ಶಸ್ತ್ರಸಜ್ಜಿತ ಗೂಂಡಾಗಳಿಂದ ಪಾಕಿಸ್ತಾನದ ಮಸೀದಿಯೊಳಗೆ ಐಎಸ್ಐ ಏಜೆಂಟ್ ಮೇಲೆ ಹಲ್ಲೆ

ಟರ್ಬತ್: ಧಾರ್ಮಿಕ ಪಂಡಿತ ಮತ್ತು ಜೆಯುಐ-ಎಫ್ ನಾಯಕ ಮುಫ್ತಿ ಶಾಹ್ ಮೀರ್ ಮೇಲೆ ಶಸ್ತ್ರಸಜ್ಜಿತ ಗೂಂಡಾಗಳು ಹಲ್ಲೆ ನಡೆಸಿದ ಘಟನೆ ನಡೆದಿದೆ. ರಾತ್ರಿ ಪ್ರಾರ್ಥನೆಯ ಬಳಿಕ ಹೊರಬರುತ್ತಿದ್ದ ವೇಳೆ ಮೋಟಾರುಸೈಕಲ್ ಸವಾರರಾಗಿದ್ದ ಗೂಂಡಾಗಳು ಗುಂಡು ಹಾರಿಸಿ ತೀವ್ರವಾಗಿ ಗಾಯಗೊಳಿಸಿದರು. ತಕ್ಷಣ ಅವರನ್ನು ಟರ್ಬತ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಗಾಯದ ತೀವ್ರತೆಗೆ ಒಳಗಾಗಿದ್ದ ಅವರು ಅಲ್ಲಿ ಮೃತಪಟ್ಟರು.

ಮುಫ್ತಿ ಶಾಹ್ ಮೀರ್ ಅವರು ಜೆಯುಐ-ಎಫ್ (JUI-F) ಗೆ ಆಪ್ತರಾಗಿದ್ದರು ಮತ್ತು ಅವರ ಮೇಲೆ ಹಿಂದೆಯೂ ಎರಡು ಬಾರಿ ಹಲ್ಲೆ ನಡೆದಿತ್ತು, ಆದರೆ ಅವರು ಅದರಿಂದ ಪಾರಾಗಿದ್ದರು. ಈ ದಾಳಿ ಖುಝ್ದಾರ್‌ನಲ್ಲಿ ಜೆಯುಐ-ಎಫ್‌ನ ಇಬ್ಬರು ನಾಯಕರ ಹತ್ಯೆಗೊಳಗಾದ ಕೆಲವೇ ದಿನಗಳ ಬಳಿಕ ನಡೆದಿದೆ, ಇದರಿಂದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ.
ಪೊಲೀಸರು ಈ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದು, ದಾಳಿಕೋರರ ಗುರುತಿಸಲು ಮತ್ತು ಅವರ ಹಿಂದಿನ ಉದ್ದೇಶವನ್ನು ಪತ್ತೆಹಚ್ಚಲು ಶೋಧ ಕಾರ್ಯ ಕೈಗೊಂಡಿದ್ದಾರೆ. ಈ ದಾಳಿಯಿಂದ ಭಯದ ವಾತಾವರಣ ಉಂಟಾಗಿದ್ದು, ಸ್ಥಳೀಯರು ಕಠಿಣ ಭದ್ರತೆ ಒದಗಿಸುವಂತೆ ಆಡಳಿತವನ್ನು ಒತ್ತಾಯಿಸಿದ್ದಾರೆ.
