಳೀಯರು ಆತಂಕಕ್ಕೊಳಗಾದರು.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಸಹಾಯಕ್ಕೆ ಧಾವಿಸಿ, ಬಸ್ಸನ್ನು ನಿಯಂತ್ರಣಕ್ಕೆ ತರಲು ಸಹಕರಿಸಿದರು. ಸುಧಾರಿತ ಕ್ರಮಗಳಿಂದ ಯಾವುದೇ ಅಪಾಯ ಸಂಭವಿಸದೆ ಪ್ರಯಾಣಿಕರು ಸುರಕ್ಷಿತವಾಗಿ ಉಳಿದರು. ನಗರ ಸಂಚಾರ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿ, ವಾಹನಗಳ ಓಡಾಟವನ್ನು ಸುಗಮಗೊಳಿಸಿದರು. ಕೆಲ ಸಮಯದ ಅಡಚಣೆಯ ಬಳಿಕ ಪರಿಸ್ಥಿತಿ ನಿಯಂತ್ರಿತವಾಗಿ, ರಸ್ತೆ ಸಂಚಾರ ಪುನಃ ಆರಂಭವಾಯಿತು.